ಮಕ್ಕಳಿಗೆ ಗುಣಾತ್ಮಕವಾದ ಶಿಕ್ಷಣ ನೀಡುವ ಕಡೆಗೆ ಶಿಕ್ಷಕರು ಗಮನ ಹರಿಸಿ- ಸಚಿವ ಎಚ್.ಆಂಜನೇಯ

ಕೊಪ್ಪಳ – ಕಾಳಿದಾಸ ಶಿಕ್ಷಣ ಸಂಸ್ಥೆಯ ಅಭಿವೃದ್ದಿಗೆ ಶ್ರಮಿಸುವುದಾಗಿ ಸಮಾಜ ಕಲ್ಯಾಣ ಸಚಿವರಾದ ಎಚ್.ಆಂಜನೇಯ ಹೇಳಿದರು.

ಅವರು ನಗರದ ಕುಷ್ಟಗಿ ರಸ್ತೆಯಲ್ಲಿರುವ ಕಾಳಿದಾಸ ಶಿಕ್ಷಣ ಸಂಸ್ಥೆಗೆ ಭೇಟಿ ನೀಡಿ ಮಾತನಾಡುತ್ತ,ಕಾಳಿದಾಸ ಶಿಕ್ಷಣ ಸಂಸ್ಥೆಯು ಹಳೆಯ ಶಿಕ್ಷಣ ಸಂಸ್ಥೆಯಾಗಿದೆ.ಈ ಶಿಕ್ಷಣ ಸಂಸ್ಥೆಯಲ್ಲಿ ಹೆಚ್ಚಿನ ವಿದ್ಯಾರ್ಥಿಗಳು ಅಭ್ಯಾಸ ಮಾಡುತ್ತಿರುವುದರಿಂದ  ಭೌತೀಕ ಸೌಲಭ್ಯ ಅವಶ್ಯಕತೆಗಳ ಬಗ್ಗೆ ಮಾಹಿತಿ ಪಡೆಯಲಾಗಿದ್ದು,ಸಂಸ್ಥೆಯ ಅಭಿವೃದ್ದಿಗೆ ಸರ್ಕಾರದಿಂದ ಹೆಚ್ಚಿನ ಅನುದಾನ ನೀಡುವುದರ ಜೊತೆಗೆ ಶಿಕ್ಷಣ ಸಂಸ್ಥೆಯ ಅಭಿವೃದ್ದಿಗೆ ಪ್ರಾಮಾಣಿಕ ಪ್ರಯತ್ನ ಮಾಡುಲಾಗುವುದು.ಮಕ್ಕಳಿಗೆ ಗುಣಾತ್ಮಕವಾದ ಶಿಕ್ಷಣ ನೀಡುವ ಕಡೆಗೆ ಶಿಕ್ಷಕರು ಹಾಗೂ ಆಡಳಿತ ಮಂಡಳಿ ಹೆಚ್ಚಿನ ಗಮನ ಹರಿಸಿ ಶೈಕ್ಷಣಿಕ ಅಭಿವೃದ್ದಿಗೆ ಪ್ರತಿಯೊಬ್ಬರು ಶ್ರಮಿಸಬೇಕು ಎಂದು ಹೇಳಿದರು. ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಮಾತನಾಡಿ,ಕಾಳಿದಾಸ ಶಿಕ್ಷಣ ಸಂಸ್ಥೆಯು ಉತ್ತಮ ಸಂಸ್ತೆಯಾಗಿ ಕಾರ್ಯನಿರ್ವಹಿಸುತ್ತಿದ್ದು,ಇದೇ ರೀತಿಯಲ್ಲಿ ತನ್ನ ಕಾರ್ಯವನ್ನು ಮುಂದುವರೆಸಬೇಕು.ಸಂಸ್ಥೆಯ ಏಳಿಗಾಗಿ ಶಾಸಕರ ಅನುದಾನದಲ್ಲಿ ಹಣವನ್ನು ಮೀಸಲಿಡಲಾಗುವುದು ಎಂದು ಹೇಳಿದರು.  ಕಾರ್ಯಕ್ರಮದಲ್ಲಿ ನಗರಸಭೆಯ ಅಧ್ಯಕ್ಷರಾದ ಮಹೇಂದ್ರ ಚೋಪ್ರಾ,ಮುತ್ತುರಾಜ ಕುಷ್ಟಗಿ, ಅಧ್ಯಕ್ಷರಾದ ಹನುಮಂತಪ್ಪ ,ಗೌರಾವಾಧ್ಯಕ್ಷರಾದ ಬಸವರಾಜ ಹಿಟ್ನಾಳ,ಕಾರ್ಯದರ್ಶಿ ಗವಿಸಿದ್ದಪ್ಪ ಹಿಟ್ನಾಳ, ಅಂದಪ್ಪ ಮೊರಬಾಳ, ಮಂಜುನಾಥ ಅಬ್ಬಿಗೇರಿ, ಬೀರಪ್ಪ ಅಂಡಗಿ ಚಿಲವಾಡಗಿ, ಬಿ.ಎಫ್.ಬೀರನಾಯ್ಕರ್,ಗವಿಸಿದ್ದಪ್ಪ ಪೂಜಾರ,ಬಸವರಾಜ ಬೀಮನೂರು,ಶಿವಾನಂದ ಯಲ್ಲಮ್ಮನ್ನವರ್, ಕಾಲೇಜಿನ ಪ್ರಾಚಾರ್ಯರಾದ ನಾಗಗೌಡ ಜುಮ್ಮನ್ನವರ್,ಪ್ರೌಢ ಶಾಲೆಯ ಮುಖ್ಯೋಪಾಧ್ಯಾಯರಾದ ಗುರುವಿನ್,ವಿಶ್ವನಾಥ ಅಂಗಡಿ ಮುಂತಾದವರು ಹಾಜರಿದ್ದರು.

Leave a Reply