ಭಾರತದ ಸ್ವಾತಂತ್ರ್ಯ ಹೋರಾಟದ ಇತಿಹಾಸ ಬಲ್ಲವರಿಗಷ್ಟೇ ಸ್ವಾತಂತ್ರ್ಯದ ಮಹತ್ವ ಅರಿಯಲು ಸಾಧ್ಯ- ಕರಡಿ ಸಂಗಣ್ಣ

????????????????????????????????????

ಕೊಪ್ಪಳ-ಆ.18 (ಕ ವಾ): . ಸ್ವಾತಂತ್ರ್ಯ ಹೋರಾಟದ ಇತಿಹಾಸವೇ ದೇಶಪ್ರೇಮಕ್ಕೆ ಸ್ಪೂರ್ತಿ ಇತಿಹಾಸ ಹೊಂದಿರುವ ಸ್ವಾತಂತ್ರ್ಯ ಹೋರಾಟದ ಚಳವಳಿ ಪ್ರತಿಯೊಬ್ಬರಲ್ಲಿ ದೇಶಪ್ರೇಮ ಮೂಡಲು ಸ್ಪೂರ್ತಿದಾಯಕವಾಗಿದೆ ಎಂದು ಕೊಪ್ಪಳ ಸಂಸದ ಕರಡಿ ಸಂಗಣ್ಣ ಅವರು ಹೇಳಿದರು. ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಬಳ್ಳಾರಿ-ಕಲ್ಬುರ್ಗಿ ವತಿಯಿಂದ ಜಿಲ್ಲಾ ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ, ನೆಹರು ಯುವ ಕೇಂದ್ರ, ಖಾದಿ ಮತ್ತು ಗ್ರಾಮೋದ್ಯೋಗ ಇಲಾಖೆ, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಸಂಸ್ಥೆ ಮತ್ತು ಸರಕಾರಿ ಬಾಲಕರ ಪ.ಪೂ ಕಾಲೇಜು (ಪ್ರೌಢಶಾಲಾ ವಿಭಾಗ) ಇವರುಗಳ ಸಂಯುಕ್ತಾಶ್ರಯದಲ್ಲಿ ಸ್ವಾತಂತ್ರ್ಯದ 70ನೇ ವರ್ಷಾಚರಣೆ ಅಂಗವಾಗಿ ಸರಕಾರಿ ಬಾಲಕರ ಪ.ಪೂ ಕಾಲೇಜು ಆವರಣದಲ್ಲಿ ಗುರುವಾರದಂದು ಏರ್ಪಡಿಸಲಾಗಿದ್ದ ಹುತಾತ್ಮರ ಸ್ಮರಣೆ (ಆಜಾದಿ 70 ಯಾದ್‌ಕರೋ ಖುರ್‌ಬಾನಿ) ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.ಭಾರತಕ್ಕೆ ೧೯೪೭ ರ ಆಗಸ್ಟ್ ೧೫ ರಂದು ದೊರೆತ ಸ್ವಾತಂತ್ರ್ಯ, ಸುಲಭವಾಗಿ ಬಂದಿದ್ದಲ್ಲ. ಅದರ ಹಿಂದೆ ಕೊಟ್ಯಾಂತರ ಜನರ, ಹುತಾತ್ಮರ ದೇಶಪ್ರೇಮ, ತ್ಯಾಗ ಮತ್ತು ಬಲಿದಾನದ ಶ್ರಮ ಅಡಗಿದೆ. ಈ ಎಲ್ಲ ದೇಶಪ್ರೇಮಿಗಳು, ಹುತಾತ್ಮರನ್ನು ಸ್ಮರಿಸುವುದು ಇಂದಿನ ಸ್ವತಂತ್ರ ಭಾರತದ ಪ್ರತಿಯೊಬ್ಬ ಪ್ರಜೆಯ ಆದ್ಯ ಕರ್ತವ್ಯವಾಗಿದೆ. ಸ್ವಾತಂತ್ರ್ಯ ಹೋರಾಟಗಾರರನ್ನು ಸ್ಮರಿಸುವ ರೀತಿಯಲ್ಲಿಯೇ, ನಮ್ಮ ದೇಶದ ಗಡಿ ಕಾಯುವ ಸೈನಿಕರನ್ನೂ ಸಹ ನಾವು ಸ್ಮರಿಸುವ ಜೊತೆಗೆ ಅವರನ್ನು ಗೌರವಿಸಬೇಕಿದೆ. ನೆರೆ ರಾಷ್ಟ್ರಗಳಿಂದ ನಮ್ಮ ದೇಶಕ್ಕೆ ಯಾವತ್ತೂ ಆತಂಕವಿದ್ದೇ ಇದೆ. ತಮ್ಮ ಬಂಧು ಬಾಂಧವರು, ಕುಟುಂಬದಿಂದ ದೂರ ಉಳಿದು, ದೇಶ ಹಿತಕಾಯಲು ಗಡಿಯಲ್ಲಿ ಕರ್ತವ್ಯ ನಿರ್ವಹಿಸುತ್ತಿದ್ದಾರೆ ನಮ್ಮ ಸೈನಿಕರು. ರಕ್ಷಣೆಯ ವಿಷಯದಲ್ಲಿ ಜಗತ್ತಿನ ಜೊತೆಗೆ ಸ್ಪರ್ಧಾತ್ಮಕವಾಗಿ ತೊಡಗಿಸಿಕೊಳ್ಳುವ ಜೊತೆಗೆ ಬಲಿಷ್ಠರೂ ಆಗಬೇಕಿದೆ. ರಾಷ್ಟ್ರಕ್ಕೆ ನಮ್ಮ ಕೊಡುಗೆ ಏನು? ಎಂಬುದರ ಆತ್ಮಾವಲೋಕವನ್ನು ಎಲ್ಲರೂ ಮಾಡಿಕೊಳ್ಳಬೇಕಿದೆ. ಸ್ವಾತಂತ್ರ್ಯದ ಮಹತ್ವ ಹಾಗೂ ದೇಶಾಭಿಮಾನ ಬೆಳೆಸಿಕೊಳ್ಳಲು ಇಂತಹ ಕಾರ್ಯಕ್ರಮಗಳು ನಮ್ಮ ಸಮಾಜಕ್ಕೆ, ಯುವಜನತೆಗೆ ಬೇಕಿದೆ. ದೇಶ ಪ್ರೇಮ, ಮಾನವೀಯತೆಯ ಗುಣವನ್ನು ಮೇಳೈಸಿಕೊಳ್ಳುವುದರ ಜೊತೆಗೆ ಭಾವೈಕ್ಯತೆ, ಜಾತ್ಯತೀತ ಮನೋಭಾವವನ್ನು ನಾವು ಬೆಳೆಸಿಕೊಂಡಾಗ ಮಾತ್ರ ಸದೃಢ ಭಾರತ ದೇಶ ಕಟ್ಟಲು ಸಾಧ್ಯ ಎಂದು ಸಂಸದ ಕರಡಿ ಸಂಗಣ್ಣ ಅವರು ಹೇಳಿದರು.ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ಪ್ರಾದೇಶಿಕ ನಿರ್ದೇಶಕ ಕೆ. ಬೂದಪ್ಪಗೌಡ, ಜಿಲ್ಲಾ ವಾರ್ತಾಧಿಕಾರಿ ತುಕಾರಾಂರಾವ್ ಬಿ.ವಿ., ಜಿಲ್ಲಾ ಖಾದಿ ಗ್ರಾಮೋದ್ಯೋಗ ಅಧಿಕಾರಿ ಪ್ರಕಾಶ್ ಡೊಂಗರೆ, ಸರ್ಕಾರಿ ಪ.ಪೂ. ಕಾಲೇಜು (ಪ್ರೌಢಶಾಲೆ ವಿಭಾಗ) ಉಪಪ್ರಾಚಾರ್ಯ ಬಸವರಾಜ ದೊಡ್ಡಮನಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡಿದ್ದರು. ಬಳ್ಳಾರಿ ಕ್ಷೇತ್ರ ಪ್ರಚಾರ ನಿರ್ದೇಶನಾಲಯ ಸಹಾಯಕ ನಿರ್ದೇಶಕ ಜಿ.ಡಿ. ಹಳ್ಳಿಕೇರಿ ಸ್ವಾಗತಿಸಿ, ಪ್ರಾಸ್ತಾವಿಕ ಮಾತನಾಡಿದರು. ಕ್ಷೇತ್ರ ಪ್ರಚಾರ ಸಹಾಯಕ ರಾಮಕೃಷ್ಣ ಕಾರ್ಯಕ್ರಮ ನಿರೂಪಿಸಿದರು.

Please follow and like us:
error