ಬೈಸಿಕಲ್ ವಿತರಣಾ ಸಮಾರಂಭ

ಕೊಪ್ಪಳ : ಜಗತ್ತು ಸ್ಪರ್ಧಾತ್ಮಕವಾಗಿದ್ದು ಯಶಸ್ಸು ಗಳಿಸಬೇಕಾದರೆ ಕಠಿಣ ಪರಿಶ್ರಮ ಹಾಗೂ ಆತ್ಮ ವಿಶ್ವಾಸ ಬೆಳೆಸಿಕೊಳ್ಳುವುದು ಅವಶ್ಯಕ. ಬಡ ವಿದ್ಯಾರ್ಥಿಗಳಿಗಾಗಿ ಸರ್ಕಾರ ಅನೇಕ ಸವಲತ್ತುಗಳನ್ನು ನಿಡುತ್ತಿದ್ದು ಅವುಗಳನ್ನು ಸದ್ಬಳಕೆ ಮಾಡಿಕೊಂಡು ಯಶಸ್ಸು ಗಳಿಸಬೇಕು. ವಿದ್ಯಾಭ್ಯಾಸಕ್ಕೆ ನಮ್ಮ ಸಮಸ್ಯೆಗಳನ್ನೆ ದೊಡ್ಡದು ಮಾಡಿಕೊಳ್ಳದೆ ಇರುವ ವ್ಯವಸ್ಥೆಯಲ್ಲಿಯೇ ಓದಿ ಕೀರ್ತಿ ಗಳಿಸಿದ ಅನೇಕ ಮಹಾನೀಯರ  ಉದಾಹರಣೆಗಳು ನಮ್ಮ ಮುಂದಿದ್ದು ಅವರ ಮಾದರಿಯಲ್ಲಿಯೇ ಸಾಗಿ ಹೆತ್ತವರಿಗೆ, ಶಾಲೆಗೆ, ಹಾಗೂ ಗ್ರಾಮಕ್ಕೆ ಉತ್ತಮ ಹೆಸರು ತರುವಂತೆ ಕೊಪ್ಪಳ ಜೀವ ವಿಮಾ ನಿಗಮದ ಅಭಿವೃದ್ದಿ ಅಧಿಕಾರಿಗಳಾದ ಶ್ರೀ ಚೇತನ ಕುಮಾರ್ ಇವರು ವಿದ್ಯಾರ್ಥಿಗಳಿಗೆ ಕರೆ ನೀಡಿದರು.
ಇರಕಲ್ಲಗಡ ಸರ್ಕಾರಿ ಪ್ರೌಢಶಾಲೆಯಲ್ಲಿ ೮ ನೇ ತರಗತಿಯ ವಿದ್ಯಾರ್ಥಿಗಳಿಗೆ ಉಚಿತ ಬೇಸಿಕಲ್ ವಿತರಣಾ ಸಮಾರಂಭದಲ್ಲಿ ಮುಖ್ಯ ಅತಿಥಿಗಳಾಗಿ ಮಾತನಾಡಿದ ಅವರು ಜೀವ ವಿಮಾ ನಿಗಮದಿಂದ ಪ್ರತಿ ವರ್ಷ ಒಂದೊಂದು ಶಾಲೆಯನ್ನು ಆಯ್ದುಕೊಂಡು ಕಳೆದ ವರ್ಷದಲ್ಲಿ ಅತಿ ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ನಿಡುತ್ತಾ ಬಂದಿದ್ದು ಈ ವರ್ಷ ಈ ಶಾಲೆಯನ್ನು ಆಯ್ಕೆ ಮಾಡಲಾಗಿದೆ ಎಂದರು. ಈ ಸಮಾರಂಭದಲ್ಲಿ ೪ ವಿದ್ಯಾರ್ಥಿಗಳಿಗೆ ಪಾರಿತೋಷಕ ನೀಡಿ ಗೌರವಿಸಲಾಯಿತು. ಹಾಗೂ ವಿದ್ಯಾರ್ಥಿಗಳಿಗೆ ಬೈಸಿಕಲ್ ವಿತರಿಸಲಾಯಿತು. cycle1ಕಾರ್ಯಕ್ರಮದ ಅಧ್ಯಕ್ಷತೆಯನ್ನು ಎಸ್ ಡಿ ಎಂ ಸಿ ಅಧ್ಯಕ್ಷರಾದ ಶ್ರಿ ಶಿವಪ್ಪ ಮೇಟಿ ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಶ್ರೀ ವೀರಬಸಪ್ಪ ಶೆಟ್ಟರು, ಶ್ರೀ ಹನುಮೇಶ ಕುಷ್ಟಗಿ , ಶ್ರಿ ಶರಣಪ್ಪ ಪಿನ್ನಿ, ಶ್ರೀ ಶಂಕ್ರಪ್ಪ ಬಡಿಗೇರ, ಶ್ರೀ ನಾಗಪ್ಪ ದೇಸಾಯಿ, ಮುಖ್ಯೋಪಾಧ್ಯಾಯರಾದ ಶ್ರೀ ವಾಯ್ ಬಿ ಬಂಡಿ  ಮತ್ತು ಪಾಲಕರು ಉಪಸ್ಥಿತರಿದ್ದರು.

Please follow and like us:
error

Related posts

Leave a Comment