ಬರ ನಿರ್ವಹಣೆಗೆ ಸಕಲ ಸಿದ್ಧತೆ: ಶಾಸಕ ಕೆ.ರಾಘವೇಂದ್ರ ಹಿಟ್ನಾಳ

ಕೊಪ್ಪಳ: ಕ್ಷೇತ್ರದ ಕಂಪಸಾಗರ ಗ್ರಾಮದಲ್ಲಿ ಅಂದಾಜು ಮೊತ್ತ ರೂ.೭ ಲಕ್ಷದ ಶುದ್ಧ ಕುಡಿಯುವ ನೀರಿನ ಘಟಕ ಉದ್ಘಾಟಿಸಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳ ಅವರು ಬರುವ ಬೇಸಿಗೆಯಲ್ಲಿ ಜನರಿಗೆ ಕುಡಿಯುವ ನೀರಿನ ತೊಂದರೆಯಾಗದಂತೆ ಹಾಗೂ ದನಕರುಗಳಿಗೆ ಮೇವಿನ ಕೊರತೆ, ನೀರಿನ ಕೊರತೆಯಾಗದಂತೆ ಅಧಿಕಾರಿಗಳಿಗೆ ಈಗಾಗಲೆ ಸೂಚಿಸಿದ್ದು, ಅಗತ್ಯವಿದ್ದಕಡೆ ಗೋ ಶಾಲೆ ಪ್ರಾರಂಭಿಸಿದ್ದು ಶೀಘ್ರವೇ ಕೊಪ್ಪಳ ಕ್ಷೇತ್ರದಲ್ಲಿ ಇನ್ನೂ ಎರಡು ಗೋ ಶಾಲೆಗಳನ್ನು ಪ್ರಾರಂಭ ಮಾಡಲಾಗುವುದು. ಜನರ ಕುಡಿಯುವ ನೀರಿಗಾಗಿ ಹೆಚ್ಚಿನ ತೊಂದರೆ ಇದ್ದ ಸ್ಥಳಗಳಲ್ಲಿ ಖಾಸಗಿಯವರ ಬೋರವೆಲ್‌ನಿಂದ ನೀರನ್ನು ಪಡೆದು ಸರಬರಾಜು ಮಾಡಲಾಗುವುದು. ನೀರಿನ ಅಭಾವ ಉಂಟಾಗುವ ಸಂಭವ ಇದ್ದ ಸ್ಥಳಗಳಲ್ಲಿ ಹೆಚ್ಚಿನ ಅನುದಾನ ಬಿಡುಗಡೆ ಮಾಡಿಸಿ ಕೊಳವೆ ಬಾವಿಗಳನ್ನು ಕೊರೆದು ಜನರಿಗೆ ಬೇಸಿಗೆಯಲ್ಲಿ ಯಾವುದೇ ರೀತಿಯ ನೀರಿನ ಭವಣೆಯಾಗದಂತೆ ಕ್ರಮ ಕೈಗೊಳ್ಳಲಾಗುವುದು. ಜನರು ಜೀವ ಜಲವಾದ ನೀರಿನ ಸರಿಯಾದ ಉಪಯೋಗ ಮಾಡಿಕೊಳ್ಳಬೇಕೆಂದು ಕರೆ ನೀಡಿದರು.
ಈ ಸಂದರ್ಭದಲ್ಲಿ ಹಿಟ್ನಾಳ ಗ್ರಾಮ ಪಂಚಾಯತ ಅಧ್ಯಕ್ಷ ಧರ್ಮರಾಜ ಕಲಾಲ, ವೆಂಕಟೇಶ ಕಂಪಸಾಗರ, ರಮೇಶ ಹಿಟ್ನಾಳ, ವೆಂಕಟೇಶ ಅಗಳಕೇರಾ, ತಾ.ಪಂ.ಸದಸ್ಯ ಮೂರ್ತಿ, ಅಶೋಕ ಇಳಿಗೇರ, ಪ್ರಕಾಶ ಬಿಲ್ಲಮ್‌ಕಾರ, ಅಸ್ಗರ್ ಪಾಷಾ, ವಿಜಯಕುಮಾರ ಪಾಟೀಲ್, ವಕ್ತಾರ್ ಅಕ್ಬರ್‌ಪಾಷಾ ಪಲ್ಟನ್ ಉಪಸ್ಥಿತರಿದ್ದರು.

Please follow and like us:
error

Related posts

Leave a Comment