ಬದುಕಿಗೆ ಗುಣದ ಜೊತೆಗೆ ಹಣವೂ ಬೇಕು -ರಮೇಶ ಬಳೂಟಗಿ

ಕೊಪ್ಪಳ : ಉತ್ತಮ ಬದುಕಿಗೆ ಮನುಷ್ಯನು ತನ್ನ ಗುಣದ ಜೊತೆಗೆ ಹಣವನ್ನೂ ಗಳಿಕೆ ಮಾಡಿಕೊಳ್ಳಬೇಕೆಂದು ವಿದ್ಯಾವಂತ ಕೃಷಿಕ ಕುಷ್ಟಗಿಯ ರಮೇಶ ಬಳೂಟಗಿರವರು ಕರೆ ನೀಡಿದರು.  ಇಲ್ಲಿನ ಗವಿಸಿದ್ಧೇಶ್ವರ ಮಹಾವಿದ್ಯಾಲಯದ ಕಲಾ ವಿಭಾಗದ ಕಲಾಸಂಗಮವು ಹಮ್ಮಿಕೊಂಡಿದ್ದ ವಾರದ ವಿಶೇಷ ದಿನದ ವಿಕಾಸದೆಡೆಗೆ ಕಾರ್ಯಕ್ರಮದ ಅತಿಥಿಗಳಾಗಿ ಮಾತನಾಡುತ್ತಿದ್ದರು.  k1

ಇಂದಿನ ಉತ್ತಮವಾದ ಬದುಕನ್ನ ನಿರ್ಮಿಸಿಕೊಂಡು ಹೋಗುವಲ್ಲಿ ಭಾರತೀಯರಾದ ನಮಗೆಲ್ಲ ಉತ್ತಮವಾದ ಗುಣ ಅಥವಾ ನಡತೆಯ ಜೊತೆ ಜೊತೆಗೆ ಆರ್ಥಿಕತೆಯ ಗಟ್ಟಿತನವನ್ನು ಮಾಡಿಕೊಂಡು ಬದುಕಬೇಕೆಂದು ಮಾತನಾಡಿದರು. ಗಂಧದ ಬೆಳೆಗೆ ಪ್ರಪಂಚದಲ್ಲೆ ಭಾರತವು ಅತ್ಯತ್ತಮವಾದ ವ್ಯಾಪಾರ ವಹಿವಾಟನ್ನು ಹೊಂದಿದ್ದು ಆ ನಿಟ್ಟಿನಲ್ಲಿ ಒಂದಿಷ್ಟು ವರ್ಷ ಇದರ ಕೃಷಿಯಲ್ಲಿ ತೊಡಗಿದರೆ ಸರಕಾರಿಯ ಯಾವ ಹುದ್ದೆಗೂ ಕಾಯದೇ ಶ್ರೀಮಂತರಾಗಬಹುದೆಂದು ವಿದ್ಯಾರ್ಥಿ ಯುವ ಸಮೂದಾಯಕ್ಕೆ ತಿಳಿಯ ಹೇಳಿದರಲ್ಲದೇ ತಮ್ಮದೇ ಕೃಷಿ, ಕಲಿಕೆ ಮತ್ತು ಹಣ ಸಂಪಾದನೆಯ ಕುರಿತಂತೆ ಮಾತನಾಡಿದರು. ಇರಬಹುದಾದ ಒಂದಿಷ್ಟು ಜಮೀನನ್ನೇ ಬಳಸಿಕೊಂಡು ಇತರ ದಿನದ ಬಳಕೆಯ ಬಳೆಯೊಂದಿಗೆ ಗಂಧದ ಬೆಳೆಯನ್ನು ಬೆಳೆಯುವ ಯೋಜನೆಯನ್ನು ಹಾಕಿಕೊಂಡು ರೈತಾಪಿಯ ಕಲಿಕೆಯೊಂದಿಗೆ ಯುವ ಸಮೂಹವು ಈ ನಿಟ್ಟಿನಲ್ಲಿ ಪ್ರಯತ್ನಕ್ಕೆ ಮುಂದಾದಲ್ಲಿ ಜೀವನವನ್ನು ಸಾರ್ಥಕ ಮಾಡಿಕೊಳ್ಳಯವದಲ್ಲದೇ ರಾಷ್ಟ್ರಕ್ಕೂ ಈ ನಿಟ್ಟಿನಲ್ಲಿ ಸಹಕಾರಿಯಾಗಬಲ್ಲದಾಗಿದೆಂದರು.ಅಧ್ಯಕ್ಷತೆ ವಹಿಸಿದ್ದ ಪ್ರೊ. ಬಿ.ಡಿ.ಕೇಶವನ್‌ರವರು ಆರ್ಥಿಕತೆಯ ಗಟ್ಟಿತನಕ್ಕೆ ಪದವಿಯೊಂದಿಗೆ ಕೃಷಿಕರೂ ಆದಲ್ಲಿ ವಿದ್ಯಾರ್ಥಿ ಯುವ ಸಮೂಹವು ತಮ್ಮ ಉತ್ತಮ ಬದುಕನ್ನ ನಿರ್ಮಿಸಿಕೊಳ್ಳಬಹುದೆಂದರು.ಸ್ಪಂದನಾ ಕುಲಕರ್ಣಿ ಪ್ರಾರ್ಥನೆ ಗೀತೆ ಹಾಡಿದರೆ, ಕೃಷ್ಣಾ ನಾಯಕ ನಿರೂಪಿಸಿ, ಚಂದ್ರಶೇಖರ ಸ್ವಾಗತಿಸಿದರು. ಕಾಲೇಜಿನ ಪ್ರಾಧ್ಯಾಪಕರು ಉಪಸ್ಥಿತರಿದ್ದರು.

Please follow and like us:
error