ಬಕ್ರಿದ್ ಹಬ್ಬತ್ಯಾಗ-ಬಲಿದಾನದ ಸಂಕೇತ – ಕೆ.ಬಸವರಾಜ ಹಿಟ್ನಾಳ

 ಕೊಪ್ಪಳ ನಗರದ ಹುಲಿಕೇರಿ ಹತ್ತಿರುವ ಇರುವ ಈದ್ಗಾ ಮೈದಾನದಲ್ಲಿ ಬಕ್ರಿದ್ ಹಬ್ಬದ ಸಂಬ್ರಮಚಾರಣೆಯಲ್ಲಿ ಪಾಲ್ಗೊಂಡು ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರಾದ ಕೆ.ಬಸವರಾಜ ಹಿಟ್ನಾರವರು ಅಲ್ಲಾನ ವಾಣಿಯಂತೆ ಪೈಗಂಬರ ಇಬ್ರಾಹಿಂ ಅಲೆಸಲಾಮರವರು ತಮ್ಮ ಏಕೈಕ ಪುತ್ರ ಇಸ್ಲಾಯಿಲ್ ಅಲೆಸಾಲಂರವರನ್ನು ಅಲ್ಲಾನ ಸನ್ಮಾನರ್ಗದಲ್ಲಿ ಬಲಿದಾನ ನೀಡಲು ಸಿದ್ದವಾಗಿದ್ದು ಆ ಸಂದರ್ಭದಲ್ಲಿ ಸೃಷ್ಠಿಕರ್ತನಿಂದಲೆ ಪೈಗಂಬರರ ಬದಲಿಗೆ ಕುರಿಯ ಬಲಿದಾನ ನಡೆದಿದ್ದು ಬಕ್ರೀದ ಹಬ್ಬದ ವೈಶಿಷ್ಠತೆಯಾಗಿದೆ. ಆದ್ದರಿಂದ ಈ ಹಬ್ಬಕ್ಕೆ ‘ಸುನ್ನತೆ ಇಬ್ರಾಹಿಂ’ ಎಂದು ಕರೆಯಲಾಗುತ್ತದೆ. ಪ್ರತಿಯೊಬ್ಬರು ಸನ್ನಡತೆ ಸುವಿಚಾರ ಸನ್ಮಾನರ್ಗದಲ್ಲಿ ನಡೆದಾಗ ಮಾತ್ರ ಅಲ್ಲಾಹನ ಕರುಣಗೆ ಪಾತ್ರರಾಗುತ್ತಾರೆ ಎಂದು ಹೇಳಿದರು.

?????????????

ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷರಾದ ಎಸ್.ಬಿ.ನಾಗರಳ್ಳಿ, ಸಮಾಜದ ಮುಖಂಡರಾದ ಜುಲ್ಲು ಖಾದ್ರಿ, ಮರ್ಧಾನಲಿ ಅಡ್ಡೆವಾಲೆ, ಬಾಷುಸಾಬ ಕತಿಬ್, ಧರ್ಮ ಗುರುಗಳಾದ ಮುಪ್ತಿ ನಜೀರ್ ಅಹಮ್ಮದ, ಖಲಿಲಸಾಬ ದಾಗದಾರ್, ಮಗ್ಬುಲ್ ಮನಿಯಾರ್, ಮಹಿಬೂಬ್ ಮಚ್ಚಿ, ಜಾಫರಖಾನ್, ಜಾಪರ್ ತಟ್ಟಿ, ಅಬ್ದುಲ್ ಅಜೀಜ್ ಮಾನ್ವಿಕರ್, ಪರವೇಜ್ ಖಾದ್ರಿ, ಅಕ್ಬರ್ ಪಾಷಾ ಪಲ್ಟನ್, ಇಕ್ಬಾಲ ತುರಾಬಿ, ಖರಮುದ್ದಿನ್ ಕಿಲ್ಲೇದಾರ್, ಇನ್ನು ಅನೇಕ ಮುಸ್ಲಿಂ ಬಾಂಧವರು ಉಪಸ್ಥಿತರಿದ್ದರು.

Leave a Reply