ಪೋಟೋಗ್ರಫಿ ವೃತ್ತಿ ಸಾಮಾನ್ಯ ಕೆಲಸವಲ್ಲ – ಕರಡಿ ಸಂಗಣ್ಣ

????????????????????????????????????

ಕೊಪ್ಪಳ- ತಾಲುಕಿನ ಪೋಟೊಗ್ರಾಪರ ಮತ್ತು ವಿಡಿಯೋಗ್ರಪಾರ ಸಂಘದವರು ಆಯೊಜೀಸಿದ್ದ ವಿಶ್ವಛಾಯಗ್ರಹಣ ದಿನಾಚರಣೆಯಲ್ಲಿ ಸಂದರ್ಭದಲ್ಲಿನ ಮಾತನಾಡಿದ ಸಂಸದ ಕರಡಿ ಸಂಗಣ್ಣ, ಪೋಟೋಗ್ರಫಿ ವೃತ್ತಿ ಸಾಮಾನ್ಯ ಕಲಸವಲ್ಲ ಅದು ತಾಳ್ಮೆ ಮತ್ತು ಜಾಣ್ಮಯ ಕಲಸವಾಗಿದೆ. ೧೮೩೯ ಅಗಸ್ಷ ೧೯ರಂದು ಪೋಟೊಗ್ರಫಿ ಲೋಕಾರ್ಪಣೆಗೋಂಡಿತು. ನಂತರ ಅದನ್ನೇ ವೃತ್ತಿಯನ್ನಾಗಿ ಮಾಡಿಕೊಂದವರಲ್ಲಿ ಇಲ್ಲಿನ ಕೊಪ್ಪಳ ತಾಲುಕಿನಲ್ಲಿ ೧೫೦ಕ್ಕು  ಕುಟುಂಬಗಳು ಪೋಟೋಗ್ರಫಿ ವೃತ್ತಿ ಅವಲಂಬಿಸಿವೆ, ಈ  ವೃತ್ತಿಯಲ್ಲಿ ತಮ್ಮನ್ನು ತಾವು ತೊಡಗಿಸಿಕೊಂಡಾಗ ಉತ್ತಮ ಬಾಳು ಬಾಳಬಹುದು ಎಂದು ಕೊಪ್ಪಳದ ಸಂಸದರು ತಿಳಿಸಿದರು. ಅಲ್ಲದೇ ಸಂಸದರ ನಿಧಿಯಿಂದ ಸಹಾಯ ಹಸ್ತ ನಿಡುವುದಾಗಿ ಆಶ್ವಾಸನೆ ನೀಡಿದರು.ನಂತರ ಕನ್ನಡ ಪ್ರಭ ದಿನಪತ್ರಿಕೆಯ ಜಿಲ್ಲಾ ವರದಿಗಾರ ಸೋಮರಡ್ಡಿ ಅಳವಂಡಿ ಮಾತನಾಡಿ ತಾಲೊಕಿನಲ್ಲಿ ಪೋಟೋಗ್ರಾಫರ್ ಸಂಘ ರಚನೆಯಾಗಬೇಕು, ಅಲ್ಲದೇ ಜಿಲ್ಲೆಯಲ್ಲಿ ಛಾಯಚಿತ್ರ ವಸ್ತು ಸಂಗ್ರಹಾಲಯ ನೀರ್ಮಾಣವಾದಗ ಅದರ ಮೂಲಕ ಜಿಲ್ಲೆಗೆ ಆಗಮಿಸುವ ಅತಿಥಿಗಳಿಗೆ ಜಿಲ್ಲೆಯ ಇತಿಹಾಸ ಮತ್ತು ಸಂಸ್ಕ್ರತಿಗಳ ಬಗ್ಗೆ ತಿಳಿದುಕೊಳ್ಳಲು ಸುಲಭವಾಗುತ್ತದೆ, ಹಾಗೂ ಎಲ್ಲಾ ವೃತ್ತಿ ಬಾಂಧವರು ಒಟ್ಟು ಗೂಡಿ ಸಂಘದಲ್ಲಿ ಭsವಿಷ್ಯ ನಿಧಿ ಸ್ಥಾಪಿಸಿ, ಸಹಕಾರಿ ಸಂಘ ಸ್ಥಾಪನೆ ಮಾಡಿದರೆ ಮಾತ್ರ ಮುಂದಿನ ದಿನಗಳಲ್ಲಿ ಅನೇಕ ಸೌಲಭ್ಯ ಪಡೆಯಬಹುದು ಎಂದು ತಿಳಿಸಿದರು.ಇದೇ ಸಂದರ್ಭದಲ್ಲಿ ಮಾತನಾಡಿದ ನಗರಸಭಾಧ್ಯಕ್ಷ ಮಹೇಂದ್ರ ಛೋಪ್ರ ಸಂಘಕೆ ಎಲ್ಲಾ ರೀತಿ ಸಹಕಾರ ನೀಡುವುದಾಗಿ ತಿಳಿಸಿ, ಅಲ್ಲದೇ ನೀವೇಶನದ ಅನುಕೂಲ ಮಾಡಿಕೊಡುವುದಾಗಿ ಹೇಳಿದರು.

????????????????????????????????????

????????????????????????????????????

ಕಾರ್ಯಕ್ರಮದಲ್ಲಿ ವಿಶೇಷವಾಗಿ ಉಪನ್ಯಾಸ ನೀಡಿದ ಬಳ್ಳಾರಿಯ ಕೆ.ಪಿ.ಎನ್. ಹಿರಿಯ ಛಾಯಾಗ್ರಾಹಕ ಮತ್ತು ಉಪನ್ಯಾಸಕರಾದ ಬಿ.ಎಂ.ಸಿದ್ದಲಿಂಗಸ್ವಾಮಿ, ಈ ಭಾಗದ ಬಳ್ಳಾರಿ, ಕೊಪ್ಪಳ, ರಾಯಚೂರು ವ್ಯಾಪ್ತಿಗೆ ಬರುವ ವಿಶ್ವವಿಧ್ಯಾಲಯಗಳಲ್ಲಿ ಡಿಪ್ಲೋಮ ಇನ್ ಪೋಟೋಗ್ರಫಿ ಕೋರ್ಸ್ ಆರಂಭಿಸಲು ಸಂಸದರಲ್ಲಿ ಮನವಿ ಮಾಡುತ್ತಾ, ಇದೇ ನಿಟ್ಟಿನಲ್ಲಿ ರಾಜ್ಯದಲ್ಲಿ ಎಲ್ಲಾ ಆಕಾಡೆಮಿಗಳ ಜೊತೆಯಲ್ಲಿ ಛಾಯಾಚಿತ್ರ ಆಕಾಡೆಮಿಯನ್ನು ಸಹ ಸ್ಥಾಪನೆಗೆ ರಾಜ್ಯ ಸರ್ಕಾರ ಮುಂದಾಗ ಬೇಕು, ಮತ್ತು ರಾಜೋತ್ಸವ ಪ್ರಶಸ್ತಿ ಸಂದರ್ಭದಲ್ಲಿ ವೃತ್ತಿಯಲ್ಲಿ ಹಿರಿಯರ ಸಾಮಾಜಿಕ ಸಾಧನೆಗಳನ್ನು ಗುರುತಿಸಿ ಸನ್ಮಾಸಿ ಗೌರವಿಸುವ ಕಾರ್ಯ ಆಗಬೇಕು ಎಂದು ತಮ್ಮ ಉಪನ್ಯಾಸದಲ್ಲಿ ತಿಳಿಸಿದರು.   ಸಂಘದ ಅಧ್ಯಕ್ಷ ಕನಕುಸಾ ದಲಬಂಜನ್, ಗೌರವಾಧ್ಯಕ್ಷ ಗೋವಿಂದರಾವ್ ಪದಕಿ, ವಿಜಯ್ ಕುಮಾರ ವಸ್ತ್ರದ್, ಬಸವರಾಜ್ ಕಂಪ್ಲಿ, ಸರೇಶ್‌ಪದಕಿ, ಪ್ರಶಾಂತ್ ಸಿಂಗ್, ಪ್ರಾಣೇಶ ಕಂಪ್ಲಿ, ರಮೇಶ ಇಲ್ಲೂರು ,ಗವಿಸಿದ್ದಪ ಕರ್ಕಿಹಳ್ಳಿ, ಯಲ್ಲಪ್ಪ ಪೊಜಾರ್, ಮಹಾಲಿಂಗಯ್ಯ, ರವಿ ಕುರುಗೋಡು, ಮಂಜು ಕುರುಗೊಡ್, ರುದ್ರೇಶ್, ಶ್ರೀಶೈಲ ಬಡಿಗೇರ್, ಆನಂದ ವೇದ್‌ಪಾಠಕ್, ಅಶೋಕ ಹುಣಸಿಮರದ್, ರವಿ ಮುನಿರಾಬಾದ್ ಸೇರಿದಂತೆ ತಾಲೂಕಿನ ಇನ್ನು ಮುಂತಾದ ಸಂಘದ ಸದಸ್ಯರು ಪಾಲ್ಗೂಂಡಿದ್ದರು.

Please follow and like us:
error