You are here
Home > Koppal News-1 > koppal news > ಡಿಜಿಟಲ್ ಇಂಡಿಯಾ ಪ್ರಚಾರ ಆಂದೋಲನಕ್ಕೆ- ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಚಾಲನೆ

ಡಿಜಿಟಲ್ ಇಂಡಿಯಾ ಪ್ರಚಾರ ಆಂದೋಲನಕ್ಕೆ- ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಚಾಲನೆ

 ಕೇಂದ್ರ ಸರ್ಕಾರದ ವಿವಿಧ ಯೋಜನೆಗಳ ಕುರಿತ ಮಾಹಿತಿ ನೀಡುವ ಡಿಜಿಟಲ್ ಇಂಡಿಯಾ ಪ್ರಚಾರ ವಾಹನಕ್ಕೆ ಕೊಪ್ಪಳ ಜಿಲ್ಲಾಧಿಕಾರಿ ಎಂ.ಕನಗವಲ್ಲಿ ಅವರು ಜಿಲ್ಲಾಡಳಿತ ಭವನದ ಆವರಣದಲ್ಲಿ ಚಾಲನೆ ನೀಡಿದರು.

ವಿಶೇಷ ಕ್ಯಾಂಪೇನ್ ವಾಹನದ ಮೂಲಕ ಜನಸಾಮಾನ್ಯರಿಗೆ ಅವಶ್ಯವಿರುವ ವಿವಿಧ ಸೇವೆ ಪಡೆಯುವ ಕುರಿತು ವಿವರಣೆ ನೀಡಲಾಗುವುದು. ಡಿಜಿ ಲಾಕರ್ ಸೇವೆ ಬಳಸುವ ಕುರಿತು ಹಾಗೂ ಆಧಾರ ಕಾರ್ಡ್ ನೋಂದಣಿ, ಕಾಮನ್ ಸರ್ವಿಸ್ ಸೆಂಟರ್‌ಗಳಲ್ಲಿ ದೊರೆಯುವ ಸೇವೆಗಳ ಕುರಿತು ವಿಡಿಯೋ ಪ್ರಾತ್ಯಕ್ಷಿತೆ, ಜನಧನ ಹಾಗೂ ಇತರೆ ಯೋಜನೆಗಳ ವಿವರಗಳನ್ನು ವಾಹನದಲ್ಲಿ ಅಳವಡಿಸಲಾಗಿರುವ ದೊಡ್ಡ ಪರದೆಯ ಮೂಲಕ ಸಾರ್ವಜನಿಕರಿಗೆ ಸರಳವಾಗಿ ಅರ್ಥವಾಗುವ ರೀತಿಯಲ್ಲಿ ವಿವರಗಳನ್ನು ನೀಡಲಾಗುವುದು. ವಾಹನವು ಜಿಲ್ಲೆಯ ಆಯ್ದ ಗ್ರಾಮಗಳಲ್ಲಿ ೧೫ ದಿನಗಳ ಕಾಲ ೩೬ ಗ್ರಾಮಗಳಲ್ಲಿ ಸಂಚರಿಸಿ ಯೋಜನೆಗಳ ಕುರಿತು ಮಾಹಿತಿ ನೀಡಲಿದ್ದು ಗ್ರಾಮಸ್ಥರು ಇದರ ಸದುಪಯೋಗ ಪಡೆಯುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಮನವಿ ಮಾಡಿಕೊಂಡರು.
ಈ ಸಂದರ್ಭದಲ್ಲಿ ಜಿ.ಪಂ ಮುಖ್ಯ ಕಾರ್ಯ ನಿರ್ವಹಣಾಧಿರಿ ಆರ್.ರಾಮಚಂದ್ರನ್, ಅಪರ ಜಿಲ್ಲಾಧಿಕಾರಿ ಡಾ.ರುದ್ರೇಶ್ ಘಾಳಿ, ಎನ್‌ಐಸಿ ಜಿಲ್ಲಾ ಅಧಿಕಾರಿ ವೀರಣ್ಣ ಏಳುಬಾವಿ ಮುಂತಾದವರು ಉಪಸ್ಥಿತರಿದ್ದರು.

Leave a Reply

Top