ಜೀವನ ದರ್ಶನ

 ಮಾಸಿಕದ ಜೀವನ ದರ್ಶನದ ಕಾರ್ಯಕ್ರಮವು ದಿನಾಂಕ ೧೨-೦೯-೨೦೧೬ ಸೋಮವಾರದಂದು ಬೆಳಿಗ್ಗೆ ೧೦-೦೦ ಗಂಟೆಗೆ ಕೊಪ್ಪಳ ಶ್ರೀ ಗವಿಸಿದ್ಧೇಶ್ವರ ಕಲಾ, ವಿಜ್ಞಾನ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಗ್ರಂಥಾಲಯದ ಮುಂಭಾಗದಲ್ಲಿ ಜರುಗಿತು.

ಜೀವನ ದರ್ಶನದ ಕಾರ್ಯಕ್ರಮದಲ್ಲಿ ಮಾನ್ಯಶ್ರೀ ಬಸವರಾಜ ಪಾಟೀಲ ಸೇಡಂ, ಶಿಕ್ಷಣ ತಜ್ಞರು ಹಾಗೂ ರಾಜ್ಯಸಭಾ ಸದಸ್ಯರು ಅವರು ಉಪನ್ಯಾಸ ನೀಡುತ್ತ ವಿದ್ಯಾರ್ಥಿಗಳ ಜೀವನದ ಗುರಿ ಜ್ಞಾನರ್ಜನೆಯಾಗಿರಬೇಕೆ ಹೊರತು ಅಂಕಗಳ ಗಳಿಕೆಯಾಗಿರಬಾರದು ಎಂದು ವಿವರಿಸುತ್ತ ಇತ್ತೀಚಿನ ದಿನಗಳಲ್ಲಿ ಶೈಕ್ಷಣಿಕ ಚಟುವಟಿಕೆಗಳಲ್ಲಿ ಅಂಕಗಳಿಗೆ ಹೆಚ್ಚಿನ ಮಹತ್ವ ನೀಡಿ ಜ್ಞಾನರ್ಜನೆಯನ್ನು ಕಡೆಗಣಿಸಲಾಗುತ್ತಿದೆ. ಇದರಿಂದ ವಿದ್ಯಾರ್ಥಿಗಳಲ್ಲಿ ಅಂತರ್ಗತವಾಗಿರುವ ಪ್ರತಿಭೆ ಹೊರಹೊಮ್ಮುವದಿಲ್ಲ. ಜ್ಞಾನವನ್ನು ದಿಢೀರಾಗಿ ಅಲ್ಪ ಕಾಲದಲ್ಲಿ ಗಳಿಸಲು ಸಾಧ್ಯವಿಲ್ಲ. ಜ್ಞಾನದ ಗಳಿಕೆಗೆ ನಿರಂತರವಾದ ಪ್ರಯತ್ನ ಅತ್ಯಗತ್ಯ. ಈ ಸಂದರ್ಭದಲ್ಲಿ ವಿದ್ಯಾರ್ಥಿಗಳು ಕ್ಷಣಿಕ ವ್ಯಾಮೋಹಗಳಿಗೆ ಬಲಿಯಾಗದೇ ಜ್ಞಾನರ್ಜನೆ ಒಂದು ತಪಸ್ಸೆಂದು ಭಾವಿಸಿದರೇ ಮಾತ್ರ ನಿಜವಾದ ಜ್ಞಾನ ಲಭ್ಯವಾಗುತ್ತದೆ. ಭಾರತದಲ್ಲಿ ಜ್ಞಾನದ ವಿಕಾಸಕ್ಕೆ ಹಲವಾರು ಶಾಸ್ತ್ರಗಳು ಲಭ್ಯವಿದ್ದು ಯಾವುದೇ ಶಾಸ್ತ್ರ ಅಥವಾ ಕಲೆಂiiನ್ನು ಮೈಗೂಡಿಸಿಕೊಂಡರೇ ಬದುಕಿನಲ್ಲಿ ಯಶಸ್ಸು ಗಳಿಸಬಹುದು. ವಿದ್ಯಾರ್ಥಿಗಳು ಅಂಧಾನುಕರುಣೆಗೆ ಒಳಗಾಗದೇ ತಮ್ಮೊಳಗಿನ ಅದಮ್ಯ ಚೈತನ್ಯವನ್ನು ಬಡಿದೆಬ್ಬಿಸಿಕೊಂಡರೆ ಜಗತ್ತನ್ನೇ ಗೆಲ್ಲಬಹುದು. ಶೈಕ್ಷಣಿಕ ಅರ್ಹತೆಗಳಿಲ್ಲದೇ ಹಲವಾರು ಸಾಧಕರು ನಾಡಿಗೆ ತಮ್ಮ ಪ್ರತಿಭೆ ಅಂತಃಕರಣಗಳ ಮೂಲಕ ಅಮುಲ್ಯ ಕೊಡುಗೆಗಳನ್ನು ಕೊಟ್ಟಿದ್ದಾರೆ. ಆದಕಾರಣ ವಿದ್ಯಾರ್ಥಿಗಳು ತಮ್ಮ ಆಸಕ್ತಿದಾಯಕ ಕ್ಷೇತ್ರಗಳನ್ನು ಆಯ್ಕೆ ಮಾಡಿಕೊಂಡು ನಿಜವಾದ ಜ್ಞಾನವನ್ನು ಪಡೆದು ಬದುಕನ್ನು ಸಾರ್ಥಕಗೊಳಿಸಿ ಎಂದು ವಿವರಿಸಿದರು.
ಕಾರ್ಯಕ್ರಮದಲ್ಲಿ ಪದವಿ ಪ್ರಾಚಾರ್ಯರಾದ ಪ್ರೊ.ಎಂ.ಎಸ್.ದಾದ್ಮಿ,  ಟ್ರಸ್ಟ್‌ನ ಕಾರ್ಯದರ್ಶಿ ಶ್ರೀ ಮಲ್ಲಿಕಾರ್ಜುನ ಸೋಮಲಾಪುರ, ಆಡಳಿತಾಧಿಕಾರಿಗಳಾದ ಡಾ|| ಮರೆಗೌಡರವರು, .  ಪದವಿ ಪೂರ್ವ ಪ್ರಾಚಾರ್ಯರಾದ ಪರೀಕ್ಷತರಾಜ್,  ಪ್ರಕಾಶ ಬಡಿಗೇರ,  ಬಸವರಾಜ ಪೂಜಾರ,  ದಯಾನಂದ ಸಾಳುಂಕೆ,  ಜೆ.ಎಸ್.ಪಾಟೀಲ, ಶ್ರೀ ವಿ.ಎಂ. ಭೂಸನೂರಮಠ,ಶರಣಬಸಪ್ಪ  ಇತರ ಪ್ರಾಧ್ಯಾಪಕ ಸಿಬ್ಬಂದಿ ಉಪಸ್ಥಿತರಿದ್ದರು    g

Please follow and like us:
error