ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ ೭೦ನೇ ಸ್ವಾತಂತ್ರ್ಯದಿನಾಚರಣೆ

?????????????

?????????????

ಕೊಪ್ಪಳ – ನಗರದ ಜಿಲ್ಲಾ ಕಾಂಗ್ರೆಸ್ ಕಾರ್ಯಾಲಯದಲ್ಲಿ  ಧ್ವಜಾರೋಹಣ ನೆರವೇರಿಸಿ ಮಾತನಾಡಿದ ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷರು ಕೆ.ಬಸವರಾಜ ಹಿಟ್ನಾಳ ನಮಗೆ ಸ್ವಾತಂತ್ರವು ೧೮೦ ವರ್ಷಗಳ ಬ್ರಿಟಿಷ್‌ರ ವಿರುದ್ದ ಸುದಿರ್ಘವಾದ ಹೋರಾಟದ ಫಲವಾಗಿದೆ. ನಿಸ್ವಾರ್ಥ ಸೇವೆಯಿಂದ ದೇಶದ ಸ್ವಾತಂತ್ರ್ಯಕ್ಕಾಗಿ ಹಗಲಿರುಳು ತಮ್ಮ ಪ್ರಾಣ ತ್ಯಾಗ ಮಾಡಿದ ಆ ಮಹಾನ್ ಸೇನಾನಿಗಳ ಅನುಮಪ ಕೊಡುಗೆಯಾಗಿದೆ. ಇಂದಿನ ಯುವಕರು ತಮ್ಮ ಜೀವನದಲ್ಲಿ ದೇಶಭಕ್ತಿಯನ್ನು ಹಾಗೂ ಸ್ವತಂತ್ರ ಸೇನಾನಿಗಳ ತತ್ವ ಆದರ್ಶಗಳನ್ನು ಪರಿಪಾಲಿಸಬೇಕು. ದೇಶದಲ್ಲಿ ತಾಂಡವಾಡುತ್ತಿರುವ ಭ್ರಷ್ಟಾಚಾರಗಳನ್ನು ಮುಕ್ತಗೊಳಿಸಿ ಗಾಂಧೀಜಿಯವರು ಕನಸುಕಂಡ ಭಾರತ ರಾಮರಾಜ್ಯವಾಗಬೇಕೆಂದು ಹೇಳಿದರು. ಈ ಸಂದರ್ಭದಲ್ಲಿ ಉನ್ನತ ಶಿಕ್ಷಣ ಹಾಗೂ ಕೊಪ್ಪಳ ಜಿಲ್ಲಾ ಉಸ್ತುವಾರಿ ಸಚಿವರಾದ ಬಸವರಾಜ ರಾಯರಡ್ಡಿ, ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ, ಜಿ.ಪಂ.ಅಧ್ಯಕ್ಷರಾದ ಎಸ್.ಬಿ.ನಾಗರಹಳ್ಳಿ, ಪ್ರಾಧಿಕಾರದ ಅಧ್ಯಕ್ಷ ಜುಲ್ಲುಖಾದ್ರಿ, ನಗರಸಭೆ ಅಧ್ಯಕ್ಷ ಮಹೇಂದ್ರ ಚೋಪ್ರಾ, ಪಕ್ಷದ ಮುಖಂಡರಾದ ಕೆ.ಎಂ.ಸೈಯದ್, ಹನುಮರಡ್ಡಿ ಹಂಗನಕಟ್ಟಿ, ವಿಜಯಾ ಹಿರೇಮಠ,ಮುತ್ತುರಾಜ ಕುಷ್ಟಗಿ, ಗಾಳೆಪ್ಪ ಪೂಜಾರ,ಸಾಬೀರ್ ಹುಸೇನಿ, ಅಪ್ಸರ್‌ಸಾಬ, ಕಾಟನ್‌ಪಾಷಾ, ಜಾಕೀರ್ ಕಿಲ್ಲೆದಾರ, ಕೃಷ್ಣ ಇಟ್ಟಂಗಿ, ಸುರೇಶ ದಾಸರಡ್ಡಿ, ನಾಗರಾಜ ಬಳ್ಳಾರಿ, ಕುರುಗೋಡ ರವಿ, ಮಾನ್ವಿ ಪಾಷಾ, ಶಿವಾನಂದ ಹೊದ್ಲೂರು, ಅನುಸೂಯಮ್ಮ ವಾಲ್ಮಿಕಿ, ವೀರಣ್ಣ ಸಂಡೂರು, ಇಬ್ರಾಹಿಂ ಅಡ್ಡೆವಾಲೆ,ಹುಸೇನ್ ಪಿರಾ ಮುಜಾವರ, ಅಜ್ಜಪ್ಪಸ್ವಾಮಿ, ನೂರಜಾಬೇಗಂ, ಚನ್ನಮ್ಮ, ಉಮಾ ಜನಾದ್ರಿ, ಅಜೀಮ್ ಅತ್ತರ್, ಮುನೀರ್ ಸಿದ್ದಿಕಿ, ಜಿ.ಎಸ್.ಗೋನಾಳ, ಅಕ್ತರ್ ಪಾರೂಕಿ, ಇನ್ನು ಅನೇಕ ಕಾಂಗ್ರೆಸ್ ಕಾರ್ಯಕರ್ತರು ಉಪಸ್ಥಿತರಿದ್ದರು.

Please follow and like us:
error