ಜಾತ್ರಾ ಅಂಗವಾಗಿ ಭಕ್ತಾದಿಗಳಿಗೆ ನೀರಿನ ಉಳಿಕಯ ಬಗ್ಗೆ ಅರಿವು

ಕೊಪ್ಪಳ ನಗರದ ಶ್ರೀಗವಿಮಠದ ಜಾತ್ರಾ ಅಂಗವಾಗಿ ಶ್ರೀ ಗವಿಮಠವು  ಈ ಬಾರಿ ಜಲ ದೀಕ್ಷೆ ಎನ್ನುವ ಕಾರ್ಯಕ್ರಮವನ್ನು ಹಾಕಿಕೊಂಡಿದ್ದು ಸಾರ್ವಜನಿಕರಿಗೆ, ಭಕ್ತಾದಿಗಳಿಗೆ ನೀರಿನ ಉಳಿಕಯ ಬಗ್ಗೆ ಅರಿವು ಮೂಡಿಸುವ ಸಲುವಾಗಿ ಕೃಷಿ ಇಲಾಖೆ, ಜಾತ್ರೆಯಲ್ಲಿ ಜಲದೀಕ್ಷೆಯ ಕೃಷಿಮೇಳವನ್ನು ಆಯೋಜಿಸಲಾಗಿದ್ದು ಇದರಲ್ಲಿ ಶ್ರೀ ಗವಿಸಿದ್ಧೇಶ್ವರ ಕಾಲೇಜಿನ ಪಿಯುಸಿ ಪ್ರಥಮ ವಿಜ್ಷಾನ ವಿಭಾಗದಿಂದ  ಮಳೆ ನೀರಿನ ಸಂರಕ್ಷಣೆ, ನೀರಿನ ಸಂರಕ್ಷಣೆಯ ಮಾದರಿ, ಪಿಯುಸಿ ದ್ವಿತೀಯ ವಿಜ್ಷಾನ ವಿಭಾಗದಿಂದ ನೀರಿನ ಹೆಜ್ಜೆ ಗುರುತು, ಮೆಕ್ಕೆ ಜೋಳದ ದಿಂಡಿನಿಂದ ನೀರಿನ ಮಾಲಿನ್ಯ ನಿಯಂತ್ರಣದ ಕುರಿತು ಮಾದರಿ, ನೀರು ಸಂರಕ್ಷಣೆ, ಮಳೆ ನೀರು ಕೊಯ್ಲು,ಮಳೆ ನೀರಿನ ಸಂರಕ್ಷಣೆ ಮತು ನೀರಿನ ಸಂರಕ್ಷಣೆಯ ಕುರಿದಾದ ವಿವಿಧ ಎಂಟು ಮಾದರಿಗಳನ್ನು ಮಾಡಲಾಗಿದೆ. ಹಾಗೆಯೆ ಪದವಿ ಮಹಾವಿದ್ಯಾಲಯದಿಂದ ಜಲಚಕ್ರದ ಕುರಿತು ಮಾದರಿ, ಹಾಗೂ ಸರಕಾರಿ ಪಾಲಿಟಿಕ್ನಿಕ ಕಾಲೇಜಿನಿಂದ ಮೆಕ್ಯಾನಿಕಲ್ ವಿಭಾಗದಿಂದ ಶಕ್ತಿ ಸಂವರ್ಧನಾ ಘಟಕದ ಕುರಿತು ಮಾದರಿ, ತಯಾರಿಸಿ ಅದರ ಬಗ್ಗೆ ಪ್ರಾತ್ಯಕ್ಷಿಕೆ, ವಿವರಣೆಯನ್ನು ವೀಕ್ಷಣೆಗೆ ಬಂದ ಭಕ್ತಾದಿಗಳಿಗೆ ನೀಡುತ್ತಿರುವುದು ಕಂಡು ಬಂದಿತು. ಪ್ರಾಚಾರ್ಯರಾದ ಶ್ರೀ ಪರಿಕ್ಷಿತರಾಜ, ಉಪನ್ಯಾಸಕರಾದ  ಡಾ. ವಿರೇಶ. ಸಂತೋಷಗೌಡ, ವಿನಯಕುಮಾರ, ಪ್ರತಾಪರವರ  ಮಾರ್ಗದರ್ಶನದಲ್ಲಿ ಈ ಎಲ್ಲಾ ಮಾದರಿಗಳನ್ನು ಸಿದ್ದಪಡಿಸಲಾಗಿದೆ.

Please follow and like us:
error

Related posts

Leave a Comment