ಜನರ ನಿರೀಕ್ಷೆ ಹುಸಿಗೊಳಿಸಿದ ಬಜೆಟ್ : ರಾಘವೇಂದ್ರ ಹಿಟ್ನಾಳ

ಕೊಪ್ಪಳ: ಸ್ವತಂತ್ರ ಭಾರತದ ಇತಿಹಾಸದಲ್ಲಿ ಫೆಬ್ರುವರಿ ೦1 ರಂದು ಬಜೆಟ್ ಅಂಗೀಕಾರ ಮಾಡಿರುವುದು ಅವೈಜ್ಞಾನಿಕತೆಯಿಂದ ಕೂಡಿದೆ. ಇಂತಹ ಬಜೆಟ್‌ನ ನಿರೀಕ್ಷೆಯಲ್ಲಿದ್ದ ದೇಶದ ಜನತೆ ಹತಾಷರಾಗಿದ್ದಾರೆ. ಡಿಸೆಂಬರ್-೩೧ರ ರಾತ್ರಿ ದೇಶದ ಜನತೆಗೆ ಸಿಹಿ ಸುದ್ದಿ ಹೇಳುತ್ತೇನೆಂದು ಹುಸಿಗೊಳಿಸಿದ ಪ್ರಧಾನಿ ನರೇಂದ್ರ ಮೋದಿಯವರು ಇಂದು ಸಹ ವಿತ್ತ ಮಂತ್ರಿಗಳು ಮಂಡಿಸಿದ ಬಜೆಟ್ ದೇಶದ ಜನರ ನಿರೀಕ್ಷೆಯನ್ನು ಹುಸಿಗೊಳಿಸಿದ್ದಾರೆ. ಬಡವರು, ರೈತರು, ಮದ್ಯಮ ವರ್ಗದವರು ಹಾಗೂ ಯುವಕರಿಗಾಗಿ ಯಾವುದೇ ಹೊಸ ಯೋಜನೆಗಳನ್ನು ಸೃಷ್ಟಿಸುವದಾಗಲಿ ಈ ಬಜೆಟ್‌ನಲ್ಲಿ ಎಲ್ಲಿಯೂ ಪ್ರಸ್ತಾಪವಿಲ್ಲ. ಕೋಟಿ ಕೋಟಿ ಉದ್ಯೋಗ ಸೃಷ್ಟಿ ಮಾಡಿ ಯುವಕರನ್ನು ಉದ್ಯೋಗಗ್ರಸ್ತರನ್ನಾಗಿ ಮಾಡುತ್ತೆನೆಂದು ಹೇಳಿದ ಪ್ರಧಾನಿಯವರ ಭರವಸೆ ಸುಳ್ಳಾಗಿದೆ. ಭಾರತ ದೇಶವನ್ನು ವಿಶ್ವದ ಮುಂದುವರೆದ ರಾಷ್ಟ್ರಗಳ ಪಟ್ಟಿಯಲ್ಲಿ ೫೦ನೇ ಸ್ಥಾನಕ್ಕೆ ತರುತ್ತೇನೆಂದು ಹೇಳಿದ ಅವರ ಆಶ್ವಾಸನೆ ಸುಳ್ಳಾಗಿದ್ದು ಇದೊಂದು ಸುಳ್ಳು ಭರವಸೆಯ ಬಟೆಟ್. ರಾಜ್ಯದ ಮುಖ್ಯಮಂತ್ರಿಗಳು ಶೇ.೫೦ ರಷ್ಟು ರೈತರ ಸಾಲ ಮನ್ನಾಕ್ಕೆ ಸಿದ್ದರಿದ್ದು ಆದರೆ ಹಣಕಾಸು ಸಚಿವರು ರೈತರ ಸಾಲದ ಬಗ್ಗೆ ಈ ಬಜೆಟ್ಟಿನಲ್ಲಿ ಕಿಂಚತ್ತು ಅಭಿಪ್ರಾಯ ವ್ಯಕ್ತಮಾಡಿರುವದಿಲ್ಲ. ಭಾರೀ ನಿರೀಕ್ಷೆ ಮೂಡಿಸಿದ ಈ ಬಜೆಟ್ ಹುಸಿ ಬಟೆಜ್ ಆಗಿದೆ ಎಂದು ಹೇಳಿದರು.

Leave a Reply