ಜನಪದ ವಾಣಿಯೇ ದೇವವಾಣಿ

ಕೊಪ್ಪಳ: ನಿಸ್ವಾರ್ಥ, ನಿಷ್ಕಲ್ಮಷ ಮನಸ್ಸಿನ, ಯಾವುದೆ ಹಂಗು ಮುಲಾಜಿಗೆ ಒಳಗಾಗಗದೆ ಸಮಾಜ ತಿದ್ದುವ ಕಳಕಳಿ ಮತ್ತು ಅಂತರಾಳದಿಂದ ಬಂದ ಜನಪದ ವಾಣಿಯೇ ದೇವವಾಣಿ ಎಂದು ಶರಣ ಕಲಾ ಬಳಗದ ಗಂಗಾವತಿಯ ಅಧ್ಯಕ್ಷರಾದ ರಮೇಶ ಗಬ್ಬೂರ ಹೇಳಿದರು. ಕೊಪ್ಪಳ ನಗರದ ಗುರುಬಸವ ಮಹಾಮನೆಯಲ್ಲಿ ವಿಶ್ವಗುರು ಬಸವೇಶ್ವರ ಟ್ರಸ್ಟ್ ಮಾಸಿಕ ಕಾರ್ಯಕ್ರಮವಾದ ೭೨ನೇ ಶರಣ ಹುಣ್ಣಿಮೆ ಕಾರ್ಯಕ್ರಮದಲ್ಲಿ ಅತಿಥಿ ಉಪನ್ಯಾಸಕರಾಗಿ ಜನಪದರು ಕಂಡಂತೆ ಬಸವಣ್ಣ ಎಂಬ ವಿಷಯ ಕುರಿತು ಶ್ರೀ ರಮೇಶ ಗಬ್ಬೂರ ಮಾತನಾಡಿದ ಅವರು ಬಸವಾದಿ ಶರಣರು ತಮ್ಮ ಹುಟ್ಟು, ಚರಿತ್ರೆಯ ಬಗ್ಗೆ ಹೇಳಿದವರಲ್ಲ ಅವರ ಸಂಪೂರ್ಣ ಜೀವನ ತಿಳಿಯುವದು ಜನಪದ ಸಾಹಿತ್ಯದಿಂದ. ಜನಪದ ಸಾಹಿತ್ಯವಾದ ತ್ರಿಪದಿ, ಗೀಗಿ ಪದ, ಕೋಲಾಟ ಪದ, ಹಂತಿ ಪದ, ಬೀಸೋ ಪದಗಳಿಂದ ಬಸವಾದಿ ಶರಣರ ಕುರಿತು ಭಾವನಾತ್ಮಕ, ವಸ್ತುನಿಷ್ಠ ವರದಿ ತಿಳಿದುಬರುತ್ತದೆ. ಆದ್ದರಿಂದ ಈ ಸಾಹಿತ್ಯ ಆದಾರವಾಗಿಟ್ಟುಕೊಳ್ಳಬೇಕು ಎಂದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಶ್ರೀ ದಾನಪ್ಪ ಶೆಟ್ಟರ ವಹಿಸಿದ್ದರು. ಅತಿಥಿಗಳಾಗಿ ಶ್ರೀ ಬಸಪ್ಪ ಬಾರಕೇರ, ಶ್ಶ್ರೀ ಮಹೇಶ ಬೆಳವಣಿಕಿ, b ನಾಗಲಿಂಗಪ್ಪ ಮಾಳೆಕೊಪ್ಪ, ಶ್ರೀ ಕೃಷ್ಣಮೂರ್ತಿ ಕಟ್ಟಿಮನಿ, ಶ್ರೀ ನಾಗಲಿಂಗಪ್ಪ ಮಾಳೆಕೊಪ್ಪ,  ಶ್ರೀಮತಿ ಲಕ್ಷ್ಮೀದೇವಿ ಬಸಪ್ಪ ಗುಮಗೇರಿ, ಶ್ರೀಮತಿ ಸುನಿತಾ ವೀರಣ್ಣ ಮಡಿವಾಳರ ವೇದಿಕೆ ಮೇಲೆ ಉಪಸ್ಥಿತರಿದ್ದರು. ಕಾರ್ಯಕ್ರಮವನ್ನು ಶಿವಕುಮಾರ ಕುಕನೂರ ಸ್ವಾಗತಿಸಿದರು, ಕಳಕಪ್ಪ ಬೆಲ್ಲದ ನಿರೂಪಿಸಿದರು, ರೇವಣ್ಣ ಭೂತಣ್ಣನವರ ವಂದಿಸಿದರು.

Please follow and like us:
error