ಜಂತು – ಹುಳು ನಿವಾರಣಾ ದಿನಾಚರಣೆ

ಕೊಪ್ಪಳ : ತಾಲೂಕಿನ ಹೊಸಕನಕಾಪೂರ ಗ್ರಾಮದ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ  ಜಂತು ಹುಳು ನಿವಾರಣಾ ದಿನಾಚರಣೆಯನ್ನು ಶಾಲೆಯಲ್ಲಿ ಹಮ್ಮಿಕೊಳ್ಳಲಾಯಿತು. ಜಂತು ಹುಳು ನಿವಾರಣಾ ದಿನಾಚರಣೆಯ ಅಂಗವಾಗಿ ಸದರಿ ಕಾರ್ಯಕ್ರಮವನ್ನು ಕುರಿತು ಸಿ.ಆರ್.ಪಿ. ವಿರೇಶ ಅರಳೀಕಟ್ಟಿಯವರು ಮಾತನಾಡಿ ೧ ರಿಂದ ೧೯ ವರ್ಷದ ಮಕ್ಕಳು ಗುಳಿಗೆಯನ್ನು ತೆಗೆದುಕೊಳ್ಳಬಹುದು ಇದರಿಂದ ಯಾವುದೇ ತೊಂದರೆಗಳು ಆಗುವುದಿಲ್ಲ ಮತ್ತು ತೀವ್ರ ಜ್ವರ ನೆಗಡಿ ಕೆಮ್ಮು ಮತ್ತು ಮೂರ್ಚೆ ರೋಗ ಇರುವ ಸಂದರ್ಭದಲ್ಲಿ ಅವರಿಗೆ ತಾತ್ಕಾಲಿಕವಾಗಿ ಮುಂದೂಡಿ ನಂತರದಲ್ಲಿ ಕೊಡಬಹುದು ಎಂದು ತಿಳಿಸಿದರು.  ಸದರಿ ಕಾಯಕ್ರಮದಲ್ಲಿ ಶಿಕ್ಷಕರಾದ ಭರಮಪ್ಪ ಗೋರಿ,  ಪ್ರಭು ಕಿಡದಾಳ, ಶಿವನಗೌಡ, ಶ್ರೀಮತಿ ಕೆ.ವೀರಮ್ಮ ಮತ್ತು ಕು.ವಿಜಯಲಕ್ಷ್ಮೀ ,hರಾಕೇಶ್ , ಗ್ರಾಮ ಪಂಚಾಯತ ಸದಸ್ಯರು ಎಸ.ಡಿ.ಎಂ.ಸಿ. ಅಧ್ಯಕರು, ಉಪಾಧ್ಯಕರು, ಸದಸ್ಯರು, ಅಂಗನವಾಡಿ ಕಾರ್ಯಕರ್ತರು, ಸಿ.ಆರ್.ಪಿ ಯವರು ಮತ್ತು ಆಶಾ ಕಾರ್ಯಕರ್ತರು ಭಾಗವಹಿಸಿದ್ದರು.

Please follow and like us:
error