ಚಿಂತನ ಶೀಲ ಪುಸ್ತಕ ಲಾಕೋರ್ಪಣೆ ಕಾರ್ಯಕ್ರಮ

????????????????????????????????????

ಕೊಪ್ಪಳ- ದಿನಾಂಕ ೨೭ ಸೆಪ್ಟೆಂಬರ್ ೨೦೧೬ರ ಮಂಗಳವಾರ ಸಂಜೆ ೫ ಗಂಟೆಗೆ ಶ್ರೀ ವರಸಿದ್ದಿವಿನಾಯಕ ಗ್ರಾ.ಶಿ. ಸಂಸ್ಥೆ (ರಿ)ಮಾದಿನೂರು. ವಿಶಾಲ ಪ್ರಕಾಶನ ಹಾಗೂ ಸಿರಿಗನ್ನಡ ವೇದಿಕೆ ಜಿಲ್ಲಾ ಘಟಕ ಕೊಪ್ಪಳ ಇವರುಗಳ ಸಂಯುಕ್ತಾಶ್ರಯದಲ್ಲಿ ಜಿ.ಎಸ್. ಗೋನಾಳರ ಚಿಂತನಶೀಲ ಪುಸ್ತಕ ಬಿಡುಗಡೆ ಕರುನಡ ಭೂಷಣ ಸಿರಿ ಪ್ರಶಸ್ತಿ ಪ್ರದಾನ, ಪ್ರವಾಸೋದ್ಯಮ ದಿನಚರಣೆ, ಕವಿಗೋಷ್ಟಿ ಹಾಗೂ ಉಮೇಶ ಪೂಜಾರರ ಮನ್ವಂತರ ಶಿಕ್ಷಣ ಗ್ರಾಮೀಣಾಭಿವೃದ್ದಿ ಹಾಗೂ ಉದ್ಯೋಗ ತರಬೇತಿ (ರಿ)ಸಂಸ್ಥೆಯ ಉದ್ಘಾಟನಾ ಕಾರ್ಯಕ್ರಮವು ಕೊಪ್ಪಳದ ತಾಲೂಕ ಪಂಚಾಯತ ಸಭಾಂಗಣದಲ್ಲಿ ಅರ್ಥಪೂರ್ಣವಾಗಿ ನಡೆಯಿತು.

????????????????????????????????????

ರಾಮಕೃಷ್ಣಾಶ್ರಮದ ಪರಮಪೂಜ್ಯ ಶ್ರೀ ಚೈತನ್ಯಾನಂದ ಸ್ವಾಮೀಜಿಯವರು ಕಾರ್ಯಕ್ರಮದ ದಿವ್ಯಸಾನಿಧ್ಯ ವಹಿಸಿದ್ದರು. ಪತ್ರಕರ್ತರ ವೇದುಕೆಯ ರಾಜ್ಯಾಧ್ಯಕ್ಷರಾದ ಶ್ರೀ ಮಹೇಶಬಾಬು ಸುರ್ಪಿಯವರು ಅಧ್ಯಕ್ಷತೆಯನ್ನು ವಹಿಸಿದ್ದರು. ಶ್ರೀಮತಿ ಇಂದಿರಾ ಭಾವಿಕಟ್ಟಿ ಜಿಲ್ಲಾಧ್ಯಕ್ಷರು ಮಹಿಳಾ ಕಾಂಗ್ರೇಸ್ ಕೊಪ್ಪಳ ಇವರು ಉದ್ಘಾಟನೆ ಮಾಡಿದರು.  ಭಾ.ಜ.ಪ.ಮುಖಂಡರಾದ ಶ್ರೀಯುತ ಸಿ.ವಿ.ಚಂದ್ರಶೇಖರ ಮನ್ವಂತರ ಶ್ರಿ ಗ್ರಾ.ಉ. ಸಂಸ್ಥೆಯನ್ನು ಉದ್ಘಾಟಿಸಿದರು. ಕನ್ನಡ ವಿ.ವಿ.ಹಂಪಿಯ ನಿರ್ದೇಶಕರಾದ ಡಾಃಚಲುವರಾಜುರವರು ಪುಸ್ತಕವನ್ನು ಲೋಕಾರ್ಪಣೆ ಮಡಿದರು. ಮಂಜುನಾಥ ಬೊಮ್ಮನಕಟ್ಟಿ, ಮಹಾಂತೇಶ ಮಲ್ಲನಗೌಡ್ರು, ವ್ಹಿ.ಬಿ.ರಡ್ಡೇರ, ಬಸವರಾಜ ಆಕಳವಾಡ, ಸರೋಜಾ ಬಾಕಳೆ ಮುಂತಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು. ಕೊಪ್ಪಳದ ಸಾಂಸ್ಕೃತಿಕ ಪರಮಪರೆಯನ್ನು ಉಳಿಸುವಲ್ಲಿ ಶ್ರೀಮಹೇಶಬಾಬು ಸುರ್ಪಿ ಹಾಗೂ ಅವರ ತಂಡ ಕಂಕಣಬದ್ಧವಗಿದೆ. ಅವರಿಗೆ ನಮ್ಮೆಲ್ಲರ ಪ್ರೋತ್ಸಾಹ ಅತ್ಯಗತ್ಯ ಎಂಬುದಾಗಿ ಉದ್ಘಾಟರಾದ ಶ್ರೀಮತಿ ನಡೆಯಲ್ಲಿ ಶ್ರೀಮತಿ ಇಂದಿರಾ ಭಾವಿಕಟ್ಟಿಯವರು ತಿಳಿಸಿದರು. ಅಂತೇಯೆ ರಾಜಕೀಯ ಮುಖಂಡರಾದ ಸಿ.ವಿ.ಚಂದ್ರಶೇಖರವರು ಜಿ.ಎಸ್.ಗೋನಾ ಳರ ಸಾಮಾಜಿಕ ಕಳಕಳಿಯನ್ನು ಶ್ಲಾಘಸಿದರು ಚಿಂತನಶೀಲ ಪುಸ್ತಕವನ್ನು ಲೋಕಾರ್ಪಣೆ ಗೈದು ಮತನಾಡಿದ ನಿರ್ದೇಶಕರದ ಶ್ರೀ ಚಲುವರಾಜುರವರು ಚಿಂತನ ಶೀಲ ಪುಸ್ತಕ ಇದು ತಿರುಳ್ಗನ್ನಡದ ಚಿಂತನೆ ಎಂದು ಹೆಳಿದರು. ಜೊತೆಗೆ ತುಂಗಭದ್ರಾ, ಕೃಷ್ಣಾ, ಭಿಮಾ ನದಿಗಳ ತಟದಲ್ಲಯೇ ಇಡೀ ಭಾರತಕ್ಕೆ ಬೆಳಕಾದ ಬಹುತೇಕ ಚಿಂತನೆಗಳು ಹುಟ್ಟಿದ್ದು ಈ ಎಲ್ಲ ಚಿಂತನೆಗಳು ನದಿಯಂತೆ ಹರಿಯದೆ ಇಲ್ಲಿಯೇ ಬೇರುಬಿಟ್ಟು ಹೆಮ್ಮರ ವಾದುದು ವಿಶೇಷ ವಚನ ಚಳುವಳಿ, ದಾಸ ಚಳುವಳಿಗಳಂತೆ ಚಿಂತನಶೀಲ ಪುಸ್ತಕ ಹೊಸದೊಂದು ವಿಚಾರಕ್ರಾಂತಿಯನ್ನು ಆರಂಭಿಸಲಿ ಎಂಬ ಆಶಯ ವ್ಯಕ್ತಪಡಿಸಿದರು. ಅಲ್ಲದೇ ಅಂತರಂಗದಲ್ಲಿ ಮೂಡಿದ ಅರಿವು ಬಾಹ್ಯ ಆಚರಣೆಗೆ ತರುವುದು ಮುಖ್ಯ ಇಂತಹ ಸಾಮಾಜಿಕ ಸೇವೆಯಲಿ ಕ್ರಿಯಾಶೀಲರಾಗಿ ಗೋನಾಳರು ಡಾಕ್ಟರೇಟ್ ಪದವಿಗೂ ಮಿಗಿಲಾದ ವ್ಯಕ್ತಿತ್ವ ಹೊಂದಿದವರೆಂದು ಮನದುಂಬಿ ಹರಸಿದರು. ಗದಗಿನ ಪತ್ರಕರ್ತರಾದ ಮಂಜುನಾಥ ಬೊಮ್ಮನ ಕಟ್ಟಿಯವರು ಪುಸ್ತಕ ಕುರಿತು ವಿಸ್ತೃತ ವಿವರಣೆ ನೀಡುತ್ತಾ ಪ್ರತಿಯೊಬ್ಬ ಸಾಹಿತಿ ಓದಿ ಆಚರಿಸಲೆಬೇಕಾದ ಪುಸ್ತಕ ಚಿಂತನ ಶೀಲ ಎಂದು ನುಡಿದರು. ಕಾರ್ಯಕ್ರಮದ ಕೊನೆಯಲ್ಲಿ ಮಾತನಾಡಿದ ಚಲನಚಿತ್ರ ಸಾಹಿತಿಗಳಾದ ಮಹಾಂತೇಶ ಮಲ್ಲನಗೌಡರು ಪ್ರಸ್ತುತ ಕಾವೇರಿ ಸಮಸ್ಯೆಗೆ ಕನ್ನಡಿಗರು ಸಿಂಹಗಳಂತೆ ಹೋರಾಡಬೇಕೇಂದು ಕರೆಕೊಟ್ಟರು. ಕೊಪ್ಪಳ ನಾಡಿನಲ್ಲಿ ವಿಚಾರಕ್ರಾಂತಿಗೆ ಕರೆನೀಡಿದ ಚಿಂತನಶೀಲ ಕೃತಿ ಕರ್ತೃಗಳಾದ ಶ್ರೀ ಜಿ.ಎಸ್.ಗೋನಾಳರಿಗೆ ಸ್ಪೂರ್ತಿ ಶಿಕ್ಷಕರ ಬಳಗ ಸನ್ಮಾನಿಸುವ ಮೂಲಕ ಹಾರೈಸಿದರು.  ಕವಿಗೋಷ್ಟಿಯಲ್ಲಿ ಸುಮರು ೨೦ ಕ್ಕೂ ಹೆಚ್ಚು ಕವಿಗಳು ಕವಿಯಿತ್ರಿಯರು ಭಾಗವಹಿಸಿ ಬರಗಾಲ ಮತ್ತು ರೈತರ ಕಷ್ಟಗಳಿಗೆ ಸ್ಪಂದಿಸುವ ಧ್ವನಿಯಾದರು. ವಿವಿಧ ಕ್ಷೇತ್ರಗಳಲ್ಲಿ ಸೇವಾ ಸಾಧನೆಗೈದ ೨೨ ಜನರನ್ನು ಗುರ್ತಿಸಿ ಗೌರವ ಸನ್ಮಾನ ಮಾಡಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಮಂಜುನಾಥ ಹಾಗೂ ದಯಾನಂದ ಸಾಗರ ಮಾಡಿದರು. ಸಭೆಯನ್ನು ಶ್ರೀ ಪಿ.ಬಿ.ಪಾಟೀಲರು ಸ್ವಾಗತಿಸಿದರು. ಕು.ಕೆ.ಸೌಪರ್ಣಿರಾವ್ ರವರು ಮಧುರ ಕಂಠದಿಂದ ಗಣೇಶ ಸ್ತುತಿಯೊಂದಿಗೆ ಪ್ರಾರ್ಥಿಸಿದರು.

Please follow and like us:
error