ಗಣೇಶ ಹಬ್ಬ – ಶಾಂತಿ ಸಭೆ

ಕುಕನೂರು – ೫ನೇ ದಿನದಲ್ಲಿ ಗಣೇಶನನ್ನು ವಿಸರ್ಜಣೆ ಮಾಡಬೇಕು. ಮುಂಬರುವ ಗಣೇಶ ಹಬ್ಬದ ನಿಮಿತ್ಯ ಪಟ್ಟಣದ ಪೋಲಿಸ್ ಠಾಣೆಯಲ್ಲಿ 48 ಹಳ್ಳಿಗಳ ಗ್ರಾಮಸ್ಥರ ಹಾಗೂ ನಾನಾ ಸಮಾಜದ ಮುಖಂಡರ ಸಮ್ಮುಖದಲ್ಲಿ ಶಾಂತಿ ಸಭೆ ನಡೆಯಿತು.ಸಭೆ ಉದ್ದೇಶಿಸಿ ಪಿಎಸ್‌ಐ ವಿಶ್ವನಾಥ ಹಿರೇಗೌಡರ್ ಮಾತನಾಡಿ, ಪ್ರತಿ ವರ್ಷದಂತೆ ಈ ವರ್ಷವೂ ಕೂಡಾ ಪಟ್ಟಣ ಸೇರಿದಂತೆ ನಾನಾ ಗ್ರಾಮಗಳ ಸಾರ್ವಜನಿಕರು ಗಣೇಶ ಹಬ್ಬದಲ್ಲಿ ಯಾವುದೇ ಅಹಿತಕರ ಘಟನೇಗಳು ಜರುಗದಂತೆ ಜಾಗೃತಿವಹಿಸಬೇಕು. ಗಣಪತಿ ಕೂರಿಸುವದಕ್ಕೆ ಪ.ಪಂಯಿಂದ ಪರವಾಣಿಗೆ ತೇಗೆದುಕೊಳ್ಳಬೇಕು. ಯಾರು ಮುಂದಾಳತ್ವವಹಿಸಿಕೊಳ್ಳುತ್ತಾರೊ ಅವರು ಪೋಲಿಸ್ ಇಲಾಖೆಗೆ ಕಡ್ಡಾಯವಾಗಿ ಆಧಾರ ಕಾರ್ಡ್ ನೀಡಬೇಕು. ಎಲ್ಲಿ ಕೂರಿಸುತ್ತಾರೆ ಮತ್ತು ಯಾವಾಗ ಗಣೇಶನನ್ನು ವಿಸರ್ಜಿಸುತ್ತಾರೆ ಎಂಬ ಮಾಹಿತಿಯನ್ನು ಪೋಲಿಸ್ ಇಲಾಖೆ ಅಧಿಕಾರಿಗಳಿಗೆ ಅರ್ಜಿ ಸಲ್ಲಿಸಬೇಕು. ಸೌಂಡ್ ಸಿಸ್ಟಮ್‌ಗೆ ಸಂಬಂಧಿಸಿದ ಎಲ್ಲಾ ಪರವಾಣಿಗೆಯನ್ನು ಪೋಲಿಸ್ ಇಲಾಖೆಯಿಂದ ಅನುಮತಿ ತೇಗೆದುಕೊಳ್ಳಬೇಕು. ಈ ವರ್ಷ ವಿಶೇಷವಾಗಿ ಕುಕನೂರು ಸೇರಿದಂತೆ ಠಾಣೆ ವ್ಯಾಪ್ತಿಗೆ ಬರುವ ೪೮ ಹಳ್ಳಿಗಳ ಗ್ರಾಮಸ್ಥರು ಗಣಪತಿಯನ್ನು ನಾಲ್ಕು ದಿನಗಳ ಕಾಲ ಪೂಜಿಸಿ ೫ನೇ ದಿನಕ್ಕೆ ವಿಸರ್ಜಿಸಬೇಕು ಎಂದು ಹೇಳಿದರು. ಉತ್ತಮವಾಗಿ ಗಣಪತಿ ಇಟ್ಟಿರುವ ಸಂಘಗಳಿಗೆ ಪೋಲಿಸ್ ಇಲಾಖೆಯಿಂದ ಬಹುಮಾನ ನೀಡಲಾಗುವದು ಎಂದು ಹೇಳಿದರು. ಶ್ರೀಮಠದ ಮಹಾದೇವ ದೇವರು ಸಾನಿಧ್ಯವಹಿಸಿದ್ದರು. ಈ ಸಂದರ್ಭದಲ್ಲಿ ಪ.ಪಂ ಸದಸ್ಯರಾದ ಕನಕಪ್ಪ ಬ್ಯಾಡರ್, ಬಸವರಾಜ ಅಡವಿ, ಮೃತ್ಯಂಜಯ್ಯ ಕಂಪ್ಲಿ, ಮುಖಂಡರಾದ ಶೇಖರಪ್ಪ ವಾರದ್, ಸಿದ್ದಯ್ಯ ಕಳ್ಳಿಮಠ, ರಶೀದಸಾಬ ಮುಬಾರಕ್, ಮಲಿಯಪ್ಪ ಅಣ್ಣಿಗೇರಿ, ನಿಂಗಪ್ಪ ಗೊಲೇಕೊಪ್ಪ, ಡಿ, ಯುವರಾಜ, ವಾಸನಗೌಡ, ವೀರುಪಾಕ್ಷಪ್ಪ ಅಂಗಡಿ, ಶರಣಪ್ಪ ಕಲಕಬಂಡಿ, ಕಲ್ಲಿನಾಥ, ವಿನೋಧ, ರಾಜಾಭಕ್ಷಿ, ಶರಣಪ್ಪ ಮತ್ತಿತರರು ಇದ್ದರು.

Please follow and like us:
error

Related posts

Leave a Comment