ಗಣಪತಿ ಪ್ರತಿಷ್ಠಾಪಿಸಿ ಭಾವೈಕ್ಯತೆ ಸಾರಿದ ಮುಸ್ಲಿಂ ಕುಟುಂಬ

 ಆ ಮನೆಯಲ್ಲಿ ಇಷ್ಟು ದಿನ ಅಲ್ಲಾನ ನಾಮಸ್ಮರಣೆ ಕೇಳಿಬರುತ್ತಿತ್ತು. ಆದರೀಗ ಅಲ್ಲಾನ ಜೊತೆ ವಿಘ್ನ ವಿನಾಶಕ ಗಪಣನ ನಾಮಸ್ಮರಣೆ ಕೇಳಿಬರುತ್ತಿದೆ. ತಮ್ಮ ಮನೆಯಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ಇಲ್ಲೊಂದು ಕುಟುಂಬ ಭಾವೈಕ್ಯತೆ ಸಾರಿದೆ.

ಧಾರವಾಡ ಜಿಲ್ಲೆ ನವಲಗುಂದ ತಾಲೂಕಿನ ಅಣ್ಣಿಗೇರಿ ಪಟ್ಟಣದಲ್ಲಿರೋ ನೂರ್ ಸಾಬ್ ಮನೆಯಲ್ಲಿ ಅಲ್ಲಾನ ಜೊತೆ  ಗಣಪತಿ ನಾಮಸ್ಮರಣೆ ಕೇಳಿಬರುತ್ತಿದೆ.  ಇವರು ಗಣಪತಿ ಪೂಜಿಸುವುದಕ್ಕೆ  ಕಾರಣವೂ ಇದೆ. ಕೆಲ ವರ್ಷಗಳ ಹಿಂದೆ ಕೆಲಸ ಮಾಡ್ತಿರುವಾಗ  ಬೆಳಗಾವಿಯಲ್ಲಿ ಗಣೇಶನ ಬೆಳ್ಳಿ ಮೂರ್ತಿ ಸಿಕ್ಕಿತಂತೆ. ಮನೆಗೆ ತಂದು ವಾಲಿ ಗುರಿಗಳನ್ನು ಕೇಳಿದ್ದಾಗ, ಮನೆಯಲ್ಲಿಟ್ಟು ಪೂಜೆ ಮಾಡುವಂತೆ ಹೇಳಿದ್ದಾರೆ. ಆದರೆ ಈ ವರ್ಷ  ಮನೆಯಲ್ಲಿಯೇ ಪ್ರತಿಷ್ಠಾಪನೆ ಮಾಡಿ ಪೂಜೆ ಸಲ್ಲಿಸುತ್ತಿದ್ದಾರೆ.ಜಾತಿ ಜಾತಿ ಎಂದು ಹೊಡೆದಾಡುವ ಜನರ ನಡುವೆ  ಇಂಥ ಭಾವೈಕ್ಯತೆ ಇರುವವರು ತುಂಬಾ ಅಪರೂಪ ಒಟ್ಟಿನಲ್ಲಿ  ರಿಹಾನಾ ಬೇಗಂ ಅವರು, ತಮ್ಮ ಮನೆಯಲ್ಲಿ ಗಣಪತಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುವ ಮೂಲಕ ಭಾವೈಕ್ಯತೆ ಸಾರಿದ್ದಾರೆ.

Please follow and like us:
error