ಕ್ರೀಡೆಗಳಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ

 ಕ್ರೀಡೆಗಳಿಂದ ಮಾನಸಿಕ ನೆಮ್ಮದಿ ಲಭಿಸುತ್ತದೆ ಎಂದು ಕೊಪ್ಪಳ ಸಿ.ಪಿ.ಎಸ್.ಶಾಲೆಯ ಮುಖ್ಯೋಪಾಧ್ಯಾಯರಾದ ಬೀರಪ್ಪ ಅಂಡಗಿ ಚಿಲವಾಡಗಿ ಹೇಳಿದರು.

ಅವರು ನಗರದ ಸಿ.ಪಿ.ಎಸ್.ಶಾಲೆಯಲ್ಲಿ ವಿದ್ಯಾರ್ಥಿಗಳು- ಶಿಕ್ಷಕರ ದಿನಾಚರಣೆಯ ಅಂಗವಾಗಿ ಶಾಲಾ ಶಿಕ್ಷಕರಿಗೆ ಹಮ್ಮಿಕೊಂಡಿದ್ದ ವಿವಿಧ ಆಟೋಟ ಸ್ಪರ್ಧೆಯನ್ನು ಉದ್ಘಾಟಿಸಿ ಮಾತನಾಡುತ್ತ, ಶಿಕ್ಷಕರು ಪ್ರತಿದಿನ ಪಾಠ ಬೋಧನೆಯಲ್ಲಿ ತೊಡಗಿರುತ್ತಾರೆ.ಅವರು ಕೂಡಾ ಮಾನಸಿಕವಾಗಿ ಸದೃಢರಾಗಬೇಕಾದರೆ ಇಂತಹ ಆಟೋಟ ಸ್ಪರ್ಧೆಗಳ ಅವಶ್ಯವಿದೆ.ಶಿಕ್ಷಕರು ಶಾಲೆಯಲ್ಲಿ ಎಲ್ಲಾ ದಿನಾಚರಣೆಯನ್ನು ಆಚರಿಸುತ್ತಾರೆ.ಆದರೆ ಶಿಕ್ಷಕರ ದಿನಾಚರಣೆಯ ಅಂಗವಾಗಿ ಮಕ್ಕಳೇ ಶಿಕ್ಷಕರಿಗೆ ವಿವಿಧ ಬಗೆಯ ಕ್ರೀಡೆಗಳನ್ನು ಏರ್ಪಡಿಸಿರುವುದು ವಿಶೇಷವಾಗಿದೆ.ರಾಜ್ಯದ ಪ್ರತಿಯೊಂದು ಶಾಲೆಯಲ್ಲಿ ಇಂತಹ ವಿಶೇಷ ಚಟುವಟಿಕೆಗಳನ್ನು ಹಮ್ಮಿಕೊಳ್ಳಬೇಕು.ಶಿಕ್ಷಕರು ಇಂತಹ ಆಟೋಟ ಸ್ಪರ್ಧೆಗಳಲ್ಲಿ ಭಾಗವಹಿಸುವುದರಿಂದ ಅವರಿಗೆ ಮಾನಸಿಕ ನೆಮ್ಮದಿ ಲಭಿಸುವುದರ ಜೊತೆಗೆ ಕ್ರಿಯಾತ್ಮಕ ಚಟುವಟಿಕೆಗಳನ್ನು ಹಮ್ಮಿಕೊಳ್ಳಲು ದಾರಿಯಾಗುತ್ತದೆ ಎಂದು ಹೇಳಿದರು.ಶಾಲೆಯಲ್ಲಿ ಎಲ್ಲಾ ಶಿಕ್ಷಕರಿಗೆ ಕಣ್ಣು ಕಟ್ಟಿ ಡಬ್ಬಿ ಹೊಡೆಯುವುದು,ಗುಂಡು ಎಸೆತ,ಕುರ್ಚಿ ಆಟ,ನೀರು ತುಂಬುವ ಆಟ,ಚಕ್ರ ಎಸೆತ,ನಿಂಬೇ ಹಣ್ಣಿನ ಆಟ ಮುಂತಾದ ಆಟಗಳನ್ನು ಆಡಿಸಿದರು.
ಆಟೋಟ ಸ್ಪರ್ಧೆಯಲ್ಲಿ ಶಾಲೆಯ ಶಿಕ್ಷಕರಾದ ವಿಜಯಾ,ಅಂಬಕ್ಕ,ಸುನಂದಾ,ಶಂಕ್ರಮ್ಮ,ರತ್ನಾ,ಗೌಸೀಯಾಬೇಗಂ,ಗಂಗಮ್ಮ,ಭಾರತಿ,ವಿಜಯಲಕ್ಷ್ಮಿ,
ಮೋಹಿನಪಾಷಾಬಿ,ರಂಜಿತಾ,ನಾಗಪ್ಪ,ಗುರುರಾಜ,ಶ್ರೀನಿವಾಸ,ವಿರುಪಾಕ್ಷಪ್ಪ ಮುಂತಾದವರು ಹಾಜರಿದ್ದರು.

Leave a Reply