ಕೊಪ್ಪಳ ಶ್ರೀ ಗವಿಸಿದ್ದೇಶ್ವರ ಜಾತ್ರಾ ಪ್ರಯುಕ್ತ ಮ್ಯಾರಾಥಾನ್-೨೦೧೭

    ಕೊಪ್ಪಳ ಜಿಲ್ಲಾ ಅಥ್ಲೆಟಿಕ್ ಅಸೋಸಿಯೇಷನ್ ವತಿಯಿಂದ ಶ್ರೀ ಗವಿಸಿದ್ದೇಶ್ವರ ಜಾತ್ರಾ ಪ್ರಯುಕ್ತ ದ್ವಿತೀಯ ಬಾರಿಗೆ ರಾಜ್ಯ ಮಟ್ಟದ ಕೊಪ್ಪಳ ಮ್ಯಾರಾಥಾನ್-೨೦೧೭ನ್ನು ಇಂದು ದಿನಾಂಕ:೧೩-೦೧-೨೦೧೭ ರಂದು ಬೆಳಿಗ್ಗೆ ೬-೩೦ ಗಂಟೆಗೆ ಕೊಪ್ಪಳದಲ್ಲಿ ಹಮ್ಮಿಕೊಂಡಿದ್ದು, ೧೬ ವಯೋಮಿತಿ ಒಳಗಿನ ಮತ್ತು ಮೇಲ್ಪಟ್ಟ ಬಾಲಕ/ಬಾಲಕಿಯರಿಗೆ ಪ್ರತ್ಯೇಕವಾಗಿ ಸ್ಪರ್ಧೆಗಳನ್ನು ಏರ್ಪಡಿಸಿದ್ದು, ಈ ಸ್ಪರ್ಧೆಯಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಸುಮಾರು ೮೦೦ ಕ್ರೀಡಾಪಟುಗಳು ಭಾಗವಹಿಸಿದ್ದರು. ಶ್ರೀಯುತ ಸಂಸದರಾದ ಸಂಗಣ್ಣ ಕರಡಿಯವರು ಕಾರ್ಯಕ್ರಮದ ಚಾಲನೆಯನ್ನು ನೀಡಿದರು. ಈ ಕಾರ್ಯಕ್ರಮದ ಅಧ್ಯಕ್ಷತೆಯನ್ನು ಕೆ.ರಾಜಶೇಖರ ಹಿಟ್ನಾಳ ಅವರು ವಹಿಸಿಕೊಂಡಿದ್ದು, ಮುಖ್ಯ ಅತಿಥಿಗಳಾಗಿ ಶಾಸಕರಾದ ಕೆ.ರಾಘವೇಂದ್ರ ಹಿಟ್ನಾಳ ಹಾಗೂ, ತಾ.ಪಂ.ಅಧ್ಯಕ್ಷರಾದ ಬಾಲಚಂದ್ರನ್, ನಗರಸಭೆ ಸದಸ್ಯರಾದ ರಾಮಣ್ಣ ಹದ್ದಿನ, ಅಮ್ಜದ್ ಪಟೇಲ್, ಮುತ್ತುರಾಜ ಕುಷ್ಟಗಿ, ವಾಣಿಜ್ಯೋದ್ಯಮಿ ಶ್ರೀನಿವಾಸ ಗುಪ್ತಾ, ಸುರೇಶ ಭೂಮರಡ್ಡಿ, ಶಾರದಾ ನಿಂಬರಗಿ, ಸರಕಾರಿ ನೌಕರ ಸಂಘದ ಅಧ್ಯಕ್ಷರಾದ ನಾಗರಾಜ ಜುಮ್ಮಣ್ಣನವರ ಭಾಗವಹಿಸಿದ್ದರು. ಸಂಸ್ಥೆಯ ಪದಾಧಿಕಾರಿಗಳಾದ ಅಧ್ಯಕ್ಷರು ಜಿ.ದೈ.ಶಿ.ಸಂ. ವಿಠಲ್ ಬೈಲವಾಡ, ಶರಣಬಸವ ಬಂಡಿಹಾಳ, ಶರಣಬಸಪ್ಪ ಮಣ್ಣೂರ, ಬಾಳನಗೌಡ, ಬಸವರಾಜ ಹನುಮಸಾಗರ, ಸಿದ್ದರಡ್ಡಿ ಮೇಟಿ, ಬಸವರಾಜ ಆರೇರ ಶ್ರೀಮತಿ ರೇಣುಕಾ ಮಣ್ಣೂರು ಮತ್ತಿತರರು ಭಾಗವಹಿಸಿದ್ದರು. ವೀರಭದ್ರಯ್ಯ ಪೂಜಾರ ಕಾರ್ಯಕ್ರಮವನ್ನು ನಿರೂಪಿಸಿದರು, ಯಲ್ಲಪ್ಪ ನರಗುಂದ ಸ್ವಾಗತಿಸಿದರು, ಶಿವಾನಂದ ಹೊಸಮನಿ ಪ್ರಾಸ್ತಾವಿಕವಾಗಿ ಮಾತನಾಡಿದರು, ಉಮೇಶ ಕರಿಗಾರ ಅವರು ಕಾರ್ಯಕ್ರಮವನ್ನು ವಂದಿಸಿದರು.
ಈ ಮ್ಯಾರಾಥಾನ್ ಸ್ಪರ್ಧೆಯಲ್ಲಿ ೧೬ ವರ್ಷದ ಒಳಗಿನ ಬಾಲಕರ ವಿಭಾಗದಲ್ಲಿ ಪ್ರಥಮ ಮಹಾದೇವ ಕುಂಬಾರ, ದ್ವಿತೀಯ ವಿಷ್ಣುರಡ್ಡಿ ಹ್ಯಾಟಿ, ತೃತಿಯ ಯಮನೂರ ಬಸಪ್ಪ ಚಿಕ್ಕಜಂತಕಲ್ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಸಾನಿಯಾ, ದ್ವಿತೀಯ ಯಾಸ್ಮೀನ್, ತೃತೀಯ ಸಾನಿಯಾ ಜಾದವ್, ೧೬ ವರ್ಷದ ಮೇಲ್ಪಟ್ಟ ಬಾಲಕರ ವಿಭಾಗದಲ್ಲಿ ಪ್ರಥಮ ಬಾಬಾಶೋ ದೇವಾಕಟೆ ಬೆಳಗಾವಿ, ದ್ವಿತೀಯ ಹನುಮಂತಪ್ಪ ಹಂಡೆವಾಲೆ ಕಿನ್ನಾಳ, ತೃತಿಯ ಸಂದೀಪ ನವಲೇಕಾರ ಬೆಳಗಾಂವಿ ಹಾಗೂ ಬಾಲಕಿಯರ ವಿಭಾಗದಲ್ಲಿ ಪ್ರಥಮ ಗವಿಸಿದ್ದಮ್ಮ ಹಳ್ಳಿಕೇರಿ ಕೊಪ್ಪಳ, ದ್ವಿತೀಯ ಶಾಹಿದಾ ಬೇಗಂ ಗದಗ, ತೃತೀಯ ಪೂಜಾ ಬಾನಾಪೂರ. ಈ ಕಾರ್ಯಕ್ರಮದಲ್ಲಿ ಭಾಗವಹಿಸಿದ ಎಲ್ಲಾ ಕ್ರೀಡಾಪಟುಗಳಿಗೆ ಪ್ರಶಸ್ತಿ ಪತ್ರ ಮತ್ತು ನಗದು ಬಹುಮಾನ ವಿತರಿಸಲಾಯಿತು. ಹಾಗೂ ಅಸೋಷಿಯೇಶನ್‌ವತಿಯಿಂದ ಎಲ್ಲಾ ಕ್ರೀಡಾಪಟುಗಳಿಗೆ ಉಪಹಾರದ ವ್ಯವಸ್ಥೆ ಮಾಡಲಾಯಿತು.

Leave a Reply