You are here
Home > Koppal News-1 > koppal news > ಕೊಪ್ಪಳ ನಗರದ ತಾಲೂಕಾ ಕ್ರೀಡಾಂಗಣ ಅಭಿವೃದ್ಧಿಗೆ ಮನವಿ

ಕೊಪ್ಪಳ ನಗರದ ತಾಲೂಕಾ ಕ್ರೀಡಾಂಗಣ ಅಭಿವೃದ್ಧಿಗೆ ಮನವಿ

ಕೊಪ್ಪಳ ನಗರದ ತಾಲೂಕಾ ಕ್ರೀಡಾಂಗಣ ಅಭಿವೃದ್ಧಿ ಪಡಿಸುವಂತೆ ಸಾರ್ವಜನಿಕ ತಾಲೂಕ ಕ್ರೀಡಾಂಗಣ ರಕ್ಷಣೆ ಹಾಗೂ ಹೋರಾಟ ಸಮಿತಿ ವತಿಯಿಂದ ಜಿಲ್ಲಾ ಉಸ್ತವಾರಿ ಮತ್ತು  ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿಗೆ ಶನಿವಾರದಂದು ಮನವಿ ಸಲ್ಲಿಸಲಾಯಿತು.

ಸುಮಾರು ೫೦ ವರ್ಷಗಳಿಂದ ಸರ್ವೇ ನಂ. ೨೦೩ ರಲ್ಲಿ ಕ್ರೀಡಾಂಗಣದ ಒಟ್ಟು ೧೧ ಏ. ೩೬ ಗುಂ. ಜಾಗೆ ಮೀಸಲಿದ್ದು ಇದರ ಪೈಕಿ ತಾಲೂಕ ಕ್ರೀಡಾಂಗಣಕ್ಕೆ ಕೇವಲ ೬ ಏ. ಮೀಸಲಿದ್ದು ಇದರ ಪೈಕಿ ೧ ಏ. ೮ ಗುಂಟೆ, ಪ್ರಥಮ ದರ್ಜೇ ಮಹಿಳಾ ಕಾಲೇಜಿಗೆ ವರ್ಗಾವಣೆ ಮಾಡಿದ್ದು ಆದರೆ. ತಾಲೂಕ ಕ್ರೀಡಾಂಗಣಕ್ಕೆ ೬ ಏ. ಅವಶ್ಯವಿದ್ದು ಸದರಿ ಮೈದಾನವನ್ನು ಸುಮಾರು ೦೪ ವರ್ಷಗಳಿಂದ ತಾತ್ಕಾಲಿಕ ಜೆ.ಪಿ. ಮಾರ್ಕೆಟಗೆ ನಿಡಲಾಗಿದೆ. ಇದರಿಂದ ನಗರದ ಬಹಳಷ್ಟು ಯುವ ಕ್ರೀಡಾಪಟುಗಳಿಗೆ ತಮ್ಮ ಪ್ರತಿಭೆಯನ್ನು ಬೆಳಕಿಗೆ ತರಲು ಸರಿಯಾದ ಮೈದಾನವಿಲ್ಲದೆ ಪ್ರತಿಭೆಯನ್ನು ಬೆಳಕಿಗೆ ತರಲು ಸರಿಯಾದ ಮೈದಾನವಿಲ್ಲದೆ ಪ್ರತಿಭಾನ್ವಿತ ಯುವಕರು ತಮ್ಮ ಪ್ರತಿಭೆಯನ್ನು ರಾಜ್ಯಮಟ್ಟದಲ್ಲಿ ರಾಷ್ಟ್ರೀಯ ಮಟ್ಟದಲ್ಲಿ ತೋರಿಸಲು ಸಾಧ್ಯವಾಗುತ್ತಿಲ್ಲ. ಆದ್ದರಿಂದ ಜಿಲ್ಲಾ ಕೇಂದ್ರವಾಗಿ ಸುಮಾರು ೧೭ ವರ್ಷ ಕಳೆದರು ಒಂದು ಸುಸಜ್ಜಿತ ತಾಲುಕು ಕ್ರೀಡಾಂಗಣ ಇಲ್ಲದಿರುವುದು ದುರಂತವೇ ಸರಿ. ಆದ್ದರಿಂದ ಇರುವ ಮೈದಾನವನ್ನೇ ಕೇವಲ ಕ್ರಿಡೆಗೆ ಮೀಸಲಿಟ್ಟು ಕ್ರೀಡಾಪಟುಗಳು ರಾಜ್ಯಮಟ್ಟದಲ್ಲಿ, ರಾಷ್ಟ್ರ ಮಟ್ಟದಲ್ಲಿ, ರಾರಾಜಿಸುವ ಹಾಗೆ ಈ ತಾಲುಕು ಕ್ರೀಡಾಂಗಣ ಮೊದಲ ಹೆಜ್ಜೆಯಾಗಿ ಪ್ರಾಂಭವಾಗಬೇಕು.
ಕೇವಲ ದಿನಗಳ ಹಿಂದೆ ಅಧಿಕಾರಿ ವರ್ಗದವರು ಮೈದಾನದಲ್ಲಿ ಡಿಗ್ರಿ ಕಾಲೇಜು ಆಡೊಯೋಟರಂ ಹಾಗೂ ಪ್ರಥಮ ದರ್ಜೇ ಮಹಿಳಾ ಕಾಲೇಜನ್ನು ಸ್ಥಾಪಿಸಲು ರೂಪರೇಷೆ ತಯಾರಿಸಿದ್ದು ಇದನ್ನು ರದ್ದುಪಡಿಸಿ ಕೇವಲ ತಾಲುಕ ಕ್ರಿಡಾಂಗಣಕ್ಕೆ ಮೀಸಲಿಡಬೇಕೆಂದು ಮನವಿಯಲ್ಲಿ ವಿನಂತಿಸಿಕೊಳ್ಳುತ್ತೇವೆ.

Leave a Reply

Top