You are here
Home > Koppal News-1 > koppal news > ಕೊಪ್ಪಳದ ವೈಟ್ ಟೈಗರ್‍ಸ್ ತಂಡಕ್ಕೆ ಹ್ಯಾಟ್ರಿಕ್ ಗೆಲವು

ಕೊಪ್ಪಳದ ವೈಟ್ ಟೈಗರ್‍ಸ್ ತಂಡಕ್ಕೆ ಹ್ಯಾಟ್ರಿಕ್ ಗೆಲವು

ಜಿಂದಾಲನಲ್ಲಿ ಕ್ರಿಕೇಟ್ ಪಂದ್ಯಾವಳಿ
ಕೊಪ್ಪಳದ ವೈಟ್ ಟೈಗರ್‍ಸ್ ತಂಡಕ್ಕೆ ಹ್ಯಾಟ್ರಿಕ್ ಗೆಲವು
ಬಳ್ಳಾರಿ ಜಿಲ್ಲೆಯ ತೋರಣಗಲ್ ದಲ್ಲಿರುವ ಜಿಂದಾಲ ಕಾರ್ಖಾನೆಯ ಮೈದಾನದಲ್ಲಿ ರವಿವಾರ ಜರುಗಿದ ಕ್ರಿಕೇಟ್ ಪಂದ್ಯಾವಳಿಯಲ್ಲಿ ಜಿಂದಾಲ ಕ್ರಿಕೇಟ್ ತಂಡದೊಂದಿಗೆ ಕೊಪ್ಪಳದ ವೈಟ್ ಟೈಗರ್‍ಸ್ ತಂಡ ರೋಚಕ ಗೆಲುವು ಸಾಧಿಸಿ ಸತತ ಮೂರನೇ ಬಾರಿಗೆ ಜಿಂದಾಲ ತಂಡದೊಂದಿಗೆ ಕ್ರಿಕೇಟ್ ಪಂದ್ಯಾವಳಿಯಲ್ಲಿ ಹ್ಯಾಟ್ರಿಕ್ ಗೆಲುವು ಸಾಧಿಸುವುದರ ಮೂಲಕ ಕೊಪ್ಪಳದ ವೈಟ್ ಟೈಗರ್‍ಸ್ ತಂಡ ಯಶಸ್ಸು ಗಳಿಸಿತು.ಆರಂಭದಲ್ಲಿ ಟಾಸ್ ಗೆದ್ದ ಜಿಂದಾಲ ತಂಡ ನಿಗದಿತ ೪೦ ಒವರಗಳಲ್ಲಿ ೨೫೨ ರನ್ ಗಳಿಸುವುದರೊಂದಿಗೆ ೮ ವಿಕೇಟ್ ಕಳೆದುಕೊಂಡಿತು. ಸದರಿ ತಂಡದಲ್ಲಿ ಶಾಹಿದ್ ಅಲಿ ಉತ್ತಮ ಆಟವಾಡುವುದರೊಂದಿಗೆ ೭೦ ರನ್ ಗಳನ್ನು ಗಳಿಸಿದರು. ಶ್ರೀಧರ ರಡ್ಡಿ ೩೩ ವಿಘ್ನೇಶ ೩೯ ಪುನೀತ್ ೨೬ ರನ್‌ಗಳನ್ನು ಗಳಿಸಿದರು ನಂತರ ಬ್ಯಾಟಿಂಗ್ ಮಾಡಿದ ಕೊಪ್ಪಳದ ವೈಟ್ ಟೈಗರ್‍ಸ್ ತಂಡದ ನಾಯಕ ಅತಿಕ್ ಅಹಮದ್ ೪೮ ರನ್ ಗಳಿಸಿ ಯಶಸ್ವಿ ಆರಂಭಿಕ ಆಟ ಪ್ರದರ್ಶಿಸಿದರು. ಫೀರೋಜ್ ೨೫ ಫೈಯಾಜ್ ೬೨, ನಯಿಮ ೩೪, ಇಬ್ರಾನ್ ೧೫, ಜುಲ್ಫಿಖಾರ೧೩ ರನ್ ಗಳಿಸಿ ೮ ವಿಕೇಟ್ ಕಳೆದುಕೊಂಡು ೨೫೩ ರನ್ ಗಳಿಸುವುದರ ಮೂಲಕ ಜಿಂದಾಲ ತಂಡಕ್ಕೆ ಸೋಲಿಸಿ ಹ್ಯಾಟ್ರಿಕ್ ಜಯ ಸಾಧಿಸಿದರು.

Leave a Reply

Top