ಕೊಪ್ಪಳದ ಜಿಲ್ಲಾ ಕ್ರೀಡಾಂಗಣದಲ್ಲಿ ೭೦ನೇ ಸ್ವಾತಂತ್ರ್ಯ ದಿನಾಚರಣೆ

????????????????????????????????????

????????????????????????????????????

????????????????????????????????????

ಕೊಪ್ಪಳ ನಗರದ ಜಿಲ್ಲಾ ಕ್ರೀಡಾಂಗಣದಲ್ಲಿ ೭೦ನೇ ಸ್ವಾತಂತ್ರ್ಯ ದಿನಾಚರಣೆ ಅಂಗವಾಗಿ ೨೦೧೬ರ ಆಗಸ್ಟ್ ೧೫ ರಂದು ಬೆಳಿಗ್ಗೆ ೯ ಗಂಟೆಗೆ ರಾಷ್ಟ್ರ ಧ್ವಜಾರೋಹಣ ಮಾಡುವ ಸಂದರ್ಭದಲ್ಲಿ ಮಾನ್ಯ ಜಿಲ್ಲಾ ಉಸ್ತುವಾರಿ ಸಚಿವರು ಹಾಗೂ ಉನ್ನತ ಶಿಕ್ಷಣ ಸಚಿವರಾದ ಶ್ರೀ ಬಸವರಾಜ ರಾಯರಡ್ಡಿ ಅವರ ಸಂದೇಶ ಕೊಪ್ಪಳ ಜಿಲ್ಲೆಯ ಸಮಸ್ತ ನಾಗರಿಕ ಬಂಧುಗಳೆ, ಸ್ವಾತಂತ್ರ್ಯ ಹೋರಾಟಗಾರರೆ, ಚುನಾಯಿತ ಪ್ರತಿನಿಧಿಗಳೆ, ಶಾಲಾ ಕಾಲೇಜುಗಳ ಮುದ್ದು ಮಕ್ಕಳೆ, ಹಿರಿಯರೆ, ಮಾಧ್ಯಮದ ಸ್ನೇಹಿತರೆ, ಅಧಿಕಾರಿಗಳೆ ತಮ್ಮೆಲ್ಲರಿಗೂ ೭೦ನೇ ಸ್ವಾತಂತ್ರ್ಯ ದಿನಾಚರಣೆಯ ಹಾರ್ದಿಕ ಶುಭಾಶಯಗಳು.ಇಂದು ೭೦ನೇ ಸ್ವಾತಂತ್ರ್ಯ ದಿನೋತ್ಸವ. ಭಾರತ, ಬ್ರಿಟೀಷರ ಆಳ್ವಿಕೆಯ ಸಂಕೋಲೆಯಿಂದ ಬಿಡುಗಡೆಯಾಗಿ ೬೯ ವರ್ಷ ಕಳೆದಿದೆ. ಭಾರತದಲ್ಲಿ ಮಹಾತ್ಮಾ ಗಾಂಧೀಜಿಯವರ ನೇತೃತ್ವದಲ್ಲಿ ಅಹಿಂಸೆ, ಸತ್ಯಾಗ್ರಹಗಳ ಮೂಲಕ ಬ್ರಿಟೀಷರನ್ನು ಮಣಿಸಿದ ರೀತಿ ವಿಶ್ವ ಮನ್ನಣೆಯನ್ನು ಗಳಿಸಿದೆ. ಸ್ವಾತಂತ್ರ್ಯೋತ್ಸವದ ಈ ಶುಭ ಸಂದರ್ಭದಲ್ಲಿ ಸ್ವಾತಂತ್ರ್ಯ ಹೋರಾಟಗಾರರ ತ್ಯಾಗ, ಬಲಿದಾನ ಮತ್ತು ಕೊಡುಗೆಗಳನ್ನು ನೆನಪಿಸಿಕೊಳ್ಳುವುದು ಹಾಗೂ ಅವರೆಲ್ಲರಿಗೂ ಕೃತಜ್ಞತೆ ಸಲ್ಲಿಸುವುದು ನಮ್ಮ ಆದ್ಯ ಕರ್ತವ್ಯವಾಗಿದೆ.ದೇಶದ ಸ್ವಾತಂತ್ರ್ಯ ಹೋರಾಟದಲ್ಲಿ ಮಹಾತ್ಮಾಗಾಂಧಿರವರು, ಬಾಲಗಂಗಾಧರ ತಿಲಕ್‌ರವರು, ಗೋಪಾಲಕೃಷ್ಣ ಗೋಖಲೆರವರು, ಜವಹರಲಾಲ್ ನೆಹರುರವರು, ಮೌಲಾನಾ ಅಬ್ದುಲ್ ಕಲಾಂ ಆಜಾದ್‌ರವರು, ಸುಭಾಶ್‌ಚಂದ್ರ ಭೋಸ್‌ರವರು, ಸರ್ದಾರ್ ವಲ್ಲಭಭಾಯಿ ಪಟೇಲ್‌ರವರು, ಲಾಲಬಹದ್ದೂರ್ ಶಾಸ್ತ್ರಿರವರು ಹೀಗೆ ನಮ್ಮ ಅನೇಕ ರಾಷ್ಟ್ರೀಯ ಮಹಾಪುರುಷರು, ದೇಶ ಪ್ರೇಮಿಗಳು ತಮ್ಮ ತ್ಯಾಗ ಬಲಿದಾನಗಳನ್ನು ಮಾಡಿದ್ದಾರೆ.

Please follow and like us:
error