You are here
Home > Koppal News-1 > koppal news > ಕೊಪ್ಪಳದಲ್ಲಿ ಮೋದಿಗೆ ಹರಕೆ ಹೊತ್ತ ಅಭಿಮಾನಿ

ಕೊಪ್ಪಳದಲ್ಲಿ ಮೋದಿಗೆ ಹರಕೆ ಹೊತ್ತ ಅಭಿಮಾನಿ

ಸಾಮಾನ್ಯವಾಗಿ ದೇವರ ಉತ್ಸವದಲ್ಲಿ ರಥವನ್ನು ಎಳೆಯುತ್ತಾರೆ. ಇನ್ನೂ ಕೆಲವಡೆ ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆಯ ರಥವನ್ನು ಎಳೆಯುತ್ತಾರೆ. ಆದರೆ, ಪ್ರಧಾನಿ ನರೇಂದ್ರ ಮೋದಿಗೆ ಏನು ತೊಂದರೆಯಾಗ ಬಾರದು, ಯಾರಿಂದಲೂ ಅವರಿಗೆ ಕೇಡಾಗಬಾರದು ಎಂಬ ಉದ್ದೇಶದಿಂದ ಅವರ ಅಭಿಮಾನಿಯೊಬ್ಬ ದೇವರಿಗೆ ಹರಕೆಯ ರಥ ಎಳೆದಿದ್ದಾನೆ.

ದಕ್ಷಿಣ ಭಾರತ ಪ್ರಮುಖ ಧಾರ್ಮಿಕ ಕೇಂದ್ರಗಳಲ್ಲಿ ಒಂದಾಗಿರುವ ಕೊಪ್ಪಳದ ಹುಲಿಗೆಮ್ಮ ದೇವಸ್ಥಾನಲ್ಲಿ ಈ ಅಪರೂಪದ ದೃಶ್ಯ ಕಂಡುಬಂತು. ದೇವಸ್ಥಾನದಲ್ಲಿ ದೇವಿಗೆ ಹರಕೆ ಹೊತ್ತವರು ರಸೀದಿ ಪಡೆದು ತಮ್ಮ ಇಷ್ಟಾರ್ಥ ಸಿದ್ಧಿಗಾಗಿ ಹರಕೆ ತೇರು ಎಳೆಯುತ್ತಾರೆ. ಆದರೆ,  ಅಮವಾಸ್ಯೆಯ ದಿನದಂದು ಪ್ರಧಾನಿ ನರೇಂದ್ರ ಮೋದಿಯವರ ಹೆಸರಿನಲ್ಲಿ ಈ ಹರಕೆಯ ರಥ ಎಳೆಯಲಾಗಿದೆ. ಕೊಪ್ಪಳ ತಾಲೂಕಿನ ಭಾಗ್ಯನಗರ ಗ್ರಾಮದ ನಿವಾಸಿ ವಸಂತ ಪವಾರ ಎಂಬುವರು ಹುಲಿಗೆಮ್ಮ ದೇವಸ್ಥಾನದಲ್ಲಿ ರಸೀದಿ ಪಡೆದು ಹರಕೆ ತೇರು ಎಳೆದರು. ಕಾರ್ತಿಕ ಮಾಸದಲ್ಲಿ ದೇವಿಗೆ ಒಂದು ಕಡೆ ಭಕ್ತರು ದೀಪವನ್ನು ಹಚ್ಚಿ ತಮ್ಮ ಭಕ್ತಿ ಸಮರ್ಪಿ ಸುತ್ತಿದ್ದರೆ ಮತ್ತೊಂದಡೆ ವಸಂತ ಪವಾರ ಮೋದಿ ಹೆಸರಿನಲ್ಲಿ ಹರಕೆ ತೇರು ಎಳೆದಿದ್ದು ವಿಶೇಷವಾಗಿತ್ತು. ವಸಂತ ಪವಾರ ಅವರಿಗೆ ಪ್ರಧಾನಿ ಮೋದಿಯವರ ಬಗ್ಗೆ ಎಲ್ಲಿಲ್ಲದ ಅಭಿಮಾನ. ನೋಟ್‌ಬ್ಯಾನ್‌ ನಂತರ ಮಾಡಿದ ಭಾಷಣದಲ್ಲಿ ತಮಗೆ ಏನಾದರೂ ತೊಂದರೆಯಾಗಲಿದೆ, ನನ್ನ ಜೀವಕ್ಕೆ ಅಪಾಯ ವಾಗಲಿದೆ ಎಂಬಂತೆ ಪ್ರಧಾನಿ ಮಾತನಾಡಿದ್ದು ವಸಂತರವರ ಮನಸ್ಸಿನ ಮೇಲೆ ಪರಿಣಾಮ ಬೀರಿತಂತೆ. ಮೋದಿಗೆ ಏನು ಆಗಬಾರದು, ದುಷ್ಟ ಶಕ್ತಿಗಳಿಂದ ಅವರನ್ನು ಕಾಪಾಡಲಿ ಎಂಬ ಉದ್ದೇಶದಿಂದ ತಮ್ಮ ಮನೆಯ ದೇವರಾಗಿರುವ ಹುಲಿಗಿಯ ಹುಲಿಗೆಮ್ಮ ದೇವಿಯ ಹರಕೆ ತೇರು ಎಳೆದಿರುವುದಾಗಿ ವಸಂತ್‌ ಹೇಳಿದ್ದಾರೆ                                       .

Leave a Reply

Top