ಕುಕನೂರಿನಲ್ಲಿ ಬೆಂಬಲ ಬೆಲೆಯಲ್ಲಿ ಹೆಸರು ಕಾಳು ಖರೀದಿ ಪ್ರಾರಂಭ

????????????????????????????????????

  ಪ್ರಸಕ್ತ ಸಾಲಿನ ಬೆಂಬಲ ಬೆಲೆ ಯೋಜನೆಯಡಿ ಹೆಸರು ಕಾಳು ಖರೀದಿ ಕೇಂದ್ರವನ್ನು ಯಲಬುರ್ಗಾ ತಾಲೂಕು ಕುಕನೂರಿನ ಎಪಿಎಂಸಿ ಪ್ರಾಂಗಣದಲ್ಲಿ ಕೊಪ್ಪಳ ಜಿಲ್ಲಾ ಉಸ್ತುವಾರಿ ಮತ್ತು ಉನ್ನತ ಶಿಕ್ಷಣ ಸಚಿವ ಬಸವರಾಜ ರಾಯರಡ್ಡಿ ಅವರು ಸಾಂಕೇತಿಕವಾಗಿ ಉದ್ಘಾಟಿಸಿದರು.

ನಂತರ ಮಾತನಾಡಿದ ಅವರು ಸರ್ಕಾರದ ಅವರ್ತ ನಿಧಿ ಯೋಜನೆಯಡಿಯಲ್ಲಿ ರೈತರು ತಾವು ಬೆಳೆದ ಬೆಳೆಗಳನ್ನು ಸರ್ಕಾರ ನಿಗದಿ ಪಡಿಸಿದ ಬೆಂಬಲ ಬೆಲೆ ಯೋಜನೆಯಡಿಯಲ್ಲಿ ಮಾರಾಟ ಮಾಡಬಹುದು. ಇತರೆ ಹುಟ್ಟುವಳಿಗಳಾದ ಜೋಳ, ಸಜ್ಜೆ, ಮೆಕ್ಕೆಜೋಳ, ಇತ್ಯಾದಿಗಳು ಸಹಾ ಸದರಿ ಯೋಜನೆಯ ಅಡಿಯಲ್ಲಿ ಸದುಪಯೋಗ ಮಾಡಿಕೊಳ್ಳುವಂತೆ ತಿಳಿಸಿದರು. ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆ ಉಪನಿರ್ದೇಶಕ ವಾಯ್. ಎಚ್. ಲಂಬು ಅವರು ಮಾತನಾಡಿ, ಹೆಸರು ಕಾಳು ಪ್ರತಿ ಕ್ವಿಂ. ಗೆ ರೂ. ೪೮೦೦/- ಗಳಂತೆ ದರ ನಿಗದಿಪಡಿಸಿದ್ದು, ಕೇಂದ್ರ ಸರ್ಕಾರದ ಪ್ರೋತ್ಸಾಹ ಧನ ಪ್ರತಿ ಕ್ವಿಂ.ಗೆ ರೂ. ೪೨೫ ಗಳೂ ಸೇರಿದಂತೆ ಪ್ರತಿ ಕ್ವಿಂ. ಗೆ. ಒಟ್ಟು ರೂ. ೫೨೨೫ ರೂ. ಗಳಾಗಲಿದೆ. ರೈತರು ಮಾರುಕಟ್ಟೆಯಲ್ಲಿ ಹೆಸರು ಕಾಳಿನ ದರ ಕುಸಿತ ಕಂಡುಬಂದಲ್ಲಿ, ಬೆಂಬಲ ಬೆಲೆ ಯೋಜನೆಯಡಿ ಪ್ರಾರಂಭಿಸಿರುವ ಖರೀದಿ ಕೇಂದ್ರದಲ್ಲಿ ಮಾರಾಟ ಮಾಡಬಹುದಾಗಿದೆ. ೪೫ ದಿನಗಳವರೆಗೆ ಈ ಯೋಜನೆ ಜಾರಿಯಲ್ಲಿರುತ್ತದೆ. ಬೆಂಬಲ ಬೆಲೆ ಯೋಜನೆಯಲ್ಲಿ ಹೆಸರು ಕಾಳು ಖರೀದಿಸಲು ನಾಫೆಡ್ ಸಂಸ್ಥೆಯನ್ನು ಖರೀದಿ ಏಜೆನ್ಸಿಯನ್ನಾಗಿ ನಿಗದಿಪಡಿಸಲಾಗಿದೆ ಎಂದರು.
ಈ ಸಂದರ್ಭದಲ್ಲಿ ಮಾಜಿ ಸಚಿವ ಅಮರೇಗೌಡ ಬಯ್ಯಾಪೂರ, ಕುಕನೂರು ಪ. ಪಂ. ಉಪಾಧ್ಯಕ್ಷ ಸಿರಾಜ್ ಕರಮುಡಿ, ಗಣ್ಯರಾದ ಖಾಸಿಂಸಾಬ ತಳಕಲ್ ಬಸವರಾಜ ಉಳಗಡ್ಡಿ, ಈಶಪ್ಪ ಶಿರೂರ, ಸತ್ಯನಾರಾಯಣಪ್ಪ ಹರಪನಹಳ್ಳಿ, ದಾವಲಸಾಬ ಕುದರಿ, ಸಿದ್ದಯ್ಯ ಕಳ್ಳಿಮಠ, ನಿಂಗಪ್ಪ ಗೋರ್ಲೇಕೊಪ್ಪ, ದೇವಪ್ಪ ಸೋಬಾನದ, ಈರಪ್ಪ ಗುತ್ತಿ, ಶೇಖರಪ್ಪ ವಾರದ, ಪ್ರಶಾಂತ ಹಿರೇಮಠ, ರೈತ ಮುಖಂಡರು ಊರಿನ ಗಣ್ಯರು, ಸಮಿತಿಯ ಕಾರ್ಯಕರ್ತರು, ಸಮಿತಿಯ ಕಾರ್ಯದರ್ಶಿಗಳು ಉಪಸ್ಥಿತರಿದ್ದರು.

Please follow and like us:
error