ಕಾರ್ಖಾನೆಯನ್ನು ಬಂದ್ ಮಾಡುವಂತೆ ಆಗ್ರಹ

ಕೊಪ್ಪಳ: ಭದ್ರಾ ಸ್ಟೀಲ್ ಮತ್ತು ಪವರ್ (ಪ್ರೈ)ಲಿ. ಕಾರ್ಖಾನೆಯನ್ನು ಬಂದ್ ಮಾಡುವಂತೆ ಆಗ್ರಹಿಸಿ ಜನ್ಮಭೂಮಿ ರಕ್ಷಣಾ ಪಡೆಯಿಂದ ಮಂಗಳವಾರ ಅಪರ ಜಿಲ್ಲಾಧಿಖಾರಿಗಳಿಗೆ ಮನವಿ ಸಲ್ಲಿಸಲಾಯಿತು. ಮೇಲಿನ ವಿಷಯಕ್ಕೆ ಸಂಬಂಧಿಸಿದಂತೆ, ಜನ್ಮಭೂಮಿ ರಕ್ಷಣಾ ಪಡೆ ಜಿಲ್ಲಾಧ್ಯಕ್ಷರಾದ ಗುರುಸಿದ್ದಪ್ಪ ಭೋವಿ ಹಾಗೂ ಪಧಾದಿಕಾರಿಗಳಿಂದ ತಮ್ಮಲ್ಲಿ ವಿನಂತಿಸಿಕೊಳ್ಳುವುದೆನೇಂದರೆ,ಕೊಪ್ಪಳ ನಗರದಲ್ಲಿ ಭದ್ರಾ ಸ್ಟೀಲ್ ಮತ್ತು ಪವರ್ (ಪ್ರೈ) ಲಿ. ಕಾರ್ಖಾನೆಯು ಕಳೆದ ೮ ಚರ್ಷಗಳಿಂದ ನಿಯಮ ಮೀರಿ ಧೂಳು ಮತ್ತು ತ್ಯಾಜ್ಯ ಹೊರ ಹಾಕುತ್ತಿದೆ. ಈ ಕುರಿತು ಹಲವು ಬಾರಿ ಕಾರ್ಖಾನೆಯ ಆಡಳಿತ ಮಂಡಳಿಗೆ ದೂರು ನೀಡಿದ್ದರೂ ಕ್ರಮ ಕೈಗೊಂಡಿಲ್ಲ. ಪರಿಣಾಮ ಸುತ್ತಮುತ್ತ ೧ ಕಿಮೀ ದೂರದವರೆಗೂ ಇರುವ ಜಮೀನಿನ ಬೆಳೆಯ ಮೇಲೆ ವ್ಯತಿರಿಕ್ತ ಪರಿಣಾಮ ಬೀರುತ್ತಿದೆ. ಹಲವು ಜನರ ಆರೋಗ್ಯ ಮೇಲೆ ಕೆಟ್ಟ ಪರಿಣಾಮ ಉಂಟಾಗಿದೆ. ಹಗಲು ಹೊತ್ತಿನಲ್ಲಿ ಕಾರ್ಖಾನೆಯ ಎತ್ತರದ ಕೊಳಾಯಿ ಮೂಲಕ ಹೊಗೆ ಹೊರ ಬಿಡಲಾಗುತ್ತಿದೆ. ಇದರಿಂದ ನಾನಾ ರೋಗದ ಭೀತಿ ಎದುರಾಗಿದ್ದು, ಈ ಭಾಗದಲ್ಲಿ ಬದನೆಕಾಯಿ, ಬಿಟಿ ಹತ್ತಿ, ತೊಗರಿ, ಭತ್ತ, ಸೇರಿದಂತೆ ಬೆಳೆ ಸಂಪೂರ್ಣ ಹಾಳಾಗಿದೆ. ಇದರಿಂದ ರೈತರಿಗೆ ಹೆಚ್ಚಿನ ನಷ್ಟ ಉಂಟಾಗುತ್ತಿದ್ದು, ಕೂಡಲೇ ಕ್ರಮ ಕೈಗೊಳ್ಳಬೇಕು. ಇಲ್ಲದಿದ್ದ ರಎ ಈ ಭಾಗದ ರೈತರೊಂದಿಗೆ ತಮ್ಮ ಕಛೇರಿಯ ಉಗ್ರ ಹೋರಾಟ ಹಮ್ಮಿಕೊಳ್ಳಲಾಗುಚುದೆಂದು ತಿಳಿಯಪಡಿಸುವ ಮೂಲಕ ಕೂಡಲೇ ಭದ್ರಾ ಸ್ಟೀಲ್ ಮತ್ತು ಪವರ್ (ಪ್ರೈ) ಲಿ, ಕಾರ್ಖಾನೆಯನ್ನು ಬಂದ್ ಮಾಡಲು ಮನವಿ ಕುರಿತು.
ಗುರುಸಿದ್ದಪದಪ ಭೋವಿ ಜಿಲ್ಲಾಧ್ಯಕ್ಷರು, ಎಸ್.ಎಸ್.ಹೃದರ್ ಅಲಿ ಜಿಲ್ಲ ಸಂಚಾಲಕರು, ಎಂ.ಡಿ.ತೌಫಿಕ್ ಜಿಲ್ಲಾ ಉಪಾಧ್ಯಕ್ಷರು, ಉಪ್ಪಾರ ಜಯರಾಮ ಜಿಲ್ಲಾ ಕಾರ್ಯದರ್ಶಿ, ಬಿ. ವಿಶ್ವನಾಥಸ್ವಾಮಿ ಕೊಪ್ಪಳ ತಾಲೂಕ ಕಾರ್ಯದರ್ಶಿ, ಸದಾಶಿವ ಗೋಟೂರು ಪದಾಧಿಕಾರಿಗಳು, ಚಿನ್ನುರಾಜ್ ಪದಾಧಿಕಾರಿಗಳು, ಜಿಲಾನಿಪಾಷಾ ಪದಾಧಿಕಾರಿಗಳು, ಮಂಜುನಾಥ ಪದಾಧಿಕಾರಿಗಳು ಇದ್ದರು.

Leave a Reply