ಔಷಧೀಯ ಸಸ್ಯವನಕ್ಕೆ ವಿದ್ಯಾರ್ಥಿಗಳ ಭೇಟಿ

ಕೊಪ್ಪಳ – ಶ್ರೀ ಗವಿಸಿದ್ಧೇಶ್ವರ ಪದವಿ ಪೂರ್ವ ಮಹಾವಿದ್ಯಾಲಯದ ವಿಜ್ಞಾನ ವಿಭಾಗದ ಸಿ.ಎನ್.ಆರ್ ರಾವ್ ಸೈನ್ಸ್ ಕ್ಲಬ್ ವತಿಯಿಂದ ವಿಜ್ಞಾನ ವಿದ್ಯಾರ್ಥಿಗಳು  ಶ್ರೀ ಗವಿಸಿದ್ಧೇಶ್ವರ ಆಯುರ್ವೇಧ ಸಸ್ಯವನಕ್ಕೆ ಭೇಟಿ ನೀಡಲಾಗಿತ್ತು. ಶ್ರೀ ಜ. ಶಿವಶಾಂತವೀರ ಆಯುರ್ವೇಧ ಮಹಾವಿದ್ಯಾಲಯದ ಪ್ರಾಧ್ಯಾಪಕರಾದ ಡಾ.ಎಸ್.ಎಸ್ ಶಿರೂರಮಠರವರು ವಿದ್ಯಾರ್ಥಿಗಳಿಗೆ ವನದಲ್ಲಿರುವ ನೂರಕ್ಕೂ ಹೆಚ್ಚು ಔಷಧೀಯ ಸಸ್gaಯಗಳ ಮಾಹಿತಿಯನ್ನು ನೀಡಿದರು. ಅವುಗಳ ಪಾರಂಪರಿಕ ಹೆಸರು ಮತ್ತು ಅದರ ಉಪಯುಕ್ತತೆ, ಪ್ರಸ್ತುತ ವೈಧ್ಯಕೀಯ ಪದ್ದತಿಯಲ್ಲಿ ಔಷಧೀಯ ಸಸ್ಯಗಳು ಪುನ: ಮಹತ್ವವನ್ನು ಪಡೆದುಕೊಂಡಿವೆ. ಜಾಂಡಿಸ್, ಪಾರ್ಶ್ವವಾಯು, ಸಕ್ಕರೆ ರೋಗ, ಕ್ಯಾನ್ಸ್‌ರ್ ಮುಂತಾದ ರೋಗಗಳನ್ನು ಗುಣಪಡಿಸಲು ಈ  ಚಿಕಿತ್ಸೆ  ಪರಿಣಾಮಕಾರಿಯಾಗಿದೆ. ಅಲೋಪತಿ ವೈಧ್ಯಪದ್ದತಿಯಿಂದ ಗುಣಪಡಿಸಲಾಗದ ಹಲವಾರು ಕಾಯಿಲೆಗಳನ್ನು ಈ ಔಷಧೀಯ ಸಸ್ಯಗಳ ಉಪಯೋಗದ ಮೂಲಕ ಗುಣಪಡಿಸಬಹುದು ಎಂಬುದರ ಕುರಿತು ಸುಮಾರು ಎರಡು ತಾಸುಗಳವರೆಗೆ ಉಪನ್ಯಾಸ ನೀಡಿದರು. ಈ ಸಂದರ್ಭದಲ್ಲಿ ಪ್ರಾಧ್ಯಾಪಕರಾದ ಡಾ.ವೀರೇಶಕುಮಾರ ಎನ್.ಎಸ್,  ವಿನಾಯಕಕುಮಾರ ಎಚ್.ಎಮ್, ಕು. ಸಹೀದಾ ಜಹೀರಾ ಬೇಗಂ, ಶ್ರೀಮತಿ ಮಮತಾ ಬಿ.ಎ,  ಬಿ.ವಿ ಪ್ರತಾಪ್ ಹಾಗೂ ಡಾ.ಸಿದ್ದಲಿಂಗಪ್ಪ ಕೊಟ್ನೆಕಲ್‌ರವರು ಉಪಸ್ಥಿತರಿದ್ದರು.

Please follow and like us:
error

Related posts

Leave a Comment