ಉದ್ಯೋಗ ಮೇಳ

ಕೊಪ್ಪಳ ಶ್ರೀಗವಿಸಿದ್ಧೇಶ್ವರ ಜಾತ್ರೆಯ ಅಂಗವಾಗಿ ಕಳೆದ ವರ್ಷದಂತೆ ಈ ವರ್ಷವು ಸಹ ನಮ್ಮ ಭಾಗದ ಪ್ರತಿಭಾವಂತ ಅಭ್ಯರ್ಥಿಗಳಿಗೆ ಅನುಕೂಲವಾಗಲು ಪೂಜ್ಯ ಶ್ರೀಗಳು ಬೃಹತ್ ಉದ್ಯೋಗಮೇಳವನ್ನು ಹಮ್ಮಿಕೊಂಡಿದ್ದಾರೆ. ಈ ಉದ್ಯೋಗಮೇಳದಲ್ಲಿ ಶಾಲೆ ತೊರೆದವರು ಅಲ್ಲದೇ ಎಸ್.ಎಸ್.ಎಲ್.ಸಿ, ಪಿಯುಸಿ, ಐ.ಟಿ.ಐ, ಜೆ.ಓ.ಸಿ, ಡಿಪ್ಲೋಮಾ, ಪದವೀಧರರು ಹಾಗೂ ಸ್ನಾತಕೋತ್ತರ ಪದವೀಧರರು, ಜಿ.ಎನ್.ಎಮ್ ನರ್ಸಿಂಗ್, ಬಿ.ಎ.ಎಮ್.ಎಸ್, ಡಿ.ಎಮ್.ಎಲ್.ಟಿ. ಬಿ.ಎಮ್.ಎಲ್.ಟಿ. ಬಿ. ಫಾರ್ಮ, ಡಿ. ಫಾರ್ಮ ಉದ್ಯೋಗಾಕಾಂಕ್ಷಿಗಳು ಭಾಗವಹಿಸಬಹುದು.
ಉದ್ಯೋಗದ ಆಕಾಂಕ್ಷಿಗಳು ಮೊದಲು ತಮ್ಮ ಹೆಸರನ್ನು ದಿನಾಂಕ ೨೦-೦೧-೨೦೧೭ ರ ಒಳಗಾಗಿ ಶ್ರೀ ಗವಿಮಠದ ಮುಂದೆ ಇರುವ ಪೋಲಿಸ್ ಚೌಕಿಯ ಪಕ್ಕದಲ್ಲಿ ಇರುವ  ನೊಂದಣಿ ಕೇಂದ್ರದಲ್ಲಿ ತಮ್ಮ ಹೆಸರನ್ನು ನೊಂದಾಯಿಸಬೇಕು. ನೊಂದಣಿ ಮಾಡಿಸಿದಂತಹ ಅಭ್ಯರ್ಥಿಗಳು  ದಿನಾಂಕ ೨೨-೦೧-೨೦೧೭ ರಂದು ಶ್ರೀಗವಿಸಿದ್ಧೇಶ್ವರ ಪ್ರೌಢಶಾಲೆಯ ಮುಂಭಾಗದ ಆವರಣದಲ್ಲಿ ಬೆಳಿಗ್ಗೆ ೧೦ ರಿಂದ ಜರುಗಲಿರುವ ಕೌಶಲ್ಯ ತರಬೇತಿಯಲ್ಲಿ ಭಾಗವಹಿಸಬೇಕು.
ಈಗಾಗಲೆ ಸುಮಾರು ೮೦೦ ಕ್ಕಿಂತಲೂ ಹೆಚ್ಚು ಉದೋಗಕಾಂಕ್ಷಿಗಳು ಹೆಸರನ್ನು ನೋಂದಾಯಿಸಿದ್ದಾರೆ.  ಅಭ್ಯರ್ಥಿಗಳು ಕೊನೆಯ ದಿನಾಂಕವನ್ನು ಕಾಯದೇ ಹೆಸರು ನೋಂದಾಯಿಸಬೇಕು.  ಉದ್ಯೋಗ ಮೇಳದಲ್ಲಿ ೪೦ ಕ್ಕೂ ಹೆಚ್ಚು ಖಾಸಗೀ ಕಂಪನಿಗಳು ಭಾಗವಹಿಸಲಿದ್ದು ಸುಮಾರು ೭೦೦೦ ಕ್ಕೂ ಹೆಚ್ಚು ಹುದ್ದೇಗಳಿಗೆ ನೇರ ನೇಮಕಾತಿ ಮಾಡಿಕೊಳ್ಳಲಿದ್ದಾರೆ.  ಮೊದಲು ಹೆಸರು ನೊಂದಾಯಿಸಿದ ೫೦೦೦ ಉದ್ಯೋಗಾಕಾಂಕ್ಷಿಗಳಿಗೆ ಮಾತ್ರ ಪ್ರವೇಶ ಸೀಮಿತವಿದೆ.
ಕಳೆದ ವರ್ಷ ೫೦೦೦ ಕ್ಕಿಂತ ಹೆಚ್ಚು ಉದ್ಯೋಗಾಕಾಂಕ್ಷಿಗಳು ಹೆಸರನ್ನು ನೊಂದಾಹಿಸಿದ್ದರು. ೪೦ ಕಂಪನಿಗಳು ಭಾಗವಹಿಸಿದ್ದವು. ಮೇಳದಲ್ಲಿ ಒಟ್ಟು ೯೫೮ ಪ್ರಸ್ತಾವನೆಪತ್ರಗಳನ್ನು ಹಾಗೂ ೧೬೧೩ ಅಭ್ಯರ್ಥಿಗಳು ಮುಂದಿನ ಸುತ್ತಿಗೆ ಆಯ್ಕೆಯಾಗಿದ್ದರು.

ದಿನಾಂಕ ೨೪-೦೧-೨೦೧೭ ಹಾಗೂ ದಿನಾಂಕ ೨೫-೦೧-೨೦೧೭ ರಂದು ಎರಡು ದಿವಸಗಳ ಕಾಲ ಸಂದರ್ಶನವನ್ನು ಏರ್ಪಡಿಸಲಾಗಿದೆ.

Leave a Reply