ಆರೈಕೆದಾರರ ದಿನಾಚರಣೆ

ಸಾಮರ್ಥ್ಯ ಕೊಪ್ಪಳ – ಕೇರರ್‍ಸ್ ವರ್ಲ್ಡವೈಡ್ ವಿಶ್ವಚೇತನ ಆರೈಕೆದಾರರ ಸಂಸ್ಥೆ, ಇನ್ನರ್‌ವ್ಹೀಲ್ ಕ್ಲಬ್ ಕೊಪ್ಪಳ, ಜ್ಞಾನನಿಧಿ ಕ್ಷೇಮಾಭಿವೃದ್ಧಿ ಸಂಸ್ಥೆ ಮತ್ತು ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳ, ಕೊಪ್ಪಳ ಇವರ ಸಂಯುಕ್ತ ಆಶ್ರಯದಲ್ಲಿ -ಸಾಮರ್ಥ್ಯ, ಕುಷ್ಟಗಿ ರಸ್ತೆ, ಕೊಪ್ಪಳದಲ್ಲಿ ಆರೈಕೆದಾರರ ದಿನಾಚರಣೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆ ಕೊಪ್ಪಳದ ಸಭಾಧ್ಯಕ್ಷರಾದ ಡಾ// ಕೆ.ಜಿ.ಕುಲಕರ್ಣಿಯವರು ಕಾರ್ಯಕ್ರಮದ ಉದ್ಘಾಟಕರಾಗಿ ಆಗಮಿಸಿದ್ದರು. ನಾಗರೀಕ ಹಕ್ಕುಗಳ ಹೋರಾಟ ವೇದಿಕೆಯ ರಾಜ್ಯ ಉಪಾಧ್ಯಕ್ಷರು ಮತ್ತು ಜಿಲ್ಲಾ ಅಧ್ಯಕ್ಷರಾಗಿರುವ ಶ್ರೀ ವಿಠ್ಠಪ್ಪ ಗೋರಂಟ್ಲಿರವರು ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದರು. ಮುಖ್ಯ ಅತಿಥಿಗಳಾಗಿ ಕೊಪ್ಪಳ ಜಿಲ್ಲಾ ಆಸ್ಪತ್ರೆಯ ಮನೋವ್ಶೆದ್ಯರಾದ ಡಾ//ಕೃಷ್ಣ ವ್ಹಿ ಓಂಕಾರ, ಕೇರರ್‍ಸ್ ವರ್ಲ್ಡವೈಡ್ ಸಂಸ್ಥಾಪಕರಾದ ಡಾ// ಅನಿಲಕುಮಾರ ಪಾಟೀಲ, ಬಳ್ಳಾರಿ ಜಿಲ್ಲೆಯ ಕುರಿಕೊಪ್ಪದ ಪಶು ವೈದ್ಯಾಧಿಕಾರಿಗಳಾದ ಡಾ// ಜೆ.ಎಸ್.ಅಶ್ವತ್ಥಕುಮಾರ, ಇನ್ನರ್‌ವ್ಹೀಲ್ ಕ್ಲಬ್ ಕೊಪ್ಪಳದ ಕಾರ್ಯದರ್ಶಿಗಳಾದ ಶ್ರೀಮತಿ ಮಮತಾ ಪಾವಲಿಶೆಟ್ಟರ ಹಾಗೂ ಸದಸ್ಯರಾದ ಡಾ//ರಾಧಾ ಕುಲಕರ್ಣಿ, ಶ್ರೀ ಅಕ್ಕಮಹಾದೇವಿ ಮಹಿಳಾ ಮಂಡಳ ಕೊಪ್ಪಳದ ಅಧ್ಯಕ್ಷರಾದ ಶ್ರೀಮತಿ ಕೋಮಲಾ ಕುದರಿಮೋತಿ, ಜ್ಞಾನನಿಧಿ ಕ್ಷೇಮಾಭಿವೃದ್ಧಿ ಸಂಸ್ಥೆಯ ಅಧ್ಯಕ್ಷರಾದ ಶ್ರೀಮತಿ ಶಾರದಾ ಪಾನಘಂಟಿ ಮತ್ತು ಕಾರ್ಯದರ್ಶಿಗಳಾದ ಶ್ರೀಮತಿ ತ್ರಿಶಾಲಾ, ಸಾಮರ್ಥ್ಯ ಕೊಪ್ಪಳದ ಸಹಾಯಕ ನಿರ್ದೇಶಕರಾಗಿರುವ ಶ್ರೀ ಬಿ ಹಂಪಣ್ಣ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು. ಸಾಮರ್ಥ್ಯ ಸಂಸ್ಥೆಯ ಕುರಿತಾಗಿ ಬಿ ಹಂಪಣ್ಣರವರು ಪ್ರಾಸ್ತಾವಿಕವಾಗಿ ಮಾತನಾಡಿ ಸಮೂಹ ಒಂದು ಸರ್ಕಾರೇತರ ಅಭಿವೃದ್ಧಿ ಸಂಸ್ಥೆಯಾಗಿದ್ದು ೧೯೮೬ ರಿಂದ ಸಂಕಷ್ಟ ವರ್ಗದ ಸಮುದಾಯಗಳಲ್ಲಿ ಹಲವು ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಾ ಬಂದಿದೆ. ವಿಶೇಷವಾಗಿ ಸಂಸ್ಥೆಯ ಸಾಮರ್ಥ್ಯ ವಿಭಾಗವು ರಾಯಚೂರು ಮತ್ತು ಕೊಪ್ಪಳ ಜಿಲ್ಲೆಗಳಲ್ಲಿ ವಿಕಲಚೇತನರಿಗಾಗಿ ಪುನಃಶ್ಚೇತನ ಮತ್ತು ಸಂಘಟನಾ ಕಾರ್ಯಕ್ರಮಗಳಲ್ಲಿ ತೊಡಗಿಸಿಕೊಂಡಿದೆ ಎಂದರು. ಭಾರತೀಯ ರೆಡ್‌ಕ್ರಾಸ್ ಸಂಸ್ಥೆಯ ಸಭಾಧ್ಯಕ್ಷರಾದ ಡಾ// ಕೆ.ಜಿ.ಕುಲಕರ್ಣಿಯವರು ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿ ನಾವೆಲ್ಲರೂ ಒಂದಿಲ್ಲ ಒಂದು ರೀತಿಯಲ್ಲಿ ಆರೈಕೆದಾರರು, ಯಾವುದೇ ನಿರೀಕ್ಷೆಯಿಲ್ಲದೇ ಆರೈಕೆ ಮಾಡುವ ಆರೈಕೆದಾರರಲ್ಲಿ ತಮ್ಮ ಕಷ್ಟದ ಪರಿಸ್ಥಿತಿಯಲ್ಲಿಯೂ ಸಹಾಯ ಮಾಡುವ ಮನೋಭಾವನೆ ಇರುತ್ತದೆ, ಇತ್ತೀಚಿನ ದಿನಗಳಲ್ಲಿ ಆರೈಕೆದಾರರ ಸಮಸ್ಯೆ ಹೆಚ್ಚಾಗುತ್ತಿದೆ, ಇವರಿಗೆ ಸ್ಪಂದಿಸಬೇಕಾದ ಅವಶ್ಯವಿದೆ ಎಂದರು. ಆರೈಕೆದಾರರ ರೋಜನೆಯ ಪ್ರಗತಿಯ ವರದಿಯನ್ನು ಈ ಸಂಧರ್ಭದಲ್ಲಿ ಬಿಡುಗಡೆ ಮಾಡಲಾಯಿತು ಮತ್ತು ಆರೈಕೆದಾರರ ಸಧ್ಯದ ಪರಿಸ್ಥಿತಿಯ  ವರದಿಯನ್ನು ಸಹ ಬಿಡುಗಡೆ ಮಾಡಲಾಯಿತು. ಡಾ//ಅನಿಲಕುಮಾರ ಪಾಟೀಲ್‌ರವರು ಮಾತನಾಡಿ ಆರೈಕೆದಾರರ ಕಲ್ಪನೆ ವಿವರಿಸುತ್ತಾ ಆರೈಕೆಯಲ್ಲಿ ತೊಡಗಿರುವವರು ಹೆಚ್ಚಾಗಿ ತಾಯಂದಿರು, ಮಕ್ಕಳು, ಕುಟುಂಬದ ಸದಸ್ಯರು ಅಥವಾ ಸ್ನೇಹಿತರೇ ಆಗಿರುತ್ತಾರೆ. ಅವರು ಎದುರಿಸುತ್ತಿರುವ ಸಂಕಷ್ಟಗಳು, ಸಮಸ್ಯೆಗಳು, ಅವರ ಸಬಲೀಕರಣಕ್ಕಾಗಿ ಸರಕಾರ ಸಂಘ ಸಂಸ್ಥೆಗಳು ಗುರುತಿಸಿ ಸ್ಪಂದಿಸಬೇಕಾದ ಅಗತ್ಯತೆ ಕುರಿತಾಗಿ ಮಾತನಾಡಿದರು. ಶೇ. ೯೧% ರಷ್ಟು ಮಹಿಳೆಯರೇ ಆರೈಕೆದಾರರಾಗಿದ್ದಾರೆ. ಪ್ರಸ್ತುತ ಕೇರರ್‍ಸ್ ವರ್ಲ್ಡವೈಡ್ ಸಂಸ್ಥೆಯು ಭಾರತ ಮತ್ತು ನೇಪಾಳ ಸೇರಿದಂತೆ ೪೫೦೦ ಆರೈಕೆದಾರರೊಂದಿಗೆ ಕಾರ್ಯನಿರ್ವಹಿಸುತ್ತಿದೆ. ಇತ್ತೀಚಿಗೆ ವಿಶ್ವಸಂಸ್ಥೆಯಿಚಿದ ಮನ್ನಣೆ ಸಿಕ್ಕಿದೆ ಎಂದರು. ಡಾ// ಜೆ.ಎಸ್.ಅಶ್ವತ್ಥಕುಮಾರರವರು ಮಾತನಾಡಿ ಆರೈಕೆದಾರರ ಸಮಸ್ಯೆಗಳನ್ನು ಆಲಿಸಿ ಮನೋಸ್ಥೈರ್ಯ ಹೇಳುವುದು ಅವಶ್ಯವಾಗಿದೆ ಎಂದರು. ಡಾ// ಕೃಷ್ಣ ವ್ಹಿ ಓಂಕಾರ ರವರು ಮಾತನಾಡಿ ಸಮೂಹ ಸಾಮರ್ಥ್ಯ ಮತ್ತು ಕೇರರ್‍ಸ್ ವರ್ಲ್ಡವ್ಶೆಡ್ ಸಂಸ್ಥೆಯ ಕೆಲಸ ನಿಜಕ್ಕೂ ಶ್ಲಾಘನೀಚಿiವಾvದೆ. ಆರೈಕೆದಾರರು ಖಿನ್ನತೆಗೆ ಒಳಗಾಗಿರುತ್ತಾರೆ. ಇವರಿಗೆ ಸ್ಪಂದಿಸಬೇಕಾದ ಅಗತ್ಯವಿದೆ ಎಂದರು. ಅಧ್ಯಕ್ಷೀಯ ಭಾಷಣವನ್ನು ಮಾತನಾಡಿದ ಶ್ರೀ ವಿಠ್ಠಪ್ಪ ಗೋರಂಟ್ಲಿಯವರು ಸಮೂಹ ಸಾಮರ್ಥ್ಯವು ಕತ್ತಲೆಯಲ್ಲಿ ಮಿಂಚುವ ವಜ್ರದಂತೆ ಕಾರ್ಯನಿರ್ವಹಿಸುತ್ತಿದೆ. ಪುಟ್ಟರಾಜ ಗವಾಯಿಗಳ ಸಾಧನೆಯನ್ನು ಹೇಳುತ್ತಾ ನಮ್ಮ ಜಿಲ್ಲೆಯಲ್ಲಿ ೪೦ ಸಾವಿರ ಅಂಗವಿಕಲರು ಇದ್ದಾರೆ ಮತ್ತು ಅಷ್ಟೇ ಸಂಖ್ಯೆಯ ಆರೈಕೆದಾರರು ಇದ್ದಾರೆ, ಆರೈಕೆದಾರರ ಸಂಕಷ್ಟಗಳು ಹೊರಗೆ ಕಾಣುವುದಿಲ್ಲ. ಆರೈಕೆದಾರರ ನೋವುಗಳಿಗೆ ಸ್ಪಂದಿಸಿ ನಾವೆಲ್ಲರೂ ಒಟ್ಟಾಗಿ ಬಾಳೋಣ, ಒಟ್ಟಾಗಿ ಇರೋಣ ಎಂದರು.ಕೆಲವು ಆರೈಕೆದಾರರು ತಮ್ಮ ಜೀವನದ ಅನುಭವಗಳನ್ನು ಹಂಚಿಕೊಂಡರು. ಹಾಗೆಯೇ ಆರೈಕೆದಾರರಿಗೆ ಏರ್ಪಡಿಸಿದ್ದ ವಿವಿಧ ಸ್ಪರ್ಧೆಗಳಲ್ಲಿ ವಿಜೇತರಾದವರಿಗೆ ಇನ್ನರ್‌ವ್ಹೀಲ್ ಕ್ಲಬ್ ವತಿಯಿಂದ ಬಹುಮಾನ ವಿತರಿಸಲಾಯಿತು. ಕಾರ್ಯಕ್ರಮದ ನಿರೂಪಣೆಯನ್ನು ಸಂಸ್ಥೆಯ ಕಾರ್ಯಕ್ರಮ ವ್ಯವಸ್ಥಾಪಕರಾದ ಹೆಚ್.ಎನ್.ಬಸಪ್ಪರವರು, ಸ್ವಾಗತ ಭಾಷಣವನ್ನು ಸಿಬ್ಬಂದಿಯಾದ ಪ್ರಸಾದರವರು ಮತ್ತು ವಂದನಾರ್ಪಣೆಯನ್ನು ನಟೇಶರವರು ನೆರವೇರಿಸಿದರು.

Please follow and like us:
error