You are here
Home > Koppal News-1 > koppal news > ಅದ್ಭುತವಾಗಿ ಪ್ರದರ್ಶನವಾದ ಚೋರಚರಣದಾಸ ನಾಟಕ

ಅದ್ಭುತವಾಗಿ ಪ್ರದರ್ಶನವಾದ ಚೋರಚರಣದಾಸ ನಾಟಕ

ದಿನಂಕಃ ೧೭/೯/೨೦೧೬ ರಂದು ಶನಿವಾರ ಸಹಜಾಟ್ರಸ್ಟ್ ಕೊಪ್ಪಳ, ಕರ್ನಾಟಕ ನಾಟಕ ಅಕಾಡೆಮಿ ಸಹಯೋಗದಲ್ಲಿ ಹೈದರಾಬಾದ್ ಕರ್ನಾಟಕ ವಿಮೋಚನಾ ದಿನಾಚರಣೆ ಮತ್ತು ರಂಗಶಿಬಿರದ ಮುಕ್ತಾಯ ಸಮಾರಂಭ ಹಾಗೂ ನಾಟಕ ಪ್ರದರ್ಶನ ಕಾರ್ಯಕ್ರಮವು ವಿದ್ಯಾವಿಕಾಸ ಶಾಲೆ ಭಾಗ್ಯನಗರ ಕೊಪ್ಪಳದಲ್ಲಿ ಶ್ರೀಯುತ ಶಂ.ನಿಂ. ತಿಮ್ಮನಗೌಡ್ರ ಬರಹಗಾರರು ಕೊಪ್ಪಳ ಇವರ ಉದ್ಘಾಟನೆಯೊಂದಿಗೆ ಪ್ರಾರಂಭವಾಯಿತು.

????????????????????????????????????

ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಾದಿರಾಜ್‌ರವರು ವಹಿಸಿಕೊಂಡಿದ್ದರು. ಬೆಳೆಗ್ಗೆ ೯ಕ್ಕೆ ಪ್ರಾರಂಭವಾದ ಈ ಕಾರ್ಯಕ್ರಮದಲ್ಲಿ ಅತಿಥಿಗಳಾಗಿ ಶ್ರೀಮತಿ ಶಾರದಾ ಪಾನ ಘಂಟಿಯವರು ಮತ್ತು ಶ್ರೀಮತಿ ಜಯಲಕ್ಷ್ಮಿ ಶಾಲಾ ಶಿಕ್ಷಕರು ಭಾಗವಹಿಸಿದ್ದರು. ಕಾರ್ಯಕ್ರಮದ ಪ್ರಾರ್ಥನೆಯನ್ನು ಸಹಜಕಲಾತಂಡದ ಸುಮಾರವರು ನೆರೇವೇರಿಸಿದರು. ಸಹಜಾ ಟ್ರಸ್ಟನ್ ಕಾರ್ಯದರ್ಶಿ ಮತ್ತು ನಾಟಕದ ನಿರ್ದೇಶಕಿಯಾದ ಶ್ರೀಮತಿ ಶೀಲಾ ಹಾಟಕುರಿಕಿಯವರು ತಮ್ಮ ಪ್ರಾಸ್ತಾವಿಕ ಭಾಷಣದಲ್ಲಿ ಶಾಲೆಯ ಸಹಭಾಗಿತ್ವದ ಬಗ್ಗೆ ಶ್ಲಾಘತಿಸಿದರು ಮತ್ತು ಮಕ್ಕಳ ಬೆಳವಣಿಗೆಯಲ್ಲಿ ರಂಗಭೂಮಿಯ ಪ್ರಾಮುಖ್ಯತೆಯ ಬಗ್ಗೆ ಮಾತನಾಡಿದರು. ಮತ್ತು ಮಕ್ಕಳು ಇಂತಹ ಅವಕಾಶಗಳು ಬಂದಾಗ ಮುಜುಗರದಿಂದ ಹಿಂಜರಿಯದೆ ತಮ್ಮ ಕೌಶಲ್ಯದ ಪ್ರದರ್ಶನಕ್ಕಾಗಿ ಪ್ರಥಮವಾಗಿ ಭಾಗವಹಿಸಬೇಕು ಎಂದು ಸಹ ಹೇಳಿದರು.

Leave a Reply

Top