ಅಗಳಕೇರಾ ಗ್ರಾಮದಲ್ಲಿ ರಾಜೀವ ಗಾಂಧಿ ಸೇವಾ ಕೇಂದ್ರ ಉದ್ಘಾಟನೆ

ಕೊಪ್ಪಳ- ತಾಲೂಕಿನ ಅಗಳಕೇರಾ ಗ್ರಾಮದಲ್ಲಿ ೨೦೧೨-೧೩ನೇ ಸಾಲಿನ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ ಅಡಿಯಲ್ಲಿ ನಿರ್ಮಿಸಿದ ಭಾರತ್ ನಿರ್ಮಾಣ ರಾಜೀವ ಗಾಂಧಿ ಸೇವಾ ಕೇಂದ್ರ ಕಾರ್ಯಕ್ರಮವನ್ನು ಏರ್ಪಡಿಸಲಾಗಿತ್ತು..ಶಾಸಕರು ಮಾತನಾಡುತ್ತಾ ನರೇಗಾ ಯೋಜನೆಯು ಉತ್ತಮವಾಗಿದ್ದು ಗ್ರಾಮೀಣ ಜನತೆ ಭಾಗಿಯಾಗಿ ಉತ್ತಮವಾದ ಕೆಲಸಗಳನ್ನು ನಿರ್ಮಿಸಿಕೊಳ್ಳಿ ವ್ಯಯಕ್ತಿಕವಾಗಿ ಕೃಷಿ ಹೊಂಡ, ಹೊಲದ ಬದುವಿನಲ್ಲಿ ಸಸಿ ನೆಡುವುದು, ಚರಂಡಿ ರಸ್ತೆ, ಸ್ಮಶಾನ ನಿರ್ಮಾಣ ಇನ್ನೂ ಮುಂತಾದ ಯೋಜನೆಗಳ ಸದುಪಯೋಗ ಪಡೆದುಡಿಕೊಳ್ಳಿ ಎಂದು ತಿಳಿಸಿದರು.ತಾ.ಪಂ ಅಧ್ಯಕ್ಷರಾದ ಬಾಲಚಂದ್ರನ್‌ರವರು ಮಾತನಾಡುತ್ತಾ ಮುಖ್ಯಮಂತ್ರಿಯವರ 21aga ಅಂಶಗಳಲ್ಲಿ ರಾಜೀವಗಾಂಧಿ ಸೇವಾ ಕೇಂದ್ರ ಕೂಡಾ ಒಂದಾಗಿದ್ದು ಇದರ ಉಪಯೋಗವನ್ನು ಎಲ್ಲರೂ ಪಡೆದುಕೊಳ್ಳಬೇಕು ಎಂದು ತಿಳಿಸಿದರು.ದೇವರಾಜ ಕಿನ್ನಾಳ ಯುನಿಸೆಫ್ ರವರು ರ0ಗೋಲಿ ಸ್ಪರ್ಧೇಯಲ್ಲಿ ಭಾಗವಹಿಸಿದ ಮಹಿಳಾ ಮತ್ತು ವಿದ್ಯಾರ್ಥಿನಿಯರಿಗೆ ಬಹುಮಾನ ವಿತರಿಸಿದರು. ಈ ಕಾರ್ಯಕ್ರದ ಅಧ್ಯಕ್ಷತೆಯನ್ನು ಗ್ರಾ.ಪಂ ಅಧ್ಯಕ್ಷರಾದ ಆರ್.ಟಿ ಮುಲ್ಲಾ ವಹಿಸಿದ್ದರು, ಉದ್ಘಾಟನೆಯನ್ನು ಕೆ.ರಾಘವೇಂದ್ರ ಹಿಟ್ನಾಳ ಶಾಸಕರು ವಹಿಸಿದ್ದರು.ಮಖ್ಯಅತಿಥಿಗಳಾಗಿ ಬಾಲಚಂದ್ರನ್ ತಾ.ಪಂ ಅಧ್ಯಕ್ಷರು ಕೊಪ್ಪಳ, ಶ್ರೀಮತಿ ಗಾಯಿತ್ರಿ ವೆಂಕಟೇಶ ವಡ್ಡರ್, ಶ್ರೀಮತಿ ಸುಶೀಲಮ್ಮ ವಡ್ಡರ್, ಜಿ.ಪಂ ಮಾಜಿ ಅಧ್ಯಕ್ಷರಾದ ಟಿ. ಜನಾರ್ಧನ ಹುಲಿಗಿ, ಗೀತಾ ಬಸವರಾಜ ಭಜಂತ್ರಿ ಗ್ರಾ.ಪಂ ಉಪಾಧ್ಯಕ್ಷರು ಅಗಳಕೇರಾ, ದೇವರಾಜ ಕಿನ್ನಾಳ ಯುನಿಸೆಫ್ ಘಟಕ ಕೊಪ್ಪಳ ಇವರು ಭಾಗವಹಿಸಿದ್ದರು ವೀರಭದ್ರಯ್ಯ ಬಿ.ಎಮ್ ನಿರೂಪಿಸಿದರು, ಶೇಖರಪ್ಪ ಸಿಂದೋಗಿ ಸ್ವಾಗತಿಸಿದರು, ಪಿ.ಡಿ.ಓ ನಾಗರಾಜ ಎಸ್.ಹೆಚ್ ಪಂಚಾಯತಿಯಲ್ಲಿ ನಡೆಯುವ ನರೇಗಾ ಚೆಟುವಟಿಕೆಗಳ ಬಗ್ಗೆ ಮತ್ತು ಸ್ವಚ್ಛತ್ತೆಯ ಬಗ್ಗೆ ಮಾಹಿತಿ ನೀಡಿದರು.

Leave a Reply