ಅಂಬೇಡ್ಕರ ಅವಾಸ ಯೋಜನೆಲ್ಲಿ ನಿಯಮಮೀರಿ ಫಲಾನುಭವಿಗಳ ಆಯ್ಕೆ

೨೦೧೫-೧೬ ನೇ ಸಾಲಿನಲ್ಲಿ ತಾವರಗೇರಾ ಪಟ್ಟಣಪಂಚಾಯತ್ ಅಂಬೇಡ್ಕರ ಅವಾಸ ಯೋಜನೆಯಡಿಲ್ಲಿ ಮಂಜೂರು ಮಾಡಲಾದ ಮನೆಗಳಲ್ಲಿ ನಿಯಮಮೀರಿ ಫಲಾನುಭವಿಗಳ ಆಯ್ಕೆ

ಕೊಪ್ಪಳ- ಕುಷ್ಟಗಿ ತಾಲೂಕಿನ ತಾವರಗೇರಾ ಪಟ್ಟಣ ಪಂಚಾಯತಿಯಲ್ಲಿ ೨೦೧೫-೧೬ ನೇ ಸಾಲಿನಲ್ಲಿ ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಠ್ತ ಪಂಗಡದ ಫಲಾನುಭವಿಗಳಿಗೆ 140ali ಮನೆಗಳು ಮಂಜುರಾಗಿದ್ದು ಮಂಜುರಾದ ಮನೆಗಳಲ್ಲಿ ಗರಿಷ್ಠ ಮಟ್ಟದ ಫಲಾನುಭವಿಗಳು ಈಗಾಗಲೆ ಸರಕಾರದ ವಿವಿಧ ಯೊಜನೆಗಳಲ್ಲಿ ಮನೆಗಳನ್ನು ಪಡೆದಿರುತ್ತಾರೆ. ಈಗಾಗಲೆ ಫಲಾನುಭವಿಗಳ ಪಟ್ಟಿಯನ್ನು ಬಿಡುಗಡೆಮಾಡಲಾಗಿದ್ದು ಪಟ್ಟಿಯಲ್ಲಿ ಸರಕಾರದ ನಿಯಮಗಳನ್ನು ಮೀರಿ ಅಧಿಕಾರಿಗಳು ಮತ್ತು ಪಟ್ಟಣ ಪಂಚಾಯತಿಯ ಸದ್ಯಸರು ಪ್ರಭಾವಬೀರಿ ನಿರ್ಗತಿಕರಿಗೆ ಮತ್ತು ವಸತಿ ರಹಿತರಿಗೆ ಸಿಗಬೇಕಾದ ಯೊಜನೆಯ ಸೌಲಭ್ಯವನ್ನು ತಮ್ಮ ಮನಬಂದತೆ ವಿತರಿಸಿರುವುದು, ಪಟ್ಟಣ ಪಂಚಾಯತಿಯು ನಿಯಮಗಳ ಸ್ಪಷ್ಟ ಉಲ್ಲಂಘನೆಯಾಗಿದೆ. ತಾವುಗಳು ಈ ಕೊಡಲೆ ಮಂಜೂರಾತಿ ಪ್ರಕ್ರಿಯೆಗೆ ತಡೆನೀಡಿ ಪರಿಶೀಲನೆಮಾಡಿ ಅರ್ಹ ಫಲಾನುಭವಿಗಳಿಗೆ ಸರಕಾರದ ಯೊಜನೆಯ ಲಾಭಪಡೆಯಲು ಅನುವು ಮಾಡಿಕೊಡಬೇಕೆಂದು.ವೆಲ್ಪರ್ ಪಾರ್ಟಿ ಆಫ್ ಇಂಡಿಯಾ ತಾವರಗೇರಾ ಘಟಕವು ಆಗ್ರಹಿಸಿ ಮನವಿ ಸಲ್ಲಿಸಲಾಯಿತು.ಈ ಸಂಧರ್ಭದಲ್ಲಿ ನಜೀರ ಅಹ್ಮದ್ ಮುದಗಲ್ ಜಿಲ್ಲಾ ಅಧ್ಯಕ್ಷರು ವೆಲ್ಫೇರ್ ಪಾರ್ಟಿ ಆಫ್ ಇಂಡಿಯಾ ಕೊಪ್ಪಳ, ಮಹ್ಮದ್ ಅಲೀಮುದ್ದಿನ್ ಜಿಲ್ಲಾ ಕಾರ್ಯದರ್ಶಿಗಳು, ಶಬ್ಭಿರ ಗುಳೆಕಾರ ನಗರ ಘಟಕಾ ಅಧ್ಯಕ್ಷರು, ಮೌಲಾಹುಸೇನ್ ಹಣಗಿ ಜಿಲ್ಲಾ ಅಧ್ಯಕ್ಷರು ಕಾರ್ಮಿಕ ಘಟಕ, ಮೆಹಬೂಬ್ ಮಣ್ಣೂರ ಜಿಲ್ಲಾ ಅಧ್ಯಕ್ಷರು ಯುವ ಮೊರ್ಚಾ, ನಾಸಿರುದ್ದಿನ್ ಮಾಳೇಕೊಪ ಉಪಾಧ್ಯಕ್ಷರು ನಗರ ಘಟಕ, ರಾಜಾ ನಾಯ್ಕ ಕುಷ್ಟಗಿ, ಅಂಬ್ರೇಶ, ಬಾಳಪ್ಪ ಮದ್ದೀನ, ಫಯಾಜುದ್ದೀನ್ ತಾವರಗೇರಾ ಇನ್ನೂ ಮುಂತಾದವರು ಉಪಸ್ಥಿತರಿದ್ದರು.

Please follow and like us:
error