ಅಂತರಾಷ್ಟೀಯ ಅಕ್ಯಾಪ್ರೆಶರ್ ಸಪ್ತಾಹ ೨೦೧೭

ಕೊಪ್ಪಳ: ದಿ ೨೯ ರಂದು ನಡೆದ ಗ್ರೀನ್ ಲೈಪ್ ಅಕ್ಯಾಪ್ರೆಶರ್ ಶಿಕ್ಷಣ ಮತ್ತು ಸಮಾಜ ಸಂಸ್ಥೆ (ರಿ) ಕೊಪ್ಪಳ ಇವರಿಂದ ದಿನಾಂಕ ೪ ರಿಂದ ೧೦ ರವರಗೆ ಜರಗುವ ಉಚಿತ ಅಕ್ಯಾಪ್ರೆಶನ್ ಚಿಕಿತ್ಸಾ ಶಿಬಿರವನ್ನು ಸನ್ಮಾನ್ಯ ಶ್ರೀ ಸಂಗಣ್ಣ ಕರಡಿ ಸಂಸದರು ಕೊಪ್ಪಳ ಶಿಬಿರ ಉದ್ಘಾಟನಾವನ್ನು ಜ್ಯೋತಿಬೆಳಗಿಸುವದರ ಮೂಲಕ ಮಾತನಾಡುತ್ತಾ ಭಾರತಿಯ ಯೋಗಪದ್ದತಿಯಲ್ಲಿ ಒಂದು ಅಂಗವಾದ ಅಕ್ಯುಪ್ರೆಶರ್ ಚಿಕಿತ್ಸೆಯು ಹಲವಾರು ರೋಗಗಳು ನಿವಾರಣೆಗಾಗಿ ಬಡವ ಹಾಗೂ ಜನಸಾಮಾನ್ಯರಿಗೆ ಕೈಗೆಟುಕುವ ಚಿಕಿತ್ಸಾಪದ್ದತಿ ಇದಾಗಿದೆಯೆಂದು ಈ ಚಿಕಿತ್ಸೆಯ ಬಗ್ಗೆ ಬಹಲಷ್ಟು ಜನರಿಗೆ ತಿಳುವಳಿಕೆ ಇಲ್ಲಾವಾಗಿವೆ ಆದ್ದರಿಂದ ಸಾಮಾಜಸೇವಕರಾಗಿ ಅಕ್ಯುಪ್ರೆಶರ್ ಪರಿಣಿತರಾದ ಮೋಹಿನಖಾನ್ ಅವರು ಜನಸಾಮಾನ್ಯರಿಗೆ ಇದರ ಸದುಪಯೋಗವಾಗಲೆಂದು ಇಂತಹ ಮಹತ್ವದ ಕಾರ್ಯಕ್ರಮ ಹಮ್ಮಿಕೊಂಡಿದ್ದಾರೆ. ಇದರಿಂದ ಸಮಸ್ತ ಜನತೆಗೆ ಸದುಪಯೋಗವಾಗಲೆಂದು ಹಾರೈಸಿದರು, ಸಮಾರಂಬದಲ್ಲಿ ನಗರಸಭೆ ಕೊಪ್ಪಳದ ಸ್ಥಾಯಿ ಸಮೀತಿ ಅಧ್ಯಕ್ಷರಾದ ಖಾಜಾವಲಿ ಬನ್ನಿಕೊಪ್ಪ ಅವರು ಅಧ್ಯಕ್ಷತೆಯನ್ನು ವಹಿಸಿದರು, ಶಂಕ್ರಪ್ಪ ಈಶ್ವರಗೌಡ್ರ್ ತರಕಾರಿ ವರ್ತಕರು, ಶ್ರೀಪಾದಪ್ಪ ಅಧಿಕಾರಿ ತಾಲೂಕು ಅಧ್ಯಕ್ಷರು ಜೆ.ಡಿ.ಎಸ್ ಕೊಪ್ಪಳ sಸುರೇಶ ಜೈನ್ ಲೈನ್ಸಕ್ಲಬ್ ಸದಸ್ಯರು ದೊಡ್ಡನಗೌಡ ಓಜಿನಹಳ್ಳಿ, ಕರಬಸಪ್ಪ ಲೆಕ್ಕಿಹಾಳ ಗ್ರೀನ್‌ಲೈಪ್ ಸಂಸ್ಥೆಯ ನಿರ್ದೇಶಕರು ಉಪಸ್ಥತರಿದ್ದರು.
ಸದರ ಸಂಸ್ಥೆಯ ನಿರ್ದೇಶಕರಾದ ಮಾಹಂತೆಶ ನಾಗರಾಳ ಕಾರ್ಯಕ್ರಮ ನಿರೂಪಿಸಿ, ಪ್ರಾಸ್ತಾವಿಕವಾಗಿ ಮಾತನಾಡಿ ಕೊನೆಯಲ್ಲಿ ವಂದಿಸಿದರು. ದಿ ೪ ರಿಂದ ೧೦ ರವರಗೆ ಪ್ರತಿದಿನ ೧೦ ಗಂಟೆಯಿಂದ ಮದ್ಯಾನ ೩ ರರವರಗೆ ಉಚಿತ ಚಿಕಿತ್ಸಾ ಶಿಬಿರವಿದ್ದು ಎಲ್ಲರೂ ಇದರ ಪ್ರಯೋಜ ಪಡೆದುಕೊಳ್ಳಬೆಕೆಂದು ತಿಳಿಸಿದ್ದಾರೆ
ಉಚಿತ ಚಿಕಿತ್ಸಾ ಶಿಬಿರದ ಸ್ಥಳ ಗ್ರೀನಲೈಪ ಅಕ್ಯುಪ್ರೆಶನ್ ಶಿಕ್ಷಣ ಮತ್ತು ಸಮಾಜ ಸಂಸ್ಥೆ (ರಿ) ಕೊಪ್ಪಳ ಓರಿಯಂಟಲ್ ಬ್ಯಾಂಕ್ ಎದುರು ಗದಗ ರಸ್ತೆ ಕೊಪ್ಪಳ

Please follow and like us:

Leave a Reply