ಕೆ.ಎ.ಎಸ್. ಮತ್ತು ಐ.ಎ.ಎಸ್ ಪೂರ್ವ ತಯಾರಿ ಅಭ್ಯರ್ಥಿಗಳ ಪರದಾಟ

ಕೆಎಎಸ್-ಪರೀಕ್ಷೆಗಳು
ಕೊಪ್ಪಳ ೦೮  :ಹಿಂದುಳಿದ ವರ್ಗಗಳ ಇಲಾಖೆ ಯಿಂದ ಕರೆಯಲ್ಪಟ್ಟ ಕೆ.ಎ.ಎಸ್ ಮತ್ತು ಐ.ಎ.ಎಸ್ ಪೂರ್ವ ತಯಾರಿ ಉಚಿತ ತರಬೇತಿಯು ತಂತ್ರಾಂಶದೋಷ ದಿಂದ ಸಾವಿರಾರು ಕನಸು ಹೊತ್ತ ಹಿಂದುಳಿದ ವರ್ಗಗಳ ಅಭ್ಯರ್ಥಿಗಳ ನಿರಿಕ್ಷೆಗೆ ತಣ್ಣೀರು ಎರಚಿದಂತಾಗಿದೆ.
ಇದೇ ೦೪ನೇ ತಾರೀಖಿನಂದು ಇಲಾಖೆಯು ವಿಜಯವಾಣಿ ದಿನಪತ್ರಿಕೆಯಲ್ಲಿ ಜಾಹೀರಾತು ಪ್ರಕಟ ಮಾಡಿ ಆನ್ ಲೈನ್‌ನಲ್ಲಿ ಅಭ್ಯರ್ಥಿಗಳು ವಿವರವನ್ನು ತುಂಬಿ ಇದೇ ತಿಂಗಳು ೧೦ ರೊಳಗೆ ಅರ್ಜಿಯನ್ನು ಸಲ್ಲಿಸಬೇಕು ಎಂದು ಹೇಳಿ ಹೆಚ್ಚಿನ ವಿವರಗಳಿಗೆ ಇಲಾಖೆ ವೆಬ್ ಸೈಟ್ ನೋಡಿ ಎಂದು ಕೊಟ್ಟಿದರು. ಆದರೆ ಅವರು ಕೊಟ್ಟ ತಂತ್ರಾಂಶದಲ್ಲಿ ತರಬೇತಿಗೂ ಮುನ್ನ ಪ್ರವೇಶ ಪರಿಕ್ಷೆಯನ್ನು ನಡೆಸುವುದಾಗಿತ್ತು ಯಾವ ಜಿಲ್ಲೆಗಳಲ್ಲಿ ಪರಿಕ್ಷೇ ನಡೆಸುತ್ತಾರೆ ಎಂದು ಪಟ್ಟಿ ಇಲ್ಲದ ಕಾರಣ ಅರ್ಜಿ ಪೂರ್ಣಗೊಳ್ಳುತ್ತಿಲ್ಲ. ಇದೇ ವಿಷಯವನ್ನು ಹಿಂದುಳಿದ ಇಲಾಖೆಯ ಅಧಿಕಾರಿಯಲ್ಲಿ ಚರ್ಚಿಸಿದಾಗ ಇದು ಬೆಂಗಳೂರಿನ ಕೇಂದ್ರ ಕಛೇರಿಗೆ ಸಂಬಂಧಿಸಿದ ವಿಷಯ ನಾವೇನು ಮಾಡಲು ಸಾಧ್ಯವಿಲ್ಲ ಎಂದು ಕಛೇರಿಯ ನಂಬರ್ ಕೊಟ್ಟು ಕೈತೊಳೆದು ಕೊಂಡರು. ಕಛೇರಿಗೆ ಫೋನ್ ಮಾಡಿದರೆ ಯಾರೂ ಕರೆಯನ್ನು ಸ್ವೀಕರಿಸುತ್ತಿಲ್ಲ. ಇದು ಬರೀ ಬೆಂಗಳೂರು ಆಕಾಂಕ್ಷಿಗಳಿಗೆ ಅಷ್ಟೇ ಸಿಮೀತವಾದ ತರಬೇತಿಯೇ ಎಂದು ಗೊತ್ತಾಗುತ್ತಿಲ್ಲ. ಇಲಾಖೆಯವರು ಸುಮ್ಮನೆ ಹೆಸರಿಗೆ ಮಾತ್ರ ಈ ರೀತಿ ಅರ್ಜಿಯನ್ನು ಕರೆಯುತ್ತಾರೆ ಎಂದು ಅಭ್ಯಥಿಗಳು ಗೊಂದಲ ಗೊಂಡಿದ್ದಾರೆ.
ಆದಷ್ಟು ಬೇಗ ಇಲಾಖೆ ಇದನ್ನು ಪರಿಶೀಲಿಸಿ ಸರಿಪಡಿಸಿ ದಿನಾಂಕವನ್ನು ಇನ್ನು ೫ ದಿನಗಳ ಕಾಲ ವಿಸ್ತರಿಸಬೇಕು ಎಂದು ಅಭ್ಯರ್ಥಿಗಳು ವಿನಂತಿಸಿಕೊಳ್ಳುತ್ತಿದ್ದಾರೆ.

Leave a Reply