ಮಹಾದಾಯಿ ಜಲವಿವಾದ ಪ್ರಧಾನ ಮಂತ್ರಿ ಮಧ್ಯಸ್ಥಿಕೆ ವಹಿಸಲು ಆಗ್ರಹ

gangavati-news karave-gangavati ಬಗೆಹರಿಸುವ ಕುರಿತು ಮಾನ್ಯ ತಹಶೀಲ್ದಾರರ ಮುಖಾಂತರ ಮನವಿ.ಮಹಾದಾಯಿ ನದಿಯಿಂದ ೭.೫ ಟಿ.ಎಂ.ಸಿ ನೀರನ್ನು ಏತ ನೀರಾವರಿ ಮೂಲಕ ಮಲಪ್ರಭಾಗೆ ಹರಿಸಬೇಕೆಂಬ ಕರ್ನಾಟಕ ಮಧ್ಯಂತರ ಅರ್ಜಿಯನ್ನು ನ್ಯಾ. ಜಿ.ಎಂ ಪಾಂಚಾಳ ನೇತೃತ್ವದ ತ್ರಿಸದಸ್ಯ ನ್ಯಾಯಾಧೀಕರಣ ವಜಾಗೊಳಿಸಿದ್ದು, ಮಲಪ್ರಭಾ ಕಣಿವೆಯ ಕುಡಿಯುವ ನೀರಿನ ಬೇಡಿಕೆಗೆ ತಾತ್ಕಾಲಿಕವಾಗಿ ಪರಿಹಾರ ಕಂಡುಕೊಳ್ಳುವ ರಾಜ್ಯದ ಅಪೇಕ್ಷೆಗೆ ಹಿನ್ನಡೆಯಾಗಿದೆ. ಇದರಿಂದ ಉದ್ದೇಶಿತ ಕುಡಿಯುವ ನೀರಿನ ಯೋಜನೆಗೆ ೭.೫ ಟಿ.ಎಂ.ಸಿ ನೀರನ್ನು ಬಳಸಿಕೊಳ್ಳುವ ಆಸೆಗೆ ತಣ್ಣೀರೆರಚಿದೆ.
ಕಾರಣ  ಪ್ರಧಾನ ಮಂತ್ರಿಗಳು, ಮಧ್ಯಸ್ಥಿಕೆ ವಹಿಸಿ ಕರ್ನಾಟಕದ ಜನತೆಗೆ ಅತ್ಯಾವಶ್ಯಕವಾಗಿರುವ ಕಳಸಾ-ಬಂಡೂರಿ ಏತ ನೀರಾವರಿ ಯೋಜನೆಗೆ ಹಸಿರು ನಿಶಾನೆ ತೋರಿಸಿ ಜನತೆಯ ಕುಡಿಯುವ ನೀರಿನ ಸಮಸ್ಯೆಯನ್ನು ಬಗೆಹರಿಸಬೇಕಾಗಿ ವಿನಂತಿ.

-ಸಹಿ- ಮಂಜುನಾಥ ಪತ್ತಾರ್ ಗಂಗಾವತಿ ತಾಲೂಕ ಅಧ್ಯಕ್ಷರು, ಕನ್ನಡಸೇನೆ, ಕರ್ನಾಟಕ -ಸಹಿ- ಖಾಜಾವಲಿ ಗಂಗಾವತಿ ತಾಲೂಕ ಅಧ್ಯಕ್ಷರು, ಕ.ರ.ವೇ. ಶೆಟ್ಟಿ ಬಣ -ಸಹಿ- ಶರಣಪ್ಪ ಮಿಣಜಿಗಿ ಗಂಗಾವತಿ ತಾಲೂಕ ಅಧ್ಯಕ್ಷರು, ಜಯ ಕರ್ನಾಟಕ ಸಂಘಟನೆ -ಸಹಿ- ಗುರುರಾಜ ಗಂಗಾವತಿ ತಾಲೂಕ ಅಧ್ಯಕ್ಷರು, ಕ.ರ.ವೇ. ಸ್ವಾಭಿಮಾನಿ ಬಣ

Please follow and like us:
error