ಭಾಗ್ಯನಗರ ಪಟ್ಟಣ ಪಂಚಾಯತಿಗೆ ನಾಳೆ ಚುನಾವಣೆ – ಸಿದ್ದತೆ ಪೂರ್ಣ

ಭಾಗ್ಯನಗರ ಪಟ್ಟಣ ಪಂಚಾಯತಿಗೆ ಚುನಾವಣೆ   ನಾಳೆ ನಡೆಯಲಿದೆ. ಚುನಾವಣೆಗೆ ಸಂಬಂಧಿಸಿದಂತೆ ಸೂಕ್ತ ಸಿದ್ದತೆಗಳನ್ನು ಮಾಡಿಕೊಳ್ಳಲಾಗಿದ್ದು ಇಡೀ ಪಟ್ಟಣದಲ್ಲಿ 19 ವಾರ್ಡಗಳಿದ್ದು 46 ಜನರು ತಮ್ಮ ರಾಜಕೀಯ ಅದೃಷ್ಟದ ಪರೀಕ್ಷೆಗೆ ಸಿದ್ದವಾಗಿದ್ದಾರೆ. ಕಳೆದ ಒಂದು ವಾರದಿಂದ ನಿರಂತರವಾಗಿ ವಿವಿಧ ನಾಯಕರು ಪಟ್ಟಣದಲ್ಲಿ ಪ್ರಚಾರ ಮಾಡಿದ್ದಾರೆ. ಕಾಂಗ್ರೆಸ್ ಮತ್ತು ಬಿಜೆಪಿ ನಡುವೆ ನೇರಾನೇರ ಸ್ಪರ್ಧೆ ಇದ್ದು ಪಕ್ಷೇತರರು ಮತ್ತು ಜೆಡಿಎಸ್ ಕೇವಲ ನೆಪಮಾತ್ರಕ್ಕೆ ಎನ್ನುವಂತಾಗಿದ್ದಾರೆ. ನೀತಿ ಸಂಹಿತೆ ಉಲ್ಲಂಘನೆಯ ಹಲವಾರು ಘಟನೆಗಳು ನಡೆದಿವೆ ಎನ್ನುವ ದೂರುಗಳಿದ್ದಾಗ್ಯೂ ಸಹ ಅಧಿಕಾರಿಗಳು ಯಾವುದೇ ರೀತಿಯ ಉಲ್ಲಂಘನೆಯಾಗಿಲ್ಲ. ಎನ್ನುತ್ತಿದ್ಧಾರೆ. ಪಟ್ಟಣ ಪಂಚಾಯತ್ ಚುನಾವಣೆಯಲ್ಲಿ ಒಟ್ಟು 14,915 ಮತದಾರರು ತಮ್ಮ ಹಕ್ಕನ್ನು ಚಲಾವಣೆ ಮಾಡಲಿದ್ದಾರೆ. ಇವರಲ್ಲಿ 7548 ಪುರುಷರು,  7367 ಮಹಿಳಾ ಮತದಾರರಿದ್ದಾರೆ. 110 ಚುನಾವಣಾ ಸಿಬ್ಬಂದಿಗಳು, 2ಸಿಪಿಐ, 4 ಪಿಎಸ್ಐ, ಎಎಸೈ5  ಸೇರಿದಂತೆ 60 ಜನ ಪೊಲೀಸರು ಚುನಾವಣಾ ಬಂದೋಬಸ್ತಿನಲ್ಲಿದ್ಧಾರೆ

bhagyanagar-election-koppal

Please follow and like us:
error