You are here
Home > Koppal News-1 > APMC ಚುನಾವಣೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳ ಜಯಬೇರಿ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

APMC ಚುನಾವಣೆ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳ ಜಯಬೇರಿ- ಶಾಸಕ ಕೆ.ರಾಘವೇಂದ್ರ ಹಿಟ್ನಾಳ

apmc_election_koppalಕೊಪ್ಪಳ ೦೫ :  ಹಲಗೇರಿ ಗ್ರಾಮದಲ್ಲಿ ಹಿರೇಸಿಂದೋಗಿ ಎ.ಪಿ.ಎಮ್.ಎಸಿ ಚುನಾವಣಾ ಅಭ್ಯರ್ಥಿಯಾದ ಹನಮರಡ್ಡಿ ಹಂಗನಕಟ್ಟಿಯವರ ಪರ ಮತ ಯಾಚನೆ ಮಾಡಿ ಮಾತನಾಡಿದ ಶಾಸಕ ಕೆ.ರಾಘವೇಂದ್ರ ಹಿಟ್ನಾಳರವರು ರೈತರಿಗೆ ಇನ್‌ಪುಟ್ ಸಬ್ಸಿಡಿ ಮುಖಾಂತರ ಬೆಳೆ ಪರಿಹಾರ ನೀಡಿದ ಯೋಜನೆ ದೇಶದಲ್ಲಿಯೇ ಕರ್ನಾಟಕ ಪ್ರಥಮ ರಾಜ್ಯವಾಗಿದೆ, ರಾಜ್ಯದ ಮುಖ್ಯಮಂತ್ರಿಗಳಾದ ಸಿದ್ದರಾಮಯ್ಯನವರು ನೀರಾವರಿ ಯೊಜನೆಗಳಿಗೆ ಸುಮಾರ ೩೫ ಸಾವಿರ ಕೋಟಿ ಅನುಧಾನ ನೀಡಿ ಕೃಷಿಕರರಿಗೆ ಹೆಚ್ಚು ಅನುಕೂಲ ಮಾಡಿರುವುದು ಹಾಗೂ ರೈತರ ಪರ ಅನೇಕ ಯೋಜನೆಗಳನ್ನು ಜಾರಿಗೆ ತಂದಿದ್ದು ಕಾಂಗ್ರೇಸ್ ಸರಕಾರವಾಗಿದೆ, ರಾಜ್ಯದ ಆವರಿಸಿರುವ ಬರ ಅಧ್ಯಯನಕ್ಕಾಗಿ ವಿಶೇಷ ತಂಡಗಳನ್ನು ರಚಿಸಿ ರೈತರ ಕಷ್ಟ ಕಾರ್ಪಣ್ಯಗಳಿಗೆ, ಸರಕಾರವು ತೀವ್ರಗತಿಯಲ್ಲಿ ಸ್ಪಂದನೆ ಮಾಡುತ್ತಿದೆ ರೈತರ ಚುನಾವಣೆಂಯೆಂದೆ ಬಿಂಬಿತವಾಗುವ ಕೃಷಿಉತ್ಪನ್ನ ಮಾರುಕಟ್ಟಿ ಸಮಿತಿಯಲ್ಲಿ ಕಾಂಗ್ರೇಸ್ ಬೆಂಬಲಿತ ಅಭ್ಯರ್ಥಿಗಳು ಜಯಬೇರಿ ಬಾರಿಸಿ ಕೊಪ್ಪಳ ಎ.ಎಪಿ.ಎಮ್.ಸಿ.ಯು ಕಾಂಗ್ರೆಸ್ ಮಡಿಲಿಗೆ ಬರುವುದು ನಿಶ್ಚೀತ ಎಂದು ಹೇಳಿದರು
ಈ ಸಂದರ್ಭದಲ್ಲಿ ಜಿ.ಪಂ ಅಧ್ಯಕ್ಷ ಎಸ್.ಬಿನಾಗರಳ್ಳಿ, ಕುಡಾ ಅಧ್ಯಕ್ಷ ಸೈಯದ್ ಜುಲ್ಲು ಖಾದ್ರಿ, ಮುಖಂಡರುಗಳಾದ ಎಚ್.ಎಲ್ ಹಿರೇಗೌಡ್ರು, ಈಶಪ್ಪ ಮಾದಿನೂರ, ಕೇಶವರಡ್ಡಿ, ನಿಂಗಪ್ಪ ಯತ್ನಟ್ಟಿ, ವೇಂಕಣ್ಣ ಕೋಳಿ, ಕಾಟನ್ ಪಾಷ, ಶಂಕರಪ್ಪ ಅಂಗಡಿ, ಪ್ರಸನ್ನಾ ಗಡಾದ, ಕೂರಗೋಡ ರವಿ, ಹನಯಮಂತ ಹಳ್ಳಿಕೇರಿ, ಅಶೋಕ ಅಬ್ಬಿಗೇರಿ, ದೇವೆಂದ್ರಪ್ಪ ವದಗನಾಳ, ವೀರಭದ್ರಗೌಡ,ಹನುಮಂತ ಅಬ್ಬಿಗೇರಿ, ಗುಡ್‌ದಪ್ಪ, ಪಕ್ಷದ ವಕ್ತಾರ ಅಕ್ಬರ್ ಪಲ್ಟನ್ ಉಪಸ್ತಿತರಿದರು.

Leave a Reply

Top