500,1000 ನೋಟ್ ಗಳು ಬಂದ್ : ವಿದೇಶಿಯರಿಗೂ ತಟ್ಟಿದ ಬಿಸಿ

money_exchange_tourist_in_problem_hampi_virupapurgardi

ಐದು ನೂರು ಮತ್ತು ಸಾವಿರ ರೂಪಾಯಿ ನೋಟ್ ಗಳು ಬಂದ್ ಹಿನ್ನಲೆಯಲ್ಲಿ ವಿದೇಶಿಯರಿಗೂ ಈ ಬಿಸಿ ತಟ್ಟಿರುವ ಘಟನೆ ಕೊಪ್ಪಳದಲ್ಲಿ ನಡೆದಿದೆ. ಗಂಗಾವತಿ ತಾಲೂಕಿನ ವಿರುಪಾಪುರ ಗಡ್ಡೆಗೆ ಬರುವ ವಿದೇಶಿಯರಿಗೆ ನೋಟ್ ಬಂದ್ ನಿಂದ ಸಮಸ್ಯೆಯಾಗಿದ್ದು, ದಿನ ನಿತ್ಯ ಊಟಕ್ಕೂ ಪರದಾಟ ಅನುಭವಿಸುತ್ತಿದ್ದಾರೆ. ಈ ವಿದೇಶಿಯರು ಗಂಗಾವತಿಯ ಬ್ಯಾಂಕ್ ಗಳಿಗೆ ಭೇಟಿ ನೀಡಿ 500 ರೂಪಾಯಿಗಳ ಹಳೆಯ ನೋಟ್ ಗಳನ್ನು  ನೋಟುಗಳ ಬದಲಾವಣೆ ಮಾಡಿಕೊಳ್ಳತ್ತಿದ್ದು. ಇಂದು ಕೂಡ ಸ್ಪೇನ್ ದೇಶದ ಜೊಡಿಗಳು ಎಸ್ ಬಿಎಚ್ ಬ್ಯಾಂಕ್ ಗೆ ಭೇಟಿ ನೀಡಿ ಹಣ ಬದಲವಣೆ ಮಾಡಿಕೊಂಡಿದ್ದಾರೆ. ವಿದೇಶಿಯರು ಪಾಸ ಪೊಟ್೯  ನೀಡಿ ಹಣ 4 ಸಾವಿರ ರೂಪಾಯಿ ಹಣ ಬದಲವಣೆ ಮಾಡಿಕೊಂಡಿದ್ದು. ಈ ವೇಳೆ ಮಾತನಾಡಿದ ವಿದೇಶಿಯರು ಈ ದೇಶದಲ್ಲಿ ಕಪ್ಪು ಹಣ  ಬದಲವಣೆಗೆ 500 ಮತ್ತು 1000 ರೂಪಾಯಿ ಬಂದ್ ಮಾಡಿದ್ದು ಒಳ್ಳೆಯ ಬೆಳವಣಿಗೆ ಅಂದ್ರು. ನಮ್ಮಗೆ ಸಣ್ಣಪುಟ್ಟ ಸಮಸ್ಯೆಯಾದ್ರು ಇದು ಒಳ್ಳೆಯ ನಿಧಾ೯ರ ಅಂತಾ ಹೇಳಿದ್ರು. ಈ ವೇಳೆ ಬ್ಯಾಂಕ್ ಮ್ಯಾನೇಜರ್ ಮಾತನಾಡಿ ಕಳೆದ ಮೂರು ನಾಲ್ಕು ದಿನಗಳಿಂದ ಅನೇಕ ವಿದೇಶಿಯರು ಬ್ಯಾಂಕ್ ಗೆ ಭೇಟಿ ನೀಡಿದ್ದು. ನಾವು ಅವರಿಗೆ ಹಣ ಬದಲಾವಣೆ ಮಾಡಿಕೊಂಡುತ್ತಿದ್ದವೆ ಅಂತಾ ತಿಳಿಸಿದ್ರು.

Please follow and like us:
error