19 ವರ್ಷದ ಯುವತಿಯನ್ನು 55ರ ಮುದುಕ 2 ಸಾವಿರಕ್ಕೆ ಖರೀದಿಸಿದ !!!

koppal-gangavati-story

 

ಎರಡು ಸಾವಿರ ರೂಪಾಯಿಗೆ  ಸಂಬಂಧಿಗಳೇ ಮಾರಿದರು, ಖರೀದಿಸಿದವರು ಮಾತು ಕೇಳಲಿಲ್ಲವೆಂದು ಹಿಗ್ಗಾಮುಗ್ಗಾ ಹೊಡೆದರು, ಎರಡು ಸಾವಿರ ಕೊಟ್ಟಿದ್ದೇನೆ ಗಂಡು ಮಗು ಬೇಕೆಂದ ಅಜ್ಜನ ವಯಸ್ಸಿನವನು ದಿಕ್ಕು ಕಾಣದ ಯುವತಿ ಪೊಲೀಸರ ಮೊರೆ ಹೋದಳು  ಇವಳ ಹೆಸರು  ಜೈತುನಬೀ ( 19)  ಮೂಲತಃ  ಸಿಂದನೂರಿನವಳು. ಇವಳ ಸೋದರಮಾವಂದಿರು ಇವಳನ್ನು 2 ಸಾವಿರ ರೂಪಾಯಿಗಾಗಿ ಮರಳಿ ಗ್ರಾಮದ ಭಾಷಾಸಾಬ ನಿಗೆ ಮದುವೆ ಮಾಡಿಕೊಟ್ಟಿದ್ದಾರೆ. ಅಜ್ಜನ ವಯಸ್ಸಿನವನೊಂದಿಗೆ ಮದುವೆಯಾಗಲೊಲ್ಲೆ ಎಂದರೂ ಕೇಳದೇ  ಮದುವೆ ಮಾಡಿದ್ದಾರೆ. ಗಂಗಾವತಿ ತಾಲೂಕಿನ ಮರಳಿ ಗ್ರಾಮದ ಭಾಷಾಸಾಬ (55) ನಿಗೆ ಈಗಾಗಲೇ ಮದುವೆಯಾಗಿ ಆರು ಜನ ಹೆಣ್ಣು ಮಕ್ಕಳಿದ್ದಾರೆ. ಅಲ್ಲದೇ ಮೊಮ್ಮಕ್ಕಳನ್ನೂ ಕಂಡಿದ್ದಾನೆ ಈ ಬಾಷಾಸಾಬ.  ವಂಶೋದ್ದಾರಕ  ಬೇಕೆಂದು ಸಿಂಧನೂರಿನ ಜಯತುನ್‌ಭೀ  ಸಹೋದರ ಮಾವನಿಗೆ ಎರಡು ಸಾವಿರ ರೂ. ನೀಡಿ ಒತ್ತಾಯಪೂರ್ವಕವಾಗಿ ಮದುವೆಯಾಗಿದ್ದಾನೆ. ತಂದೆ ವಯಸ್ಸಿನ ವ್ಯಕ್ತಿಯನ್ನು ವಿವಾಹವಾಗಲು ಜಯತುನ್‌ಬೀ ನಿರಾಕರಿಸಿದ್ದರೂ. ಜೀವಬೇದರಿಕೆ ಹಾಕಿದ ಸಹೋದರ ಮಾವ ಇಸ್ಮಾಯಿಲ್ ಎರಡು ತಿಂಗಳ ಹಿಂದೆ ಮದುವೆ ಮಾಡಿಸಿದ್ದಾನೆ. ವಯೋವೃದ್ಧನಾಗಿರುವ ಭಾಷಾಸಾಬ್‌ನ ಜತೆ ಜೀವನ ನಡೆಸಲು ನಿರಾಕರಿಸಿರುವ ಜಯತುನ್‌ಬೀಗೆ ನಿತ್ಯ ಕಿರುಕುಳ ನೀಡಿದ್ದಾರೆ. ಭಾಷಾಸಾಬ್‌ನ ಮೊದಲ ಪತ್ನಿ ಹುಸೇನ್‌ಬೀ ಪತಿಯೊಂದಿಗೆ ಸಂಸಾರ ನಡೆಸಬೇಕೆಂದು ಕಿರುಕುಳ ನೀಡಿ ಹೊಡೆದಿದ್ದಾಳೆ. ತಲೆಗೆ ತೀವ್ರ ಪೆಟ್ಟಾಗಿರುವ ಕಾರಣ ಜಯತುನ್‌ಬಿಗೆ ಶಸ್ತ್ರ ಚಿಕಿತ್ಸೆ ಕೂಡ ಮಾಡಿಸಲಾಗಿದೆ.  ನಿತ್ಯ ಮನೆಯಲ್ಲಿ ನಡೆಯುತ್ತಿದ್ದ ಜಗಳ, ಗುರುವಾರ ಮರಳಿ ಗ್ರಾಮದ ಬೀದಿಗೆ ಬಂದಿದೆ. ಭಾಷಾಸಾಬ್‌ನ ಮೊದಲ ಹೆಂಡ್ತಿ ಜಯತುನ್‌ಬಿಗೆ ದಿನವೂ ಹೊಡೆಯುತ್ತಿರುವದನ್ನು ನೋಡಿ ಸಾಕಾದ  ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಸ್ಥಳಕ್ಕೆ ಆಗಮಿಸಿದ ಪೊಲೀಸರು ಭಾಷಾಸಾಬ್, ಪತ್ನಿ ಹುಸೇನ್‌ಬೀ ಹಾಗೂ ಜಯತುನ್‌ಬೀಗೆ ಠಾಣೆಗೆ ಕರೆದುಕೊಂಡು ಬಂದು ವಿಚಾರಣೆ ನಡೆಸಿದ್ದಾರೆ. ಜಯತುನ್‌ಬೀ ತಾಯಿ ಹೆಸರು ಹುಸೇನ್‌ಬೀ, ತಂದೆ ಇಸ್ಮಾಯಿಲ್ ಸಿಂಧನೂರಿನ ಹೊಟೇಲ್‌ವೊಂದರಲ್ಲಿ ಕೆಲಸ ಮಾಡುತ್ತಾರೆ. ಇವರಿಗೆ ಇಬ್ಬರು ಹೆಣ್ಣು ಮಕ್ಕಳು. ಒಬ್ಬಳನ್ನು ಬಿಜಾಪುರಕ್ಕೆ ಕೊಟ್ಟು ಮದುವೆ ಮಾಡಿಸಿದ್ದಾರೆ. ಎರಡನೇಯವಳು ಜಯತುನ್‌ಬೀ. ಸಹೋದರ ಮಾವ ಮಸ್ಕಿ ಗ್ರಾಮದಲ್ಲಿ ಇರುತ್ತಾನೆ. ಕಳೆದ ಎರಡು ತಿಂಗಳ ಹಿಂದೆ ಭಾಷಾಸಾಬ್‌ನಿಂದ ಎರಡು ಸಾವಿರ ರೂ. ಪಡೆದು ಮಸ್ಕಿ ಗ್ರಾಮದಲ್ಲಿಯೇ ಮದುವೆ ಮಾಡಿಸಿದ್ದಾನೆ. ಗಂಡು ಮಗುವಿನ ಆಸೆಗೆ ಭಾಷಾಸಾಬ್‌ನ ಮೊದಲ ಪತ್ನಿ ಹುಸೇನ್‌ಬೀ ಎರಡನೇ ಮದುವೆಗೆ ಸಹಮತಿ ನೀಡಿ ನೀಡಿದ್ದಾಳೆ. ತಂದೆಯ ವಯಸ್ಸಿನವನೊಂದಿಗೆ ಜೀವನ ನಡೆಸಲು ನಿರಾಕರಿಸುತ್ತಿರುವ ಕಾರಣ ಕಿರುಕುಳ ನೀಡುತ್ತಿದ್ದರು.  ಭಾಷಾಸಾಬ್‌ನ ಹೆಂಡ್ತಿ ಜಯತುನ್‌ಬೀಗೆ ಹೊಡೆದಿರುವ ಕಾರಣ ತಲೆಗೆ ಪೆಟ್ಟಾಗಿ ಶಸ್ತ್ರಚಿಕಿತ್ಸೆ ಮಾಡಿಸಿದ್ದಾರೆ.  ಇಲ್ಲಿ ನಡೆಯುತ್ತಿರುವ ಘಟನೆಯನ್ನು ಜಯತುನ್‌ಬೀ ಸಿಂಧನೂರಿನಲ್ಲಿರುವ ತಂದೆ-ತಾಯಿ ಮುಂದೆ ಹೇಳಿದರು  ನಿರ್ಲಕ್ಷ್ಯ ಮಾಡಿದ್ದಾರೆ. ನಾನು ತವರು ಮನೆಗೆ  ಹೋಗಬೇಕು. ಆತನದೊಂದಿಗೆ ಜೀವನ ನಡೆಸಲು ಆಗುವುದಿಲ್ಲ ಎಂದು ಜಯತುನ್‌ಬೀ ಮಹಿಳಾ ಸಾಂತ್ವಾನ ಕೇಂದ್ರ ಅಕಾರಿಗಳ ಮುಂದೆ ನಡೆದ ಘಟನೆಯನ್ನು ವಿವರಿಸಿದ್ದಾಳೆ.   ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆ ಅಕಾರಿಗಳು ಸಂತ್ವಾನ ಕೇಂದ್ರಕ್ಕೆ ಆಗಮಿಸಿ ಜಯತುನ್‌ಬೀಗೆ ಆಗಿರುವ ಸಮಸ್ಯೆಯ ಬಗ್ಗೆ ವಿಚಾರಣೆ ನಡೆಸಿದ್ದಾರೆ.

ಗಂಡುಮಗು ಬೇಕೆಂದ ಅಜ್ಜನ ವಯಸ್ಸಿನವನಿಗೆ ಈ ಮುಗ್ದ ಹೆಣ್ಣು ಮಗಳನ್ನು ಮದುವೆ ಹೆಸರಿನಲ್ಲಿ ಮಾರಿದವರಿಗೆ ಶಿಕ್ಷೆಯಾಗಲಿ ಬಡ ಅಮಾಯಕ ಹೆಣ್ಣು ಮಕ್ಕಳಿಗೆ ರಕ್ಷಣೆ ಸಿಗುವಂತಾಗಲಿ.

Leave a Reply