ಜಾನಪದ ಗೀತೆ ರಾಜ್ಯಮಟ್ಟದಲ್ಲಿ ಸಮಾಧಾನಕರ ಬಹುಮಾನ.

ಕೊಪ್ಪಳ ಏ. ೨೭. ಜಿಲ್ಲಾ ಕನ್ನಡ ಜಾನಪದ ಪರಿಷತ್ ನಿಂದ ವಿಜೇತರಾಗಿ ಉತ್ತರ ಕನ್ನಡ ಜಿಲ್ಲೆ ಗೋಕರ್ಣದ ಕಡಲತೀರದಲ್ಲಿ ಜರುಗಿದ ರಾಜ್ಯಮಟ್ಟದ ಜಾನಪದ ಗೀತೆ ಸ್ಪರ್ಧೆಯಲ್ಲಿ ಕೊಪ್ಪಳದ ತಂಡ ಸಮಾಧಾನಕರ ಬಹುಮಾನ ಪಡೆದೊಕೊಂಡಿದೆ. ಗೋಕರ್ಣದ ಕಡಲತೀರದಲ್ಲಿ ನಡೆದೆ ಸುಂದರ ಸಮಾರಂಭದಲ್ಲಿ ರಾಜ್ಯದ ವಿವಿಧ ಜಿಲ್ಲೆಗಳಿಂದ ಆಗಮಿಸಿದmanju gondbal sanmana gokarana ತಂಡಗಳೊಂದಿಗೆ ಪೈಪೋಟಿ ನೀಡಿ ಸಮೂಹ ಗೀತೆ ಸ್ಪರ್ಧೆಯಲ್ಲಿ ಅಳವಂಡಿಯ ಶಿವರಾಜ ಪೂಜಾರ, ಸೋಮಶೇಖರ ಸಾಲಿಮಠ, ಮಂಜುನಾಥ ಉಪ್ಪಾರ, ಮೂಕಪ್ಪ ಹೆಚ್. ಮತ್ತು ಹನುಮಪ್ಪ ಕುಂಟಗೇರಿ ತಂಡ ಸಮಾಧಾನಕರ ಬಹುಮಾನ ಗಳಿಸಿದ್ದು ಜಿಲ್ಲೆಯ ಅನೇಕರು ಅಭಿನಂದನೆ ಸಲ್ಲಿಸಿದ್ದಾರೆ. ವಿಜೇತ ತಂಡಕ್ಕೆ ನಗದು ಬಹುಮಾನವನ್ನು ನೀಡಲಾಯಿತು. ಅಲ್ಲದೇ ನಿರಂತರವಾಗಿ ಕ್ರಿಯಾಶೀಲವಾಗಿ ಕೆಲಸ ಮಾಡುತ್ತಿರುವದನ್ನು ಗುರುತಿಸಿ ಕಜಾಪ ಜಿಲ್ಲಾ ಅಧ್ಯಕ್ಷ ಮಂಜುನಾಥ ಜಿ. ಗೊಂಡಬಾಳರನ್ನು ಇದೇ ವೇಳೆ ಸನ್ಮಾನಿಸಲಾಯಿತು. ಈ ಸಂದರ್ಭದಲ್ಲಿ ನಾಡೋಜ ಸುಕ್ರಿ ಬೊಮ್ಮೆಗೌಡ, ಡಾ|| ಕನಕತಾರಾ, ಟ. ಕೆ. ಹೆಗಡೆ, ಕಜಾಪ ರಾಜ್ಯ ಅಧ್ಯಕ್ಷ ಟಿ. ಕೆ. ಗೌಡ, ರಾಜ್ಯ ಕಾರ್ಯಾಧ್ಯಕ್ಷ ಡಾ|| ಎಸ್. ಬಾಲಾಜಿ, ರಾಜ್ಯ ಕಾರ್ಯದರ್ಶಿ ವಿಠ್ಠಲ ಪೇರುಮನೆ, ಜಾನಪದ ವಿದ್ವಾಂಸ ಡಾ|| ಬಸವರಾಜ ದೇವರನೆಲ್ಲಿಸರ ಇತರರು ಇದ್ದರು.

Please follow and like us:
error