​ ಸುಳ್ಳು ಜಾಹಿರಾತುಗಳಿಗೆ ಮೋಸಹೋಗಬಾರದು-ಏಕತಾ ಎಚ್.ಡಿ.


ಕೊಪ್ಪಳದ ಗ್ರಾಹಕರು ಟಿ.ವಿ. ಮಾಧ್ಯಮ ಸೇರಿದಂತೆ ವಿವಿಧ ಮಾಧ್ಯಮಗಳಲ್ಲಿ ಬರುವ ಸುಳ್ಳು ಜಾಹೀರಾತುಗಳನ್ನು ನೋಡಿ ಅದರಲ್ಲಿ ತೋರಿಸುವ ವಸ್ತುಗಳನ್ನು ಕೊಂಡು ಮೋಸಹೋಗಬಾರದು, ಹಾಗೊಂದು ವೇಳೆ ಮೋಸ ಹೋದರೆ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದು ಎಂದು ಕೊಪ್ಪಳ ಜಿಲ್ಲಾ ಗ್ರಾಹಕರ ವ್ಯಾಜ್ಯಗಳ ಪರಿಹಾರ ವೇದಿಕೆಯ ಅಧ್ಯಕ್ಷೆ ಏಕತಾ ಎಚ್.ಡಿ ಹೇಳಿದರು. ಕೊಪ್ಪಳ ನಗರದ ಪ್ರಥಮ ದರ್ಜೆ ಕಾಲೇಜಿನಲ್ಲಿ ಶುಕ್ರವಾರ ಹಮ್ಮಿಕೊಳ್ಳಲಾಗಿದ್ದ ರಾಷ್ಟ್ರೀಯ ಗ್ರಾಹಕರ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.

ಕೊಪ್ಪಳ ಜಿಲ್ಲೆಯ ಗ್ರಾಹಕರಿಗೆ ಗ್ರಾಹಕರ ರಕ್ಷಣಾ ಕಾಯ್ದೆ 1986 ರ ಕುರಿತು ಹೆಚ್ಚಿನ ಜಾಗೃತಿ ಮೂಡಿಸಬೇಕಿದೆ.  ಜಿಲ್ಲೆಯ ಬಹುತೇಕ ಜನರಿಗೆ ಗ್ರಾಹಕರ ವೇದಿಕೆ ಇರುವುದೇ ಗೊತ್ತಿಲ್ಲ, ಆದ್ದರಿಂದ ಈ ಕುರಿತು ವಿವಿಧ ಇಲಾಖೆ ಹಾಗೂ ಸಂಘ ಸಂಸ್ಥೆಗಳ ಮೂಲಕ ಜಾಗೃತಿ ಮೂಡಿಸಿಬೇಕು.  ಗ್ರಾಹಕರು ಮೂಢನಂಬಿಕೆ ಹಾಗೂ ಇತರೆ ಜಾಹೀರಾ ತುಗಳಿಂದ ಮೊಸ ಹೋಗುವುದನ್ನು ತಡೆಯಬೇಕಿದೆ.  ಗ್ರಾಹಕರು ಖರೀದಿಸುವ ಯಾವುದೇ ವಸ್ತು ಅಥವಾ ಮನೆ, ನಿವೇಶನ ಖರೀದಿಯಲ್ಲಿ ಹಾಗೂ ಡಾಕ್ಟರ್‍ಗಳಿಂದ, ಮೆಡಿಕಲ್ ಸೇವೆಗಳಿಂದ ಮೋಸಕ್ಕೆ ಬಲಿಯಾಗಿದ್ದರೆ ಕೂಡಲೇ ಗ್ರಾಹಕರ ವೇದಿಕೆಯಲ್ಲಿ ದೂರು ದಾಖಲಿಸಿ ನ್ಯಾಯ ಪಡೆಯಬಹುದು. ಆದ್ದರಿಂದ ಪ್ರತಿಯೊಬ್ಬರೂ ಗ್ರಾಹಕರ ವೇದಿಕೆಯ ಕುರಿತು ಮಾಹಿತಿ ಪಡೆದುಕೊಳ್ಳಬೇಕು ಎಂದು ಹೇಳಿದರು.

 ಕೊಪ್ಪಳ ಜಿಲ್ಲಾ ಗ್ರಾಹಕರ ವೇದಿಕೆ ಸದಸ್ಯೆ ಸುಜಾತಾ ಅಕ್ಕಸಾಲಿ, ಕಾನೂನು ಮಾಪನ ಶಾಸ್ತ್ರ ಇಲಾಖೆ ಸಹಾಯಕ ನಿಯಂತ್ರಕರಾದ ಅಮೃತಾ ಚವ್ಹಾಣ, ಗ್ರಾಹಕರ ವೇದಿಕೆ ಸಹಾಯಕ ರಿಜಿಸ್ಟ್ರಾರ್ ಅಮರ್‍ದೀಪ್, ರಾಘವೇಂದ್ರ ಕುಲಕರ್ಣಿ  ಉಪಸ್ಥಿತರಿದ್ದರು.

Please follow and like us:

Leave a Reply