೮೩ ನೇ ಬೆಳಕಿನೆಡೆಗೆ ಮಾಸಿಕ ಕಾರ್ಯಕ್ರಮ

ಕೊಪ್ಪಳ: ನಗರದ ಶ್ರೀಗವಿಮಠದಲ್ಲಿ ಪ್ರತಿ ಅಮವಾಸ್ಯೆಯ ದಿನದಂದು ಜರುಗುವಂತಹ ಬೆಳಕಿನಡೆಗೆ ಮಾಸಿಕ ಕಾರ್ಯಕ್ರಮವು ದಿನಾಂಕ ೦೪-೦೭-೨೦೧೬ ರಂದು ಸೋಮವಾರ ಸಂಜೆ ೬.೩೦ ಕ್ಕೆ ಶ್ರೀಮಠದ ಕೆರೆಯ ದಡದಲ್ಲಿ ಜರುಗುವದು.
ಮುಖ್ಯ ಅತಿಥಿಗಳಾಗಿ ಸಿದ್ಧಲಿಂಗದೇವರು ಉಪನ್ಯಾಸ ಮಾಡಲಿದ್ದಾರೆ. ಅಧ್ಯಕ್ಷತೆ ಎಸ್.ಎಲ್ ಮಾಲಿಪಾಟೀಲ ನಿವೃತ್ತ ಪ್ರಾಚಾರ್ಯರು ವಹಿಸಿವರು. ಶ್ರೀ ಯು ರಾಮಚಂದ್ರಪ್ಪ ಸಾ ಭಾಗ್ಯನಗರ ಇವರಿಂದ ಸಂಗೀತ ಸೇವೆಯಿದೆ. ಕಾರ್ಯಕ್ರಮದ ಭಕ್ತಿ ಸೇವೆಯನ್ನು ಶ್ರೀಗವಿಸಿದ್ಧೇಶ್ವರ ಆಯುರ್ವೆದ ಕಾಲೇಜಿನ ವೈದ್ಯರಾದ ಡಾ. ಗೌತಮಿ ಇವರು ತಮ್ಮ ಮಾತೋಶ್ರೀಗಳಾದ ಶ್ರೀಮತಿ ಗೀತಾ ಶ್ರೀಪಾದ ದೇಸಾಯಿ ಹೆಸರಿನಲ್ಲಿ ವಹಿಸಿದ್ದಾರೆ. ಸದ್ಬಕ್ತರು ಈ ಕಾರ್ಯಕ್ರಮಕ್ಕೆ ಆಗಮಿಸಬೇಕೆಂದು ಶ್ರೀಗವಿಮಠದ ಪ್ರಕಟಣೆ ತಿಳಿಸಿದೆ.

Leave a Reply