೨೧ ರಂದು ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ.

ಕೊಪ್ಪಳ, ೨೦- ನಗರದ ಪ್ರಶಾಂತ ಕಾಲೋನಿಯಲ್ಲಿ ಶ್ರೀವಿಠ್ಠಲಕೃಷ್ಣ ದೇವಸ್ಥಾನದಲ್ಲಿ ಶ್ರೀಹನುಮ ಜಯಂತಿ ನಿಮಿತ್ಯ ೨೧ ಹಾಗೂ ೨೨ ರಂದು ವಿವಿಧ ಧಾರ್ಮಿಕ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಶ್ರೀನಿವಾಸ ಕಲ್ಯಾಣೋತ್ಸವ  ೨೧ ರಂದು ಗುರುವಾರ ಸಂಜೆ ೬ ಕ್ಕೆ ಶ್ರೀ ಶ್ರೀನಿವಾಸ ಕಲ್ಯಾಣೋತ್ಸವ ಜರುಗಲಿದ್ದು, ಬೆಳಿಗ್ಗೆ ಕಣ್ವಮಠದ ಶ್ರೀ ವಿದ್ಯಾವಾರಿಧಿತೀರ್ಥ ಶ್ರೀಗಳ ಸಾಮೂಹಿಕ ಪಾದಪೂಜೆ, ಮಹಾಮಂಗಳಾರತಿ ಸೇರಿದಂತೆ ಧಾರ್ಮಿಕ ಕಾರ್ಯಕ್ರಮಗಳು ಹಾಗೂ ಕರ್ಕಿಹಳ್ಳಿ ಸಂತ ಶ್ರೇಷ್ಠ ಸುರೇಶ ಪಾಟೀಲ ಕನವಳ್ಳಿ ಇವರಿಂದ ಪ್ರವಚನ ಜರುಗಲಿದೆ. ಶುಕ್ರವಾರ ೨೨ ರಂದು ಶ್ರೀಹನುಮ ಜಯಂತಿ ಅಂಗವಾಗಿ ಶ್ರೀಮುಖ್ಯ ಪ್ರಾಣದೇವರಿಗೆ ಅಭಿಷೇಕ ಶ್ರೀಗಳಿಂದ ಬೆಣ್ಣೆ ಅಲಂಕಾರ, ಪವಮಾನ ಹೋಮ ಸೇರಿದಂತೆ ಅನೇಕ ಕಾರ್ಯಕ್ರಮಗಳು ಜರುಗಲಿದೆ. ಸರ್ವರು ಆಗಮಿಸಿ ಯಶಸ್ವಿ ಗೊಳಿಸುವಂತೆ ಶ್ರೀಯಜ್ಞವಲ್ನ್ಯ ಪ್ರತಿಷ್ಟಾನದ ಅಧ್ಯಕ್ಯ ರಮೇಶ ಜಹಗೀರದಾರ ಕೋರಿದ್ದಾರೆ.

Please follow and like us:
error

Related posts

Leave a Comment