೧೭ ರಂದು ಚಾರ್ಲಿ ಚಾಪ್ಲಿನ್ ಸಿನಿಮಾ ಪ್ರದರ್ಶನ ಹಾಗೂ ಹುಟ್ಟುಹಬ್ಬ.

ಕೊಪ್ಪಳ-15 – ಪ್ರತಿ ತಿಂಗಳ ಮೂರನೇ ಭಾನುವಾರ ಸದಭಿರುಚಿಯ ಸಿನಿಮಾ ಪ್ರದರ್ಶನ ಏರ್ಪಡಿಸುತ್ತಿರುವ ಸಿನಿಬಳಗವು ಏಪ್ರಿಲ್ ೧೭ ರಂದು ಸಂಜೆ ೫.೩೦ಕ್ಕೆ ಇಲ್ಲಿನ ಸರಕಾರಿ ಪ್ರಥಮ ದರ್ಜೆ ಕಾಲೇಜಿನ ಮೊದಲ ಮಹಡಿಯ ಸಭಾಂಗಣದಲ್ಲಿ ವಿಶ್ವ ಸಿನಿಮಾ ರಂಗದ ಧೃವತಾರೆ ಚಾರ್ಲಿ ಚಾಪ್ಲಿನ್ ಅವರ ಸಿನಿಮಾ ಪ್ರದರ್ಶನ ಏರ್ಪಡಿಸಿದೆ. ಜೊತೆಗೆ ಇದೇ ತಿಂಗಳಲ್ಲಿ ಇರುವ ಚಾರ್ಲಿ ಚಾಪ್ಲಿನ್ ಅವರ ಜನುಮದಿನವನ್ನು ಆಚರಿಸಲಾಗುವುದು. ಚಾರ್ಲಿ ಚಾಪ್ಲಿನ್ ಅವರ ಬಗ್ಗೆ ಸಾಕಷ್ಟು ಅಧ್ಯಯನ15KPL_01 ನಡೆಸಿರುವ ಖ್ಯಾತ ಕಾದಂಬರಿಕಾರ ಕುಂ.ವೀ.ಯವರು ಸಂವಾದದಲ್ಲಿ ನೋಡುಗರೊಂದಿಗೆ ಸಂವಾದ ನಡೆಸುವರು. ಈ ತಿಂಗಳ ಕಾರ್ಯಕ್ರಮದ ಉಸ್ತುವಾರಿಯನ್ನು ಸಿನಿಬಳಗದ ಸದಸ್ಯರಾದ ಮಂಜುನಾಥ ಗೊಂಡಬಾಳ, ವೀರೇಶ ಮಹಾಂತಯ್ಯನಮಠ, ಶಿವಾನಂದ ಹೊದ್ಲೂರು, ಪ್ರಾಣೇಶ ಪೂಜಾರ ಹಾಗೂ ವಿಜಯ್ ಗೊಂಡಬಾಳ ನಿರ್ವಹಿಸುವರು. ಆಸಕ್ತರು ಸಿನಿಮಾ ಪ್ರದರ್ಶನ ಹಾಗೂ ಸಂವಾದದಲ್ಲಿ ಪಾಲ್ಗೊಳ್ಳುವಂತೆ ಸಿನಿಬಳಗದ ಕೋರಿದೆ.

Please follow and like us:
error