ಹೊಲಿಗೆ ತರಬೇತಿಗಾಗಿ ಅರ್ಜಿ ಆಹ್ವಾನ.

ಕೊಪ್ಪಳ, ಏ. ೨೨ ಯಲಬುರ್ಗಾ ತಾಲೂಕು ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ ಕಾರ್ಯಾಲಯದಿಂದ ಪ್ರಸಕ್ತ ಸಾಲಿಗೆ ತಾಲೂಕಿನ ಅರ್ಹ ಮಹಿಳಾ ಅಭ್ಯರ್ಥಿಗಳಿಗೆ ಹೊಲಿಗೆ ತರಬೇತಿಗಾಗಿ ಅರ್ಜಿ ಆಹ್ವಾನಿಸಲಾಗಿದೆ. ಹಿಂದುಳಿದ ವರ್ಗಗಳ ಹಾಗೂ ಅಲ್ಪಸಂಖ್ಯಾತ ಕಲ್ಯಾಣ ಇಲಾಖೆಯ ವತಿಯಿಂದ ಪಟ್ಟಣದಲ್ಲಿರುವ ಮಹಿಳಾ ಹೊಲಿಗೆ ತರಬೇತಿ ಕೇಂದ್ರದಲ್ಲಿ ಮಹಿಳೆಯರಿಗೆ ಹೊಲಿಗೆ ತರಬೇತಿ ನೀಡಲಾಗುತ್ತಿದ್ದು ಆಸಕ್ತರು ಅರ್ಜಿಯನ್ನು ತಾಲೂಕ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿಗಳ bloggerPlusಕಛೇರಿಯಲ್ಲಿ ಉಚಿತವಾಗಿ ಪಡೆದು ಮೇ.೧೦ ರೊಳಗಾಗಿ ಸಲ್ಲಿಸಬೇಕು. ತರಬೇತಿಗೆ ೨೦ ಅಭ್ಯರ್ಥಿಗಳನ್ನು ಆಯ್ಕೆ ಮಾಡಲಾಗುತ್ತದೆ. ಆಯ್ಕೆಯಾದ ಪ್ರತಿ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.೩೦೦ ತರಬೇತಿ ಭತ್ಯೆ ನೀಡಲಾಗುತ್ತದೆ, ಪ್ರ-೧ ಹಾಗೂ ಪ.ಜಾತಿ, ಪ.ಪಂಗಡ ಹೊರತುಪಡಿಸಿ ಇತರ ಪ್ರವರ್ಗಕ್ಕೆ ಸೇರಿದ ಅಭ್ಯರ್ಥಿಗಳ ಆದಾಯ ರೂ.೪೪೫೦೦ ಮೀರಿರಬಾರದು. ಅರ್ಜಿ ಸಲ್ಲಿಸಲು ಕನಿಷ್ಟ ೭ ನೇ ತರಗತಿ ಕಡ್ಡಾಯವಾಗಿ ಪಾಸಾಗಿರಬೇಕು, ವಯೋಮಿತಿ ೧೮ ರಿಂದ ೩೫ ವರ್ಷದೊಳಗಿರಬೇಕು, ಯಾವುದೇ ಶಾಲಾ ಕಾಲೇಜುಗಳಲ್ಲಿ ಅಭ್ಯರ್ಥಿಗಳು ಪ್ರವೇಶ ಪಡೆದಿರಬಾರದು, ತರಬೇತಿ ಅಂತ್ಯದಲ್ಲಿ ಪರೀಕ್ಷೆ ಏರ್ಪಡಿಸಲಾಗುವುದು ಅನುತ್ತೀರ್ಣರಾದ ಅಭ್ಯರ್ಥಿಗಳು ೨ ವರ್ಷದೊಳಗೆ ಮತ್ತೊಮ್ಮೆ ಪರೀಕ್ಷೆಗೆ ಹಾಜರಾಗಲು ಅವಕಾಶವಿರುತ್ತದೆ. ಅಂಗವಿಕಲರಿಗೂ ಅವಕಾಶವಿದ್ದು, ಅಂಗವಿಕಲತೆ ಪ್ರಮಾಣ ಪತ್ರ ಲಗತ್ತಿಸಬೇಕು, ಈಗಾಗಲೇ ತರಬೇತಿ ಪಡೆದವರು ಅರ್ಜಿ ಸಲ್ಲಿಸಲು ಅನರ್ಹರು. ತರಬೇತಿ ಯಶಸ್ವಿಯಾಗಿ ಮುಗಿಸಿ ಉತ್ತೀರ್ಣರಾದ ಅಭ್ಯರ್ಥಿಗಳಿಗೆ ಉಚಿತವಾಗಿ ಒಂದು ಹೊಲಿಗೆ ಯಂತ್ರ ಹಾಗೂ ಪ್ರಮಾಣ ಪತ್ರ ವಿತರಿಸಲಾಗುವುದು. ನಿಗದಿತ ಅರ್ಜಿಯೊಂದಿಗೆ ಜಾತಿ, ಆದಾಯ ಪ್ರಮಾಣ ಪತ್ರ, ಶೈಕ್ಷಣಿಕ ದಾಖಲಾತಿ, ಅಂಕ ಪಟ್ಟಿ, ಶಾಲಾ ವರ್ಗಾವಣೆ ಪತ್ರಗಳ ದೃಢೀಕರಣದ ನಕಲು ಪ್ರತಿ ಲಗತ್ತಿಸಿ ಮೇ.೧೦ ರೊಳಗಾಗಿ ಸಲ್ಲಿಸಬೇಕು ಎಂದು ಯಲಬುರ್ಗಾ ತಾಲೂಕ ಹಿಂದುಳಿದ ವರ್ಗಗಳ ವಿಸ್ತರಣಾಧಿಕಾರಿ ತಿಳಿಸಿದ್ದಾರೆ.

Please follow and like us:
error