You are here
Home > Koppal News-1 > ಹೈ–ಕ ನಿವಾಸ # 371 ನಾಟಕ ಪ್ರದರ್ಶನ

ಹೈ–ಕ ನಿವಾಸ # 371 ನಾಟಕ ಪ್ರದರ್ಶನ

hyka_nivas
ಅಶೋಕ ಸರ್ಕಲ್‌ ನಾಟಕ ತಂಡದ ವತಿಯಿಂದ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಡಿಸೆಂಬರ್‌ 9 ಮತ್ತು 10ರಂದು ಸಂಜೆ 6.30ಕ್ಕೆ ಕೊಪ್ಪಳದ ಸಾಹಿತ್ಯ ಭವನದಲ್ಲಿ ಹೈ–ಕ ನಿವಾಸ # 371 ನಾಟಕ ಪ್ರದರ್ಶನ ನಡೆಯಲಿದೆ. ನಗರದ ರಾಮಕೃಷ್ಣ ವಿವೇಕಾಶ್ರಮದ ಚೈತನ್ಯಾನಂದ ಸ್ವಾಮೀಜಿ ಉದ್ಘಾಟನಾ ಸಮಾರಂಭದ ಸಾನಿಧ್ಯ ವಹಿಸಲಿದ್ದಾರೆ. ಡಿ. 9ರಂದು ನಾಟಕ ಪ್ರದರ್ಶನಕ್ಕೂ ಮುನ್ನ  ಸಂಜೆ 5ರಿಂದ ಶಿಕ್ಷಕರ ಕಲಾ ಬಳಗದ ಕಲಾವಿದರಿಂದ ‘ಗಾನ ಸುರಭಿ’ ಗೀತಗಾಯನ ನಡೆಯಲಿದೆ. ಎಲ್ಲ ಕಾರ್ಯಕ್ರಮಗಳಿಗೂ ಉಚಿತ ಪ್ರವೇಶವಿದೆ ಎಂದು ತಂಡದ ಸಂಚಾಲಕ ಪ್ರಕಾಶಗೌಡ ಎಸ್‌.ಯು. ತಿಳಿಸಿದ್ದಾರೆ.
ಹೈದರಾಬಾದ್‌ ಕರ್ನಾಟಕದ ಜನಜೀವನ, ನೋವು ನಲಿವು, ಸಮಸ್ಯೆಗಳನ್ನು ನಾಟಕದಲ್ಲಿ ಚರ್ಚಿಸಲಾಗಿದೆ. ಶರತ್‌ ಹೆಗ್ಡೆ ಕಡ್ತಲ ಅವರು ರಚಿಸಿದ ನಾಟಕವನ್ನು ಲಕ್ಷ್ಮಣ ಪಿರಗಾರ ನಿರ್ದೇಶಿಸಿದ್ದಾರೆ. ಮಾರುತಿ ಚಿತ್ರಗಾರ ಮತ್ತು ಬಳಗದವರು ಸಂಗೀತ ನೀಡಿದ್ದಾರೆ. ಸ್ಥಳೀಯ ಕಲಾವಿದರೇ ಅಭಿನಯಿಸಿರುವ ನಾಟಕ ಪ್ರದರ್ಶನಕ್ಕೆ ರಂಗಾಸಕ್ತರು ಹೆಚ್ಚಿನ ಸಂಖ್ಯೆಯಲ್ಲಿ ಆಗಮಿಸಬೇಕು .

ವಿಶ್ವಾಸದಿಂದ
–ಶರತ್‌ ಹೆಗ್ಡೆ ಕಡ್ತಲ

Leave a Reply

Top