ಹೆಂಡತಿಯನ್ನು ಕೊಂದು ಶವದೊಂದಿಗೆ ರಾತ್ರಿ ಪೂರಾ ಕಳೆದ.. ಸತ್ತಂತೆ ನಟಿಸಿದ ನಟಭಯಂಕರ

koppal_murder_case_wife_murdered_by_husbond

ಪತ್ನಿಯನ್ನು ಕೊಂದು ಸಹಜಸಾವು ಎಂಬಂತೆ ಬಿಂಬಿಸಲು ಶವದೊಂದಿಗೆ ಪತಿ ಮಲಗಿಕೊಂಡಿದ್ದ

ಘಟನೆ ಕೊಪ್ಪಳದ ಕುಷ್ಟಗಿ ತಾಲೂಕಿನ ತಳವಗೇರಾ ಗ್ರಾಮದಲ್ಲಿ ನಡೆದಿದೆ. ಶಿವಲೀಲಾ (20) ಎಂಬ ಗೃಹಿಣಿಯೇ ಪತಿ ಹನುಮಂತಪ್ಪ ಮ್ಯಾಗಲಡೊಕ್ಕಿ ಎಂಬಾತನಿಂದ ಕೊಲೆಗೀಡಾಗಿರುವ ದುರ್ದೈವಿ. ಕೊಲೆಯಾಗಿರುವ ಶಿವಲೀಲಾಳನನ್ನು ಕುಷ್ಟಗಿ ತಾಲೂಕಿನ ಲಿಂಗದಳ್ಳಿ ಗ್ರಾಮದ ಹನುಮಂತಪ್ಪ ಮ್ಯಾಗಲಡೊಕ್ಕಿಯೊಂದಿಗೆ ಕಳೆದ 6 ತಿಂಗಳ ಹಿಂದೆಯಷ್ಟೆ ಮದುವೆ ಮಾಡಿಕೊಡಲಾಗಿತ್ತು. ಇತ್ತೀಚಿಗೆ ಶಿವಲೀಲಾ ತನ್ನ ತವರುಮನೆ ತಳುವಗೇರಾ ಗ್ರಾಮಕ್ಕೆ ಬಂದಿದ್ದಳು. ರಾತ್ರಿ ಪತಿ ಹನುಮಂತಪ್ಪ ಹೆಂಡತಿ ತವರುಮನೆ ತಳುವಗೇರಾ ಗ್ರಾಮದ ಮನೆಗೆ ಬಂದಿದ್ದಾನೆ. ತಡರಾತ್ರಿ ಪತ್ನಿ ಶಿವಲೀಲಾಳನ್ನು ಉಸಿರುಗಟ್ಟಿಸಿ ಕೊಲೆ ಮಾಡಿದ್ದಾನೆ. ಯಾರಿಗೂ ಅನುಮಾನ ಬಾರದ ರೀತಿಯಲ್ಲಿ ಇಡೀ ರಾತ್ರಿ ಶವದೊಂದಿಗೆ ನಿದ್ರೆ ಮಾಡಿದ್ದಾನೆ. ನಂತರ ಅವಳ ಮೇಲೆ ಪಕ್ಕದಲ್ಲಿಯೇ ಶೇಖರಿಸಿಡಲಾಗಿದ್ದ ಚೀಲಗಳನ್ನು ಬೀಳಿಸಿದ್ದಾನೆ.  ಜನರೆಲ್ಲ ಬಂದು ನೋಡುತ್ತಿದ್ದರೂ ಸಹ ತಾನೂ ಸತ್ತಂತೆ ನಟಿಸಿದ್ದಾನೆ. ಕಣ್ಣಿಗೆ ಖಾರ ತುಂಬಿದ್ದಾರೆ. ನೀರು ಹಾಕಿದರೂ ಎದ್ದೇಳದ ನಟಭಯಂಕರ ಪೊಲೀಸ್ ನಾಯಿ ಎಳೆದಾಡಿದ ಮೇಲೆ ಎಚ್ಚರಗೊಂಡಂತೆ ನಾಟಕವಾಡಿದ್ದಾನೆ. ವರದಕ್ಷಿಣೆಗಾಗಿ ತಮ್ಮ ಮಗಳು ಶಿವಲೀಲಾಳನ್ನು ಕೊಲೆ ಮಾಡಿದ್ದಾನೆ. ಅದನ್ನು ಸಹಜ ಸಾವು ಎಂದು ಬಿಂಬಿಸಲು ಪ್ರಯತ್ನ ಮಾಡಿದ್ದಾನೆ ಎಂದು ಮೃತ ಶಿವಲೀಲಾಳ ಪೋಷಕರು ಆರೋಪಿಸಿದ್ದಾರೆ. ಸ್ಥಳಕ್ಕೆ ಕುಷ್ಟಗಿ ಠಾಣೆಯ ಪೊಲೀಸರು ಭೇಟಿ ನೀಡಿ ಪರಿಶೀಲನೆ ನಡೆಸಿದರು. ಅಲ್ಲದೆ, ಆರೋಪಿ ಪತಿ ಹನುಮಂತಪ್ಪ ಮ್ಯಾಗಲಡೊಕ್ಕಿಯನ್ನು ವಶಕ್ಕೆ ತೆಗೆದುಕೊಂಡು ಪ್ರಕರಣ ದಾಖಲಿಸಿಕೊಂಡಿದ್ದಾರೆ.

Please follow and like us:
error

Related posts

Leave a Comment