You are here
Home > Koppal News-1 > ಹೂಳೆತ್ತುವ ಸ್ಥಳಕ್ಕೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ ಬೇಟಿ

ಹೂಳೆತ್ತುವ ಸ್ಥಳಕ್ಕೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ ಬೇಟಿ

ತುಂಗಭದ್ರಾ ಜಲಾಶಯ ಹೂಳೆತ್ತುವ ಸ್ಥಳಕ್ಕೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ ಬೇಟಿ

cv-chandrashekar-shilt-hospet-damಕೊಪ್ಪಳ: ತುಂಗಭದ್ರಾ ಜಲಾಶಯ ಹೂಳೆತ್ತುವ ಸ್ಥಳಕ್ಕೆ ಬಿಜೆಪಿ ರಾಷ್ಟ್ರೀಯ ಪರಿಷತ್ ಸದಸ್ಯ ಸಿ.ವಿ. ಚಂದ್ರಶೇಖರ ಗುರುವಾರ ಬೇಟಿ ನೀಡಿ ರೈತರಿಗೆ ಪ್ರೋತ್ಸಾಹಧನ ನೀಡಿ ನಾವು ನಿಮ್ಮೊಂದಿಗೆ ಇದ್ದೇವೆ. ನಿಮ್ಮ ಯಾವುದೇ ಸಮಸ್ಯೆಗೆ ಸದಾನಾವು ನಮ್ಮ ಪಕ್ಷ ನಿಮ್ಮ ಬೆನ್ನೆಲುಬಾಗಿರುತ್ತದೆ ಎಂದರು. ಯಾವುದೇ ಕಾರಣಕ್ಕೂ ರೈತರು ಹಿಂಜೆರೆಯುವ ಅವಶ್ಯಕತೆ ಇಲ್ಲ. ಪ್ರಸ್ತುತ ಸರಕಾರವು ರೈತರನ್ನು ಮರೆತಿದ್ದು, ರೈತ ವಿರೋಧಿ ನೀತಿಯನ್ನು ಅನುಸರಿಸುತ್ತಿದೆ. ರೈತರ ಗೊಳಾಟವನ್ನು ಮತ್ತು ಸಮಸ್ಯೆಗಳನ್ನು ಆಲಿಸುವಲ್ಲಿ ಸಂಪೂರ್ಣ ವಿಫಲವಾಗಿದೆ. ದೇಶದ ಬೆನ್ನುಲುಬಾಗಿರುವ ರೈತನನ್ನು ಉಳಿಸಕೊಳ್ಳುವಲ್ಲಿ ಇಂದು ಆಥನ ಕುಟುಂಬ ತುಂಬಾ ತೊಂದರೆಯನ್ನು ಅನುಭವಿಸುತ್ತಿದೆ. ರೈತರ ನೋವು ನಲಿವುಗಳಿಗೆ ನಮ್ಮ ಪಕ್ಷವು ಸದಾ ಜೊತೆಯಲ್ಲಿರುತ್ತದೆ ಎಂದರು.
ಈ ಸಂದರ್ಭದಲ್ಲಿ ಬಿಜೆಪಿ ರಾಜ್ಯ ಮಹಿಳಾ ಅಧ್ಯಕ್ಷೆ ಭಾರತಿ ಶೆಟ್ಟಿ, ಬಿಜೆಪಿ ಮಹಿಳಾ ರಾಜ್ಯ ಕಾರ್ಯದರ್ಶಿ ಸುಜಾತಾ ಪಾಟೀಲ, ಬಳ್ಳಾರಿ ಜಿಲ್ಲೆಯ ಮಾಜಿ ಸಂಸದೆ ಶಾಂತಮ್ಮ, ಬಿಜೆಪಿ ನಗರ ಪ್ರಾಧಿಕಾರದ ಮಾಜಿ ಅಧ್ಯಕ್ಷ ಅಪ್ಪಣ್ಣ ಪದಕಿ, ಬಿಜೆಪಿ ಜಿಲ್ಲಾ ರೈತ ಮೋರ್ಛಾ ಪ್ರಧಾನ ಕಾರ್ಯುದರ್ಶಿ ಜಗದೀಶಗೌಡ ತೆಗ್ಗಿನಮನಿ, ಬಿಜೆಪಿ ನಗರ ಮಂಡಳ ಪ್ರಧಾನ ಕಾಯದರ್ಶಿ ದೇವರಾಜ ಹಾಲಸಮುದ್ರಾ, ಶರಣು ಪಾಟೀಲ್, ಬಿಜೆಪಿ ಮಹಿಳಾ ಪಮುಖರು, ಕಾರ್ಯಕರ್ತರು, ರೈತರು ಉಪಸ್ಥಿತರಿದ್ದರು.

Leave a Reply

Top