ಹಿರೇಹಳ್ಳ ಜಾಕ್‌ವೆಲ್‌ಗೆ ಜಿಲ್ಲಾಧಿಕಾರಿ ಭೇಟಿ- ಬೋರ್‌ವೆಲ್ ಕೊರೆಯಿಸಲು ಸೂಚನೆ.

photo 4ಕೊಪ್ಪಳ ಮೇ. ೦೨ ಹಿರೇಹಳ್ಳ ಬಳಿ ಬೋರ್‌ವೆಲ್‌ಗಳನ್ನು ಕೊರೆಯಿಸಿ, ಯಲಬುರ್ಗಾ ಪಟ್ಟಣಕ್ಕೆ ನೀರು ಪೂರೈಸಲು ಅಗತ್ಯ ಕ್ರಮ ಕೈಗೊಳ್ಳುವಂತೆ ಜಿಲ್ಲಾಧಿಕಾರಿ ಎಂ. ಕನಗವಲ್ಲಿ ಅವರು ಅಧಿಕಾರಿಗಳಿಗೆ ಸೂಚನೆ ನೀಡಿದರು. ಹಿರೇಹಳ್ಳ ಜಲಾಶಯದ ಬಳಿಯ ಜಾಕ್‌ವೆಲ್ ಪ್ರದೇಶಕ್ಕೆ ಸೋಮವಾರದಂದು ವಿವಿಧ ಅಧಿಕಾರಿಗಳೊಂದಿಗೆ ಭೇಟಿ ನೀಡಿದ ಅವರು, ಯಲಬುರ್ಗಾ ಪಟ್ಟಣಕ್ಕೆ ಹಿರೇಹಳ್ಳ ಜಾಕ್‌ವೆಲ್‌ನಿಂದ ನೀರು ಪೂರೈಕೆ ಮಾಡಲಾಗುತ್ತಿತ್ತು. ಆದರೆ ಇದೀಗ ಜಾಕ್‌ವೆಲ್ ಬಳಿ ನೀರು ಇಲ್ಲದ ಕಾರಣ, ಯಲಬುರ್ಗಾ ಪಟ್ಟಣಕ್ಕೆ ನೀರು ಪೂರೈಕೆಯಲ್ಲಿ ವ್ಯತ್ಯಯವಾಗುತ್ತಿದೆ. ಹಿರೇಹಳ್ಳ ಬಳಿ ಅಗತ್ಯವಿರುವಷ್ಟು ಬೋರ್‌ವೆಲ್‌ಗಳನ್ನು ಕೊರೆಯಿಸಿ, ಇದರಿಂದ ಲಭ್ಯವಾಗುವ ನೀರನ್ನು ಪೈಪ್‌ಲೈನ್ ಮೂಲಕ ಜಾಕ್‌ವೆಲ್‌ಗೆ ಸಂಪರ್ಕ ಕಲ್ಪಿಸಬೇಕು. ನಂತರ ಜಾಕ್‌ವೆಲ್‌ನಿಂದ ಸದ್ಯ ಲಭ್ಯವಿರುವ ನೀರಿನ ಸಂಪರ್ಕ ಜಾಲದ ಮೂಲಕ ಯಲಬುರ್ಗಾ ಪಟ್ಟಣಕ್ಕೆ ನೀರು ಪೂರೈಕೆ ಮಾಡಲು ಅಗತ್ಯ ಕ್ರಮ ಕೈಗೊಳ್ಳುವಂತೆ ಅಧಿಕಾರಿಗಳಿಗೆ ಸೂಚನೆ ನೀಡಿದರು. ಕರ್ನಾಟಕ ನೀರಾವರಿ ನಿಗಮದ ಸಹಾಯಕ ಕಾರ್ಯಪಾಲಕ ಅಭಿಯಂತರ ಗಂಗಾಧರ್, ಕರ್ನಾಟಕ ನಗರ ನೀರು ಸರಬರಾಜು ಮಂಡಳಿ ಸಹಾಯಕ ಕಾರ್ಯಪಾಲಕ ಅಭಿಯಂತರ ಎ.ಪಿ. ರೆಡ್ಡಿ, ಯಲಬುರ್ಗಾ ಪಟ್ಟಣ ಪಂಚಾಯತಿ ಮುಖ್ಯಾಧಿಕಾರಿ ನಾಗೇಶ್, ನಗರಾಭಿವೃದ್ಧಿ ಕೋಶದ ಸಹಾಯಕ ಕಾರ್ಯಪಾಲಕ ಅಭಿಯಂತರ ರಾಜಶೇಖರ ಈ ಸಂದರ್ಭದಲ್ಲಿ ಉಪಸ್ಥಿತರಿದ್ದರು.

Leave a Reply