You are here
Home > Koppal News-1 > koppal news > ಸ್ವಾತಂತ್ರ್ಯ ದಿನಾಚರಣೆ : ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಸೂಚನೆ

ಸ್ವಾತಂತ್ರ್ಯ ದಿನಾಚರಣೆ : ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಹೆಸರು ನೋಂದಾಯಿಸಲು ಸೂಚನೆ

agust-15ಕೊಪ್ಪಳ ಜಿಲ್ಲಾ ಕೇಂದ್ರದಲ್ಲಿ ಆ. ೧೫ ಸ್ವಾತಂತ್ರ್ಯ ದಿನಾಚರಣೆ ದಿನದಂದು ಸಂಜೆ ಜರುಗುವ ಸಾಂಸ್ಕೃತಿಕ ಕಾರ್ಯಕ್ರಮಕ್ಕೆ ಪಾಲ್ಗೊಳ್ಳಲು ಬಯಸುವ ಶಾಲಾ, ಕಾಲೇಜುಗಳ ಮುಖ್ಯಸ್ಥರು, ಆ. ೧೦ ರೊಳಗಾಗಿ ಹೆಸರು ನೊಂದಾಯಿಸುವಂತೆ ಕೊಪ್ಪಳ ಕ್ಷೇತ್ರ ಶಿಕ್ಷಣಾಧಿಕಾರಿಗಳು ಸೂಚನೆ ನೀಡಿದ್ದಾರೆ.

ಸ್ವಾತಂತ್ರ್ಯೋತ್ಸವ ದಿನಾಚರಣೆ ಅಂಗವಾಗಿ ಅಂದು ಸಂಜೆ ನಡೆಯುವ ಸಾಂಸ್ಕೃತಿಕ ಕಾರ್ಯಕ್ರಮಗಳಲ್ಲಿ ಶಾಲಾ ಕಾಲೇಜು ವಿದ್ಯಾರ್ಥಿಗಳಿಂದ ಸಾಂಸ್ಕೃತಿಕ ಕಾರ್ಯಕ್ರಮ ನೀಡಲು ಇಚ್ಛಿಸುವವರು ಪ್ರಾಥಮಿಕ ಶಾಲಾ ವಿಭಾಗದವರು ಯಮನೂರಪ್ಪ, ಸಂಗೀತ ಶಿಕ್ಷಕರು, ಸ.ಬಾ.ಹಿ.ಪ್ರಾ.ಶಾಲೆ, ಕೊಪ್ಪಳ ಇವರಿಗೆ ಹಾಗೂ ಪ್ರೌಢಶಾಲೆ/ಕಾಲೇಜು ವಿಭಾಗದವರು ಸದಾಶಿವ ಪಾಟೀಲ್, ಸಂಗೀತ ಶಿಕ್ಷಕರು, ಸರ್ಕಾರಿ ಬಾಲಕಿಯರ ಪ.ಪೂ.ಕಾಲೇಜು, ಕೊಪ್ಪಳ ಇವರಿಗೆ ಆ. ೧೦ ರ ಒಳಗಾಗಿ ಸಲ್ಲಿಸಬೇಕು. ದೇಶಭಕ್ತಿಗೀತೆ, ಜಾನಪದ ಗೀತೆಗಳಿಗೆ ಅವಕಾಶವಿದೆ.
ಕಾರ್ಯಕ್ರಮ ನೀಡುವವರು ಪೂರ್ವಭಾವಿಯಾಗಿ ಆ. ೧೧ ರಂದು ಬೆಳಿಗ್ಗೆ ೧೧ ಗಂಟೆಗೆ ಬಾಲಕಿಯರ ಸರಕಾರಿ ಪ.ಪೂ ಕಾಲೇಜು ಆವರಣದಲ್ಲಿ ಆಯ್ಕೆ ಸಮಿತಿಯ ಮುಂದೆ ಪ್ರದರ್ಶನ ನೀಡಬೇಕು. ನಗರದ ಪ್ರಾಥಮಿಕ/ಪ್ರೌಢಶಾಲೆ, ಕಾಲೇಜು, ಡಿಇಟಿ/ಬಿಇಡಿ ಕಾಲೇಜು ಪ್ರಾಚಾರ್ಯರು/ಮುಖ್ಯೋಪಾದ್ಯಾಯರು ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳಬೇಕು ಎಂದು ಸ್ವಾತಂತ್ರ್ಯ ದಿನಾಚರಣೆ ಸಾಂಸ್ಕೃತಿಕ ಸಮಿತಿಯ ಸದಸ್ಯ ಕಾರ್ಯದರ್ಶಿಯೂ ಆಗಿರುವ ಕ್ಷೇತ್ರ ಶಿಕ್ಷಣಾಧಿಕಾರಿಗಳು ತಿಳಿಸಿದ್ದಾರೆ.

Leave a Reply

Top