ಸೇತುವೆಯಿಂದ 20 ಅಡಿ ಕೆಳಕ್ಕೆ ಬಿದ್ದ ಸವಾರ : ಮಾನವೀಯತೆ ಮೆರೆದ ಯುವಕರು

ಬೈಕ್‌ ಸವಾರನೊಬ್ಬ ಡಿಕ್ಕಿ ಹೊಡೆದ  ರಭಸಕ್ಕೆ ಸೇತುವೆಯಿಂದ 20 ಅಡಿ ಕೆಳಕ್ಕೆ ಬಿದ್ದಿದ್ದಾನೆ. ತೀವ್ರ ರಕ್ತಸ್ರಾವದಲ್ಲಿ ಒದ್ದಾಡುತ್ತಿದ್ದ ಸವಾರನನ್ನು ಕಂಡ ಗಂಗಾವತಿ ನಗರದ ಶಿವಕುಮಾರ ಮಾರೆಣ್ಣ ವಡ್ಡರಹಟ್ಟಿ ಹಾಗೂ ಲಿಂಗರಾಜ  ಎಂಬ ಇಬ್ಬರು ಯುವಕರು ರಕ್ಷಿಸಿದ್ದಾರೆ.  ಕೊಪ್ಪಳ ತಾಲೂಕು ಜಬ್ಬಲಗುಡ್ಡ- ಇಂದರಗಿ ಮಧ್ಯೆ ಇರುವ ರೈಲ್ವೆ ಸೇತುವೆಯ ಮೇಲ್ಭಾಗದಲ್ಲಿರುವ ರಾಜ್ಯ ಹೆದ್ದಾರಿಯಲ್ಲಿ ಈ ಘಟನೆ ನಡೆದಿದೆ. ತೀವ್ರ ಗಾಯಗೊಂಡ ವ್ಯಕ್ತಿಯನ್ನು ಇಂದರಗಿ ಗ್ರಾಮದ ಮಲ್ಲಪ್ಪ ಶಿವಪ್ಪ ಗುರಿಕಾರ ಎಂದು ಗುರುತಿಸಲಾಗಿದೆ. ಯುವಕ ಗುರಿಕಾರ ಇಂದರಗಿಯಿಂದ ಗಂಗಾವತಿಯತ್ತ ಬೈಕ್‌ನಲ್ಲಿ ಬರುತ್ತಿದ್ದಾಗ ರಸ್ತೆಯ ಸುರಕ್ಷತೆಗಾಗಿ ಅಳವಡಿಸಲಾಗಿದ್ದ ಸೇತುವೆಗೆ ಬಲವಾಗಿ ಡಿಕ್ಕಿ ಹೊಡೆದ ಪರಿಣಾಮ ಸುಮಾರು 20 ಅಡಿ ಅಳಕ್ಕೆ ಬಿದ್ದಿದ್ದಾನೆ. ಅಪಘಾತದ ರಭಸಕ್ಕೆ ಯುವಕನ ಒಂದು ಕಾಲು ತುಂಡಾಗಿ ಸೇತುವೆಯ ಮೇಲೆ ಉಳಿದುಕೊಂಡಿದೆ. ಉಳಿದ ದೇಹ 20 ಅಡಿ ಅಳಕ್ಕೆ ಬಿದ್ದು ತೀವ್ರ ರಕ್ತಸ್ರಾವವಾಗಿದೆ. ಕೊಪ್ಪಳಕ್ಕೆ ದ್ವಿಚಕ್ರ ವಾಹನದಲ್ಲಿ ಹೊರಟ್ಟಿದ್ದ ಶಿವಕುಮಾರ ಹಾಗೂ ರೆಡ್ಡಿ, ರಸ್ತೆಯ ಮೇಲೆ ದ್ವಿಚಕ್ರ ವಾಹನ ಹಾಗೂ ಒಂದು ಕಾಲು ಇರುವುದನ್ನು ಗಮನಿಸಿ ಸ್ಥಳಕ್ಕೆ ಹೋಗಿ ನೋಡಿದಾಗಲೇ ವ್ಯಕ್ತಿಯ ದೇಹ 20 ಅಡಿ ಅಳಕ್ಕೆ ಬಿದ್ದಿರುವುದು ಗೊತ್ತಾಗಿದೆ.  ಟೋಲ್‌ಗೇಟ್ ಮತ್ತು 108ರ ಸಂಖ್ಯೆಗೆ ಕರೆ ಮಾಡಿ ಅಂಬುಲೆನ್ಸ್  ಯುವಕರು, ತುಂಡಾಗಿದ್ದ ಕಾಲನ್ನು ಕವರ್‌ನಲ್ಲಿ ಹಾಕಿ ಗಾಯಾಳು ಯುವಕನನ್ನು ಚಿಕಿತ್ಸೆಗಾಗಿ ಕಳಿಸಿದ್ದಾರೆ. ಮುನಿರಾಬಾದ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.koppal-accident-gangavathi-accident (1) koppal-accident-gangavathi-accident (2) koppal-accident-gangavathi-accident (3)

Leave a Reply